ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಿದೆ ಜೋಪಾನ!

Last Updated 28 ಜನವರಿ 2016, 19:45 IST
ಅಕ್ಷರ ಗಾತ್ರ

ಕನ್ನಡದ ಅಲ್ಪಪ್ರಾಣ, ಮಹಾಪ್ರಾಣಗಳ ತಪ್ಪು ಬರವಣಿಗೆ, ದೀರ್ಘ, ಒತ್ತಕ್ಷರ, ಕಾಗುಣಿತವನ್ನು  ತಪ್ಪಾಗಿ ಬರೆಯುವುದಂತೂ ಟಿ.ವಿ. ವೀಕ್ಷಕರಿಗೆ ಸರ್ವೇಸಾಮಾನ್ಯವಾಗಿದೆ. ಇನ್ನು ನೀವು ಬೆಂಗಳೂರಿನಿಂದ ಮೈಸೂರಿಗೆ ಕೆಂಗೇರಿ ಮಾರ್ಗವಾಗಿ ಪ್ರಯಾಣಿಸುವಾಗ ಮೂರು ನಾಲ್ಕು ಕಿಲೊ ಮೀಟರಿಗೊಮ್ಮೆ ‘ಮುಂದೆ ಹುಬ್ಬು ಇದೆ’, ‘ಮುಂದೆ ಹುಬ್ಬು ಇದೆ ಜೋಪಾನ’ ಎಂಬ ಎಚ್ಚರಿಕೆಯ ಫಲಕಗಳು ಕಣ್ಣಿಗೆರಾಚುತ್ತವೆ. 


ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ‘ಹುಬ್ಬಿಗೂ’ ‘ಉಬ್ಬಿಗೂ’ ವ್ಯತ್ಯಾಸ ತಿಳಿಯುವುದಿಲ್ಲವೇ? ಅಥವಾ ‘ಸ್ವರ’, ‘ವ್ಯಂಜನ’ಗಳ ಬಗ್ಗೆ ಗೊತ್ತಿರುವುದಿಲ್ಲವೆಂದು ಅವರನ್ನು ಕ್ಷಮಿಸೋಣವೇ? ಇಂತಹ ಫಲಕಗಳನ್ನು ಅಳವಡಿಸುವ ಮುನ್ನ ಸಂಬಂಧಪಟ್ಟವರು ನೋಡಬೇಡವೇ? ಕೇವಲ ಒಂದು ಗಂಟೆ ಅವಧಿಯಲ್ಲಿ 15 ‘ಹುಬ್ಬು’ಗಳನ್ನು ಎಣಿಸಿದ ನಂತರ ಈ ಪತ್ರ ಬರೆಯುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT