ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದಾಯಕ ಕೇಂದ್ರಗಳಲ್ಲ

ಅಕ್ಷರ ಗಾತ್ರ

ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಇತ್ತೀಚೆಗೆ ಹೆಚ್ಚಿರುವುದು ಸಂತೋಷದ ವಿಷಯ. ಆದರೆ ಇಂತಹ ಸ್ಮಾರಕಗಳು ಕೇವಲ ಪ್ರವೇಶ ಶುಲ್ಕ ಹೆಚ್ಚಿಸಿಕೊಂಡು ವರಮಾನ ಸಂಗ್ರಹಿಸುವ ಕೇಂದ್ರಗಳಾಗಬಾರದು.

ಇಲ್ಲಿ ವಿದೇಶಿ ಪ್ರವಾಸಿಗರಿಗೇಕೆ ಅಧಿಕ ಮೊತ್ತದ ಶುಲ್ಕ? ನಿಜವಾಗಿ ನಮ್ಮ ಕಲೆ, ವಾಸ್ತುಶಿಲ್ಪ ತಿಳಿದುಕೊಳ್ಳುವ ಉದ್ದೇಶದಿಂದ ಸ್ಮಾರಕಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವವರು ಅವರೆ. ಅತ್ಯುತ್ತಮ ಸಂಶೋಧನೆ ಕೈಗೊಂಡು ಕೃತಿಗಳನ್ನು ಪ್ರಕಟಿಸಿದವರೂ ಅವರೆ.

ಪುರಾತತ್ವ ಇಲಾಖೆ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಮಹತ್ವದ ಕ್ರಿಯಾ ಯೋಜನೆ ರೂಪಿಸಬೇಕು. ಸ್ಮಾರಕಗಳ ರಕ್ಷಣೆ, ಅವುಗಳ ಐತಿಹಾಸಿಕ ಮಹತ್ವ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಛಾಯಾಚಿತ್ರಗಳ ಪ್ರದರ್ಶನ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರಗಳನ್ನು ಏರ್ಪಡಿಸಬೇಕು. ಇದರಿಂದ ಸಂಶೋಧನೆಗಳು ಮತ್ತು ಉತ್ಖನನದ ಬಗ್ಗೆ ಹೊಸ ವಿಷಯಗಳು ಆಸಕ್ತರನ್ನು ತಲುಪುತ್ತವೆ.

ಶಾಸನಗಳನ್ನು ತೆರೆದ ಸ್ಥಳಗಳಲ್ಲಿ ಇಡದೆ ಸುರಕ್ಷಿತ ಸ್ಥಳಗಳಲ್ಲಿ ಸಂರಕ್ಷಿಸಬೇಕು. ಸಾರ್ವಜನಿಕರು ಸ್ಮಾರಕಗಳ ಮೇಲೆ ಕಲ್ಲಿನಿಂದ ಹೆಸರು, ಚಿತ್ರ ಕೊರೆಯುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಮೂಲಕ ಪುರಾತತ್ವ ವಿಷಯದ ಜ್ಞಾನಾಭಿವೃದ್ಧಿಗೆ ನೆರವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT