ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಗಿದೆ ಬಿಎಂಟಿಸಿ ಸೂಚನೆಗಳು?

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯವರು ಹವಾನಿಯಂತ್ರಿತ ಬಿಐಎಎಸ್‌ ಮತ್ತು ಬೆಂಗಳೂರು ರೌಂಡ್‌್ಸ ಬಸ್ಸುಗಳನ್ನು ಹೊರತುಪಡಿಸಿ ಉಳಿದ ಬಸ್‌ಗಳಲ್ಲಿ (ಮಧ್ಯರಾತ್ರಿಯಿಂದ ಮಧ್ಯರಾತ್ರಿಯವರೆಗೆ) ದಿನದ ಪಾಸು ದರ ₨ 70 ಎಂದು ನಿಗದಿಪಡಿಸಿದೆ. ಪಾಸು ಹಿಂಬಾಗದಲ್ಲಿರುವ ಸೂಚನೆ ಉಲ್ಲಂಘಿಸಿದವರಿಗೆ ₨ 500 ದಂಡ ಅಥವಾ ಕಾನೂನು ಕ್ರಮ ಎಂದೂ ಹೇಳಿದೆ.

ಬಸ್‌ನ ಒಳಗೆ ಹಾಕಿರುವ ಫಲಕಗಳಲ್ಲಿ ದಿನದ ಹಾಗೂ ಮಾಸಿಕ ಬಸ್‌ಗಳಲ್ಲಿ ವಿವರಗಳನ್ನು ತುಂಬಲು ಸೂಚಿಸಿದೆ. ತಪ್ಪಿದವರಿಗೆ ದಂಡ ಆಹ್ವಾನಿಸಿಕೊಳ್ಳುವ ಸಂದೇಶವನ್ನು ನೀಡಿದೆ. ಬಸ್‌ನಲ್ಲಿ ಪಾಸ್‌ ಪಡೆದವರು ಸಹಿ ಮಾಡುವುದನ್ನು ಕಡ್ಡಾಯ. ಇದಕ್ಕಾಗಿ ಲೇಖನಿ ತೆಗೆದುಕೊಂಡು ಹೋಗಬೇಕು ಅಥವಾ ಬೇರೆಯವರಿಂದ ಪಡೆದು, ಚಲಿಸುವ ಬಸ್‌ನಲ್ಲಿ, ನಿಂತು ಪ್ರಯಾಣಿಸುತ್ತಿದ್ದರೂ ಸಹಿ ಮಾಡಬೇಕು.

ಇಂತಹ ಸಂದರ್ಭದಲ್ಲಿ ಮಾಮೂಲಿ ರೀತಿ ಸಹಿ ಮಾಡಲು ಬಹುತೇಕ ಸಾಧ್ಯವಾಗುವುದಿಲ್ಲ, ಬರೆಯಲು ಬಾರದವರು/ಹೆಬ್ಬೆಟ್ಟಿನ ಗುರುತಿನವರು ಸಹಿ ಹೇಗೆ ಮಾಡಬೇಕು? ಇಂತಹ ‘ಅವಾಸ್ತವಿಕ’ ಸೂಚನೆಗಳನ್ನು ಸಂಸ್ಥೆಯು ಹಿಂಪಡೆಯಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT