ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷೆ ಏನೇನೂ ಸಾಲದು

Last Updated 15 ಜುಲೈ 2015, 19:30 IST
ಅಕ್ಷರ ಗಾತ್ರ

ಐಪಿಎಲ್ ಬೆಟ್ಟಿಂಗ್‌ ಹಾಗೂ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿಗೆ  ಕೊನೆಗೂ ಶಿಕ್ಷೆಯಾಗಿದೆ. ದೇಶದ ಸಂವಿಧಾನ ಹಾಗೂ ಕಾನೂನಿನ ಎಡರು ತೊಡರುಗಳನ್ನು ಬಳಸಿಕೊಂಡು ಈ ಸಂಸ್ಥೆಗಳ ಪ್ರಾಯೋಜಕರು ಬೇರೊಂದು ಹೆಸರಿನಲ್ಲಿ ವ್ಯವಹಾರ ನಡೆಸುವ ಸಂಭವ ಹೆಚ್ಚಾಗಿರುತ್ತದೆ.

ದೇಶದಲ್ಲಿ ಕ್ರೀಡೆಗೆ ಕಾರ್ಪೊರೇಟ್ ಸಂಸ್ಥೆಗಳ ಬೆಂಬಲ, ಪ್ರಾಯೋಜನೆ ಇರಬೇಕು.  ಆದರೆ ಇದನ್ನೇ ನೆಪವಾಗಿಸಿಕೊಂಡು, ಜನರಿಗೆ ಕೆಲವು ಗಂಟೆಗಳ ಕಾಲ ಮೋಜು ನೀಡಿ, ಮೋಸದ ವ್ಯವಹಾರಗಳ ಮೂಲಕ ಮಿತಿ ಮೀರಿದ ಹಣ ಸಂಪಾದಿಸುವುದು ಪರಿಪಾಠ ಆಗಬಾರದು.

ಹೀಗಾಗಿ ಈ ಸಂಸ್ಥೆಗಳಿಗೆ ಈಗ ವಿಧಿಸಿರುವ ಎರಡು ವರ್ಷದ ಅಮಾನತು ಶಿಕ್ಷೆ ಏನೇನೂ ಸಾಲದು. ಇಂತಹ ಸಂಸ್ಥೆಗಳಿಗೆ ಮತ್ತು ಆಟಗಾರರಿಗೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಹಾಗೂ ಸರ್ಕಾರದಿಂದ ಯಾವುದೇ ರೀತಿಯ ಬೆಂಬಲ, ನೆರವು ದೊರೆಯದಂತೆ ಮಾಡಬೇಕು. ಅವರ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT