ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೀರೆ’ ಆದೇಶ ಸರಿಯಲ್ಲ

Last Updated 6 ಜುಲೈ 2017, 19:30 IST
ಅಕ್ಷರ ಗಾತ್ರ

ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುವ ಮಹಿಳಾ ಉಪನ್ಯಾಸಕರು ಸೀರೆ ಉಟ್ಟು ಕಾಲೇಜಿಗೆ ಬರಬೇಕೆಂಬ ಸುತ್ತೋಲೆಯನ್ನು ಕಾಲೇಜು ಶಿಕ್ಷಣ ಇಲಾಖೆಯ ಮೈಸೂರು ಜಿಲ್ಲಾ ಕಚೇರಿ ಹೊರಡಿಸಿದೆ.

ಅಧಿಕಾರಿಗಳು ಮಹಿಳಾ ಉಪನ್ಯಾಸಕರ ಉಡುಗೆ ಬಗ್ಗೆ ಮಾಡಿರುವ ಆದೇಶ ಆತುರದಿಂದ ಕೂಡಿದ್ದು, ಇದನ್ನು ಪ್ರಜ್ಞಾವಂತರು ಖಂಡಿಸಬೇಕು. ಅಲ್ಲದೇ ಶಿಕ್ಷಣ ಸಚಿವರು ಮಧ್ಯಪ್ರವೇಶಿಸಿ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು.

ಸೀರೆ ಉಟ್ಟು ಪಾಠ ಮಾಡಿದ ಮಾತ್ರಕ್ಕೆ ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡುತ್ತದೆ ಎಂಬ ಕಲ್ಪನೆಯೇ ಮೌಢ್ಯದ್ದು ಹಾಗೂ ಮಹಿಳಾ ಅಧ್ಯಾಪಕರು ಸೀರೆಗಿಂತ ಚೂಡಿದಾರ್‌ನಲ್ಲಿ ಆರಾಮದಾಯಕವಾಗಿ ಕೆಲಸ ಮಾಡಬಲ್ಲರು.

ಹೀಗೆ ಶಿಕ್ಷಕರ ಬಟ್ಟೆಯ ಬಗ್ಗೆಯೂ ಅಧಿಕಾರಿಗಳು ಆದೇಶ ಹೊರಡಿಸುವುದರ ಹಿಂದೆ ಹುಸಿ ಧಾರ್ಮಿಕ ನಂಬಿಕೆ ಹಾಗೂ ಪುರುಷಾಧಿಪತ್ಯದ ಹಿತಾಸಕ್ತಿಯಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಕನಸವಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT