ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಚಾಳಿ

Last Updated 15 ಫೆಬ್ರುವರಿ 2016, 19:55 IST
ಅಕ್ಷರ ಗಾತ್ರ

‘ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಶಾಂತಿಗೆ ಭಂಗವುಂಟಾಗುವ ಸಾಧ್ಯತೆ ಜಾಸ್ತಿ ಮತ್ತು ಆ ರಾಷ್ಟ್ರಗಳು ಭಯೋತ್ಪಾದಕರ ತವರು ಮನೆಗಳಾಗುತ್ತಿವೆ. ಇಂತಹ ಚಟುವಟಿಕೆಗಳಿಗೆ ಅಲ್ಲಿನ ಸರ್ಕಾರಗಳು ಆಸ್ಪದ ನೀಡಬಾರದು’ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಈ ಹಿಂದೆ ಹೇಳಿದ್ದರು.

ಹಾಗೆಯೇ ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳ ರಪ್ತು ಒಪ್ಪಂದ ನಿಷೇಧಿಸಬೇಕೆಂದು ಒಬಾಮ ಅವರ ಮೇಲೆ ಅಮೆರಿಕದ ಕೆಲ ಸಂಸದರು  ಒತ್ತಡ ಹಾಕಿದ್ದರು. ಇದಕ್ಕೆ ಮಣಿದಿದ್ದ ಒಬಾಮ ಎಫ್- 16 ಯುದ್ಧ ವಿಮಾನಗಳ ರಫ್ತನ್ನು ನಿಷೇಧಿಸಿ, ವಿಶ್ವ ಶಾಂತಿ ಬಗ್ಗೆ ಮಾತನಾಡಿದ್ದರು. ಆದರೆ, ಈಗ ಒಬಾಮ ಆ ಹಳೆಯ ಒಪ್ಪಂದವನ್ನು ಮುರಿದು ಎಫ್- 16 ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ಪೂರೈಸಲು ಒಪ್ಪಿಕೊಂಡಿದ್ದಾರೆ. ಇದು ಭಾರತಕ್ಕೆ  ಆತಂಕವನ್ನು ಹೆಚ್ಚಿಸಿದೆ. ಭಾರತವು ಜಗತ್ತಿನ ತುಂಬಾ ಶಾಂತಿ ಮಂತ್ರದ ಬೀಜವನ್ನು ಬಿತ್ತುವ ಬಗ್ಗೆ ಮಾತನಾಡುತ್ತಿದೆ. ಅಮೆರಿಕ ಯುದ್ಧವಿಮಾನಗಳಿಗೆ ಸಂಬಂಧಿಸದಂತೆ  ಮತ್ತೆ ತನ್ನ ಹಳೇ  ಚಾಳಿಯನ್ನೇ ಮುಂದುವರಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT