ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಂಗ ಮಾರ್ಗ ಬೇಕು

Last Updated 8 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘ನಗರದಲ್ಲಿ 29 ಕಡೆ ಸ್ಕೈವಾಕ್‌’ ಎಂಬ ವರದಿ (ಪ್ರ.ವಾ., ಮಾ. 1) ಕುರಿತು ಪ್ರತಿಕ್ರಿಯೆ. ಬೆಂಗಳೂರಿನ ಹೆಬ್ಬಾಳ– ಕೆಂಪಾಪುರ ಜಂಕ್ಷನ್‌­ನಲ್ಲಿ 15 ದಿನಗಳಲ್ಲಿ ಸ್ಕೈವಾಕ್‌ ನಿರ್ಮಾಣಕ್ಕೆ ಚಾಲನೆ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿ­ಕಾರ ಒಪ್ಪಿಗೆ ಸೂಚಿಸಿರುವುದಾಗಿ ವರದಿ­ಯಾ­ಗಿದೆ. ನಗರಗ­ಳಲ್ಲಿ ಕೆಲವೆಡೆ ಸ್ಕೈವಾಕ್‌ಗಳು ನಿರ್ಮಾಣ­ಗೊಂಡಿವೆ.

ಬಹುತೇಕ ಇಂತಹ ಸ್ಕೈವಾಕ್‌­ಗಳನ್ನು ಪಾದಚಾರಿಗಳು ಉಪಯೋಗಿ­ಸು­ತ್ತಿಲ್ಲ. ಸ್ಕೈವಾಕ್‌ ನಿರ್ಮಾಣ ಪ್ರಸ್ತಾಪಿಸುತ್ತಿರು­ವವರಿಗೆ ಇಂತಹ ಉಪಯೋಗಿಸದಿರುವ ಸ್ಕೈವಾಕ್‌­ಗಳು  ಕಣ್ಣಿಗೆ ಬೀಳುವುದಿಲ್ಲವೇ? ಯುವಕರು ಕೂಡ ಅಷ್ಟು ಎತ್ತರದ ಎತ್ತರಿಸಿದ ಪಾದಚಾರಿ ಮಾರ್ಗಗಳನ್ನು ಬಳಸುವುದಿಲ್ಲ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರು ಈ ಸ್ಕೈವಾಕ್‌ಗಳನ್ನು ಹತ್ತಿ ಇಳಿಯುವರೆಂದು ಭಾವಿಸಲಾದೀತೆ? ಅದರಲ್ಲೂ ಸಾಮಾನು–ಸರಂಜಾಮು ಇದ್ದ­ರಂತೂ ಕೇಳುವಂತೆಯೇ ಇಲ್ಲ. ಈ ಸ್ಕೈವಾಕ್‌ಗಳಿಗೆ ಲಿಫ್ಟ್‌ಗಳನ್ನು ಜೋಡಿಸಿದರೂ ಅವುಗಳು ದುರಸ್ತಿಗೆ ಒಳಪಟ್ಟರೆ ಹಾಗೂ ಚಾಲಕರಿಲ್ಲದೇ ಇದ್ದಲ್ಲಿ ತೊಂದರೆ ತಪ್ಪಿದ್ದಲ್ಲ. ನಿರ್ವಹಣೆಯ ಖಾತ್ರಿ ಇರುವುದಿಲ್ಲ.

ಸುರಂಗಮಾರ್ಗ ನಿರ್ಮಿಸಿದಲ್ಲಿ ಪಾದ­ಚಾರಿ­ಗಳಿಗೆ ತೊಂದರೆ ಆಗುವುದಿಲ್ಲ. ಇದರ ಸ್ವಚ್ಛತೆ­ಯನ್ನು ಕಾಪಾಡುವಂತೆ, ಆ ಬಡಾವ­ಣೆಯ ಪೌರಕಾರ್ಮಿಕರಿಗೆ ಸೂಚಿ­ಸಬೇಕು. ರಾತ್ರಿ ವೇಳೆ ಎರಡೂ ಕಡೆಯ ಕಬ್ಬಿಣ ಸರಳುಗಳ ಬಾಗಿಲು­ಗಳನ್ನು ಮುಚ್ಚುವ ಕೆಲಸ ಆಗಬೇಕು. ಪಾದಚಾರಿ­ಗಳಿಗೆ ಓಡಾಡಲು ಸ್ಕೈವಾಕ್‌ಗಿಂತ ಸುರಂಗ ಮಾರ್ಗವೇ ಲೇಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT