ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧ ಸರಿಯಲ್ಲ

Last Updated 18 ಜುಲೈ 2014, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್‌ನಲ್ಲಿ ಮೊಬೈಲ್‌ ಬಳಕೆ ಮಾಡಬಾರದು ಎಂಬ ಶಿಫಾರಸನ್ನು ನಾನು ವಿರೋಧಿಸುತ್ತೇನೆ. ಬೇಕಿದ್ದರೆ ತರಗತಿ ನಡೆವ ಸಂದರ್ಭದಲ್ಲಿ ಮೊಬೈಲ್‌ಗಳನ್ನು ನಿಷೇಧಿಸಲಿ. ಆದರೆ, ವಿದ್ಯಾರ್ಥಿಗಳು ಮೊಬೈಲನ್ನೇ ಬಳಕೆ ಮಾಡಬಾರದು ಎಂಬ ವಾದ ಸರಿಯಲ್ಲ.

ಏಕೆಂದರೆ, ಇದು ಮಾಹಿತಿ ತಂತ್ರಜ್ಞಾನದ ಯುಗ. ನಮಗೆ ಬೇಕೆಂದ ಮಾಹಿತಿಯನ್ನು ಮೊಬೈಲ್‌ ಇಂಟರ್ನೆಟ್ ಮೂಲಕ ಪಡೆದುಕೊಳ್ಳಬಹುದು. ಒಂದು ವೇಳೆ ಮೊಬೈಲ್‌ ನಿಷೇಧ ಮಾಡುವುದಾದರೆ ಈ ನೀತಿ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಸಮಾನವಾಗಿ ಅನ್ವಯವಾಗಬೇಕು.

ಏಕೆಂದರೆ ಎಷ್ಟೋ ಬಾರಿ ಕ್ಲಾಸ್ ನಡೆಯುತ್ತಿದ್ದಾಗಲೇ ನಮ್ಮ ಪ್ರೊಫೆಸರ್‌ಗಳಿಗೆ ಫೋನ್‌ ಬರುತ್ತದೆ. ಅವರು ಆ ಕರೆಗಳನ್ನು ಸ್ವೀಕರಿಸುತ್ತಾರೆ. ಅದರಿಂದ ನಮಗೂ ಕಿರಿಕಿರಿಯಾಗುತ್ತದೆ. ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT