ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಇರಲಿ

Last Updated 23 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಭಾರತದಂತಹ ಬಹುಭಾಷೆಯ, ಬಹು-­ಸಂಸ್ಕೃತಿಯ ರಾಷ್ಟ್ರಕ್ಕೆ  ಪ್ರಜಾಪ್ರಭುತ್ವವೇ ಸೂಕ್ತ. ಆದರೆ ಇತ್ತೀಚಿನ ಬೆಳವಣಿಗೆಗಳು ರಾಜ್ಯಗಳನ್ನು ನಗಣ್ಯಗೊಳಿಸುವತ್ತ ಸಾಗಿವೆಯೇ ಎಂಬ ಅನು­ಮಾನ ಮೂಡಿಸುತ್ತಿವೆ. ಬಲಿಷ್ಠ ಕೇಂದ್ರ ಸರ್ಕಾರ ಇರಬೇಕು. ಆದರೆ ಅದರ ಬಲಿಷ್ಠತೆ ರಾಜ್ಯಗಳನ್ನು ದುರ್ಬಲಗೊಳಿಸಬಾರದು. ಅದು ರಕ್ಷಣೆ, ಆರ್ಥಿಕ, ಅಂತರರಾಷ್ಟ್ರೀಯ ವ್ಯವಹಾರ ಮೊದ­ಲಾದ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರಬೇಕು.

ಇನ್ನುಳಿದಂತೆ ಸಂಸ್ಕೃತಿ, ಭಾಷೆ, ಸಾಹಿತ್ಯ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ರಾಜ್ಯಗಳ ಹಕ್ಕನ್ನು ಗೌರವಿಸಲೇಬೇಕು. ಆಗಲೇ ಪ್ರಬಲ ಗಣತಂತ್ರ ರಾಷ್ಟ್ರವಾಗಲು ಸಾಧ್ಯ.

ಭಾಷಾವಾರು ರಾಜ್ಯಗಳ ವಿಂಗಡಣೆ ನಡೆ­ಯುತ್ತಿದ್ದಾಗಲೇ, ಅಂದರೆ ಸುಮಾರು ಅರವತ್ತು ವರ್ಷಗಳ ಹಿಂದೆಯೇ ‘ನಮ್ಮದು ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಆಗಬೇಕೆಂಬುದೇ ನನ್ನ ದೃಢವಾದ ಅಭಿಪ್ರಾಯ. ರಾಜ್ಯಗಳು ಸ್ವಾಯತ್ತ­ವಾ­ಗಿರಲಿ; ಸೈನ್ಯ ಮುಂತಾದ ವ್ಯವಸ್ಥೆಗಳು ಕೇಂದ್ರದ ಕೈಯಲ್ಲಿರಲಿ’ ಎಂದು ಕುವೆಂಪು ಅಭಿ­ಪ್ರಾಯ­ಪಟ್ಟಿದ್ದರು. ಅಮೆರಿಕದ ಸ್ಟೇಟ್­(State)­ಗಳಿಗೆ ಇರುವಂತೆ, ನಮ್ಮಲ್ಲಿಯೂ ರಾಜ್ಯಗಳಿಗೆ ಸ್ವಾತಂತ್ರ್ಯದ ಅಗತ್ಯವಿದೆ.

ರಾಜ್ಯಗಳಿಗೆ ಅಷ್ಟೊಂದು ಆಂತರಿಕ ಸ್ವಾತಂತ್ರವಿದ್ದರೂ ಅಮೆರಿಕ ಒಂದು ಬಲಿಷ್ಠ ರಾಷ್ಟ್ರವಾಗಿ ಉಳಿದಿಲ್ಲವೆ? ಹಾಗೆಯೇ ನಮ್ಮದು ‘ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ’ ಆಗಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT