ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೆ ಮಾಡಬಹುದೇ?

Last Updated 27 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಎಲ್ಲೆಲ್ಲೂ ಕೇಳಿಬರುತ್ತಿರುವ ಪದ ಅಭಿವ್ಯಕ್ತಿ ಸ್ವಾತಂತ್ರ್ಯ. ಒಳ್ಳೆಯ ಅಥವಾ ಕೆಟ್ಟ ಕೆಲಸ ಯಾವುದೇ ಆಗಲಿ ವಾದ– ವಿವಾದ ಕೊನೆಗೊಳ್ಳುವುದೇ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಪದದಿಂದ. ಕೆಲವು ಖಾಸಗಿ ನರ್ಸಿಂಗ್ ಹೋಂಗಳಲ್ಲಿ ವ್ಯಕ್ತಿ ಮರಣ ಹೊಂದಿದ್ದರೂ ಅದನ್ನು ತಿಳಿಸದೆ ಔಷಧಿ ಬರೆದುಕೊಡುತ್ತಾರೆ. ಇನ್ನು ಕೆಲವೆಡೆ ಮರಣದ ನಂತರ ವ್ಯಕ್ತಿಯ ಶವ ನೀಡಲು ಅಥವಾ ಮುಖ ನೋಡಲೂ ಪೂರ್ಣ ಬಿಲ್ ಪಾವತಿಸದಿದ್ದರೆ ಸಾಧ್ಯವಿಲ್ಲ.

ಮುಷ್ಕರ ಮಾಡುವವರು ವೈದ್ಯರು, ಉಪನ್ಯಾಸಕರು, ಉದ್ಯಮಿಗಳು ಯಾರೇ ಆಗಿರಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಮುಷ್ಕರನಿರತ ಕುಟುಂಬಗಳಿಗೆ ಮುಷ್ಕರ ನಿಲ್ಲುವವರೆಗೆ ಹಾಲಿನವರು, ತರಕಾರಿಯವರು, ದಿನಸಿ ಅಂಗಡಿಯವರು, ವೃತ್ತ ಪತ್ರಿಕೆಯವರು ತಮ್ಮ ಸರಕುಗಳನ್ನು ಕೊಡುವುದನ್ನು ನಿಲ್ಲಿಸಬೇಕು. ಮನುಷ್ಯತ್ವ ಇಲ್ಲದವರಿಗೆ ಹೀಗೂ ಪಾಠ ಕಲಿಸಬಹುದಲ್ಲವೇ? ವಿದೇಶಗಳಲ್ಲಿ ಮುಷ್ಕರ ಮಾಡುವವರು ‘ನಾವು ಮುಷ್ಕರ ಮಾಡುತ್ತಿದ್ದೇವೆ’ (We are on strike) ಎಂಬ ಚೀಟಿ ಅಂಟಿಸಿಕೊಂಡು ಮಾಮೂಲಿ ದಿನಕ್ಕಿಂತ ಎರಡು ಗಂಟೆಗಳ ಕಾಲ ಹೆಚ್ಚು ಕೆಲಸ ಮಾಡುತ್ತಾರೆ ಎಂಬುದು ಅನೇಕರಿಗೆ ತಿಳಿದ ವಿಷಯ.

ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT