ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೇಕಾ’ ಅಲ್ಲ: ‘ಮೇನಕಾ’

ಅಕ್ಷರ ಗಾತ್ರ

ಈಗ ಕೇಂದ್ರ ಸರ್ಕಾರದಲ್ಲಿ ಸಚಿವೆ­ಯಾಗಿ­ರುವ ಮೇನಕ ಗಾಂಧಿಯವರ ಹೆಸರನ್ನು ಸಾರ್ವ­ಜನಿಕ ವಲ­ಯದಲ್ಲಿ ಕೆಲವೆಡೆ ‘ಮನೇಕಾ’ ಎಂದು ಬಿಂಬಿ­ಸು­ತ್ತಿರುವುದು ಸರಿ ಅಲ್ಲ. ಅವರ ಹೆಸರಿನ ಸರಿ­ಯಾದ ಉಚ್ಚಾರ ‘ಮೇನಕಾ’ ಅವರು ಲೋಕ­ಸಭಾ ಸದಸ್ಯರಾಗಿ ಪ್ರತಿಜ್ಞಾ ವಚನ ಸ್ವೀಕ­ರಿ­ಸಿದಾಗ ತಮ್ಮ ಹೆಸರನ್ನು ‘ಮೇನಕಾ ಗಾಂಧಿ’ ಎಂದೇ ಸ್ಪಷ್ಟ­ವಾಗಿ ಹೇಳಿಕೊಂಡದ್ದನ್ನು ನಾನು ದೃಶ್ಯಮಾ­ಧ್ಯ­ಮ­ದಲ್ಲಿ ಪ್ರತ್ಯಕ್ಷವಾಗಿ ಕಂಡೆ; ಕೇಳಿದೆ.

‘ಮೂರ್ತಿ’, ‘ಅಯ್ಯ’ ಎಂಬ ಹೆಸರುಗಳ ಅಂತ್ಯ ಭಾಗ­ಗಳನ್ನು ಇಂಗ್ಲಿಷ್‌ ಲಿಪಿಯಲ್ಲಿ ಬೇರೆ ಬೇರೆ ರೀತಿ­ಯಲ್ಲಿ ಬರೆದರೂ (ಉದಾ: ‘moorthy’, ‘murthy’, ‘aiya’, ‘ayya’) ಅವುಗಳನ್ನು ಹಾಗೇ ಉಚ್ಚರಿಸುತ್ತಾರೆ. ಇಂಗ್ಲಿಷಿ­ನಲ್ಲಿ ‘maneka’ ಎಂದು ಅವರು ಬರೆದು­ಕೊಳ್ಳು­ವು­ದ­ರಿಂದ ಅದನ್ನು ‘ಮನೇಕಾ’ ಎಂದು ಕನ್ನಡದಲ್ಲಿ ಬರೆ­ಯುತ್ತಾರೆ. ಅದು ಸರಿಯಲ್ಲ. ಅವರ ಹೆಸ­ರನ್ನು ಕನ್ನಡದಲ್ಲಿ ‘ಮೇನಕಾ’ ಎಂದು ಬಿಂಬಿ­ಸುವುದೇ ಸರಿಯಾ­ದುದು. ಭಾರತೀಯ ಭಾಷೆ­ಗಳಲ್ಲಿ ಲಿಪಿಗೂ ಉಚ್ಚಾರಕ್ಕೂ ಸಂಪೂರ್ಣ ಸಾಮ್ಯ­ವಿದೆ–ಇಂಗ್ಲಿಷಿನಲ್ಲಿ ಹಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT