ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾಯಿತಿ ಘೋಷಿಸಿ

Last Updated 25 ಜೂನ್ 2015, 19:30 IST
ಅಕ್ಷರ ಗಾತ್ರ

ಇಂದಿನ ಸಂಪಾದಕೀಯ (ಪ್ರ.ವಾ. 25) ‘ನಗದು ಚಲಾವಣೆ ಕಡಿತ- ಪೂರಕ ಕ್ರಮಗಳು ಅಗತ್ಯ’ ಸಮಯೋಚಿತವಾಗಿದೆ. ಇಲ್ಲಿ ಹೇಳಿದಂತೆ ವಿದ್ಯುನ್ಮಾನ ವಹಿವಾಟಿಗೆ ಪಟ್ಟಭದ್ರ ಹಿತಾಸಕ್ತಿಗಳ ವಿರೋಧ ಇರಬಹುದಾದರೂ, ವಿದ್ಯುನ್ಮಾನ ಯುಗದಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಅಂತರ್ಜಾಲ ಬ್ಯಾಂಕಿಂಗ್ ಮೂಲಕ ಹಣದ ಪಾವತಿಯನ್ನು ಉತ್ತೇಜಿಸುವ ತುರ್ತು ಅಗತ್ಯ ಇದೆ.

ಇದು ಕಪ್ಪುಹಣಕ್ಕೆ ಕಡಿವಾಣದ ಜೊತೆಗೆ ಗ್ರಾಹಕರ ಹಿತಾಸಕ್ತಿಯನ್ನೂ ರಕ್ಷಿಸಬಲ್ಲದು. ಅಲ್ಲದೆ ಹಲವು ಸೇವಾ ಶುಲ್ಕಗಳನ್ನು (ವೈದ್ಯರು, ವಕೀಲರು ಇತ್ಯಾದಿ) ನಿಗದಿಗಿಂತ ಅಧಿಕವಾಗಿ ಪಾವತಿಸುವುದನ್ನೂ ತಡೆಯಬಹುದು.

ಎ.ಟಿ.ಎಂ.ನಿಂದ ಹಲವು ಬಾರಿ ಹಣ ಹಿಂತೆಗೆಯಲು ಶುಲ್ಕ ನಿಗದಿಪಡಿಸಿರುವುದರಿಂದ ಆಗಬಹುದಾದ ಹೊರೆಯನ್ನು ಸಹ ಇದು ತಡೆಯಬಲ್ಲದು. ಹಾಗೇ ವಿದ್ಯುತ್‌, ದೂರವಾಣಿಯಂಥ ಹಲವು ಶುಲ್ಕಗಳನ್ನು ಕಾರ್ಡ್ ಅಥವಾ ಅಂತರ್ಜಾಲದ ಮೂಲಕ ಪಾವತಿಸಿದರೆ ಸರ್ಕಾರ ರಿಯಾಯಿತಿಯನ್ನು ಘೋಷಿಸಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT