ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೂ ಮಾಡಿದರೆ...

Last Updated 15 ಮೇ 2016, 19:54 IST
ಅಕ್ಷರ ಗಾತ್ರ

ನಾಲೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್‌ ಪಡೆಯುತ್ತಿರುವುದು ಹೆಚ್ಚಿನವರಿಗೆ ಗೊತ್ತಿರುವ ವಿಚಾರ. ಇನ್ನೂ ಎರಡು ರೀತಿಯಿಂದ ವಿದ್ಯುತ್‌ ಪಡೆಯಲು ಸರ್ಕಾರ ಕ್ರಮ ಕೈಗೊಂಡರೆ ಹೇಗೆ ಅಂತ ನನ್ನ ಪ್ರಶ್ನೆ.

1. ಜಲಾಶಯಗಳ ಮೇಲೆ ಅಪಾರವಾದ ಬಿಸಿಲು ಬಿದ್ದು ಅಲ್ಲಿ ಶೇಖರವಾಗಿರುವ ನೀರಿನಲ್ಲಿ ಬೃಹತ್‌ ಪ್ರಮಾಣದ ನೀರು ಆವಿಯಾಗಿ ಆಗಸಕ್ಕೆ ಹೋಗುತ್ತದೆ. ಇದನ್ನು ತಪ್ಪಿಸಲು ಜಲಾಶಯಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಬೇಕು. ಇದರಿಂದ ಎರಡು ರೀತಿಯ ಲಾಭವಿದೆ: ಒಂದು–ಜಲಾಶಯದ ನೀರು ಆವಿಯಾಗದ ಹಾಗೆ ತಡೆದ ಹಾಗಾಗುವುದು. ಇನ್ನೊಂದು–ಅಪಾರ ಪ್ರಮಾಣದಲ್ಲಿ ಸೌರ ವಿದ್ಯುತ್‌ ಉತ್ಪಾದನೆ.

2. ನಗರ, ಪಟ್ಟಣಗಳ ಹೆಚ್ಚಿನ ಮನೆಗಳ ತಾರಸಿಗಳು ಖಾಲಿ ಇರುತ್ತವೆ. ಅವುಗಳ ಮೇಲೆ ಬೀಳುವ ಬಿಸಿಲು ವ್ಯರ್ಥವಾಗಿ ಹೋಗುವುದರ ಜೊತೆಗೆ ತಾರಸಿಯು ಕಾದು ಮನೆಯೊಳಗೆ ಸೆಕೆಯುಂಟಾಗುತ್ತದೆ. ಇಂತಹ ತಾರಸಿಗಳ ಮೇಲೆ ಸೌರಫಲಕಗಳನ್ನು ಅಳವಡಿಸಿಕೊಂಡು ವಿದ್ಯುತ್‌ ಉತ್ಪಾದನೆ ಮಾಡಿಕೊಳ್ಳೋಣವೆಂದು ಜನ ಪ್ರಯತ್ನಿಸಿದರೆ, ಅದಕ್ಕೆ ವೆಚ್ಚವಾಗುವ ಹಣದ ಪ್ರಮಾಣ ಕಂಡು ಹೌಹಾರಿ ಹೆಚ್ಚಿನ ಜನ ತಮ್ಮ ಪ್ರಯತ್ನವನ್ನು ಸ್ಥಗಿತಗೊಳಿಸುತ್ತಾರೆ!

ಇದಕ್ಕಿರುವ ಒಂದು ಉಪಾಯವೇನೆಂದರೆ, ಸರ್ಕಾರವೇ ತನ್ನ ಖರ್ಚಿನಲ್ಲಿ ತಾರಸಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಬೇಕು. ಆ ಜಾಗಕ್ಕೆ (ತಾರಸಿಗೆ) ಬಾಡಿಗೆ ಕೊಡಬಾರದು. ಬದಲಿಗೆ,  ಮನೆಗಳವರಿಗೆ ಇಂತಿಷ್ಟು ವಿದ್ಯುತ್‌ ಅಂತ ಉಚಿತವಾಗಿ ಕೊಡಬೇಕು. ಉಳಿದ ವಿದ್ಯುತ್ತನ್ನು ಗ್ರಿಡ್‌ಗೆ ತೆಗೆದುಕೊಳ್ಳಬಹುದು.

ಇದರಿಂದ ತಾರಸಿ ಕಾದು ಮನೆಯೊಳಗೆ ಸೆಕೆಯಾಗುವುದು ತಪ್ಪುವುದರ ಜೊತೆಗೆ, ಅಲ್ಲಿ ಅಳವಡಿಸಿರುವ ಸೌರ ಫಲಕಗಳಿಂದ ಸಾಕಷ್ಟು ವಿದ್ಯುತ್‌ ದೊರೆಯುತ್ತದೆ. ಬಿಸಿಲು ಸಹ ವ್ಯರ್ಥವಾಗುವುದಿಲ್ಲ. ಫಲಕಗಳನ್ನು ಅಳವಡಿಸಲು–ನಿರುಪಯುಕ್ತ– ಮೈದಾನಗಳನ್ನು ಹುಡುಕುವುದೂ ತಪ್ಪುತ್ತದೆ. ಇದೆಲ್ಲ ಸಾಧ್ಯವಾದರೆ ಪ್ರಕೃತಿಯೂ ಆರೋಗ್ಯಪೂರ್ಣವಾಗಿರುತ್ತದೆ. ಇಂತಹ ಕಾರ್ಯಕ್ಕೆ ಸರ್ಕಾರ ಮನಗೊಡುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT