ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರಿ ಜನ್ಮದಿನ ಮರೆತ ಸರ್ಕಾರ

Last Updated 2 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ದೇಶ ಕಂಡ ಸಾತ್ವಿಕ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರ ಸರಳತೆ, ಪ್ರಾಮಾ­­ಣಿ­ಕತೆ ಎಂಥವ­ರಿಗೂ ಸ್ಫೂರ್ತಿ ನೀಡುತ್ತದೆ. ದೇಶದ ಎರಡನೇ ಪ್ರಧಾನ ಮಂತ್ರಿಯಾಗಿ ಶಿಸ್ತು, ಪ್ರಾಮಾಣಿಕತೆಗೆ ಆದ್ಯತೆ ಕೊಟ್ಟು ಇಡೀ ದೇಶವನ್ನೇ ಭ್ರಷ್ಟಾಚಾರ ಮುಕ್ತವನ್ನಾಗಿಸಲು ಪಣ ತೊಟ್ಟವರು ಅವರು.

ಅಕ್ಟೋಬರ್ 2 ಎಂದಾಕ್ಷಣ ನೆನಪಿಗೆ ಬರು­ವುದು ಮಹಾತ್ಮ ಗಾಂಧೀಜಿ. ಆದರೆ ಅದೇ ದಿನ ಶಾಸ್ತ್ರಿ ಅವರೂ ಜನಿಸಿದ್ದರು ಎಂಬುದು ಕೆಲವ­ರಿಗೆ ತಿಳಿದಿಲ್ಲ. ಪ್ರಧಾನಿಯಾಗಿದ್ದಾಗಲೂ ಶಾಸ್ತ್ರಿ ಬಹಳ ಸರಳ ಜೀವನ ನಡೆಸುತ್ತಿದ್ದರು. ಸರಳತೆ ನಮ್ಮ ದೇಶದ ಉಚ್ಚ ಸಂಸ್ಕೃತಿಯ ಸಂಕೇತ, ಕೋಟಿ, ಕೋಟಿ ಭಾರತೀಯರಿಗೆ ಉಡಲು ಉತ್ತಮವಾದ ಉಡುಪಿಲ್ಲ, ಪ್ರಧಾನಿಯಾ­ದ­ವರು ಅವರ ಪ್ರತಿನಿಧಿಯಂತೆ ಇರಬೇಕು ಎಂದು ಅವರು ಹೇಳುತ್ತಿದ್ದರು. ತಮ್ಮ ಮಕ್ಕಳನ್ನು ಟಾಂಗಾದಲ್ಲಿ ಶಾಲೆಗೆ ಕಳುಹಿಸು­ತ್ತಿದ್ದರು. ಮಕ್ಕಳಿಗಾಗಿ ಆಸ್ತಿ-ಪಾಸ್ತಿ ಮಾಡಲಿಲ್ಲ.

ಬಡತನದಲ್ಲೇ ಹುಟ್ಟಿ ಬೆಳೆದು ಸ್ವಯಂ­ಪ್ರತಿಭೆಯಿಂದ, ಸತತ ಸಾಧನೆ­ಯಿಂದ ವಿವಿಧ ಹಂತಗಳ ಮೂಲಕ ಪ್ರಧಾನಿ ಪಟ್ಟವೇರಿದರು. ಅಂತಹವರ ಜಯಂತಿಯನ್ನು ಔಪಚಾರಿಕವಾಗಿ­ಯಾದರೂ ಕೇಂದ್ರ ಸರ್ಕಾರ ಆಚರಿಸದಿರು­ವುದು  ನೋವಿನ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT