ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ಡಿ ಸ್ಕ್ಯಾನಿಂಗ್‌ ಕಂಪ್ಯೂಟರ್

Last Updated 19 ಜೂನ್ 2015, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಬಂದ ಮೇಲೆ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ಕೇಳುವವರೇ ಇಲ್ಲ ಎನ್ನುವ ಕಾಲವೊಂದಿತ್ತು. ಆದರೆ ಹೆಚ್ಚು ಅವಧಿಯಲ್ಲಿ ನಿರಂತರವಾಗಿ ಕೆಲಸ ಮಾಡಲು ಡೆಸ್ಕ್‌ಟಾಪ್‌ನಂತಹ ಕಂಪ್ಯೂಟರ್‌ ಬಿಟ್ಟರೆ ಬೇರೆ ಇಲ್ಲ ಎನ್ನುವುದು ಅದನ್ನು ಬಲ್ಲವರಿಗೆ ತಿಳಿದಿರುವ ಸತ್ಯ.

ಕಾಲಾನುಕ್ರಮದಲ್ಲಿ ಕಂಪ್ಯೂಟರ್‌ನ ವಿನ್ಯಾಸದಲ್ಲಿ ಬದಲಾವಣೆ ಹೊಂದಿ ಇಂದು ಆಲ್-ಇನ್ ಒನ್ ಮಾದರಿಗಳು ಮಾರುಕಟ್ಟೆಯಲ್ಲಿವೆ. ಆ್ಯಪಲ್‌ನ ಮ್ಯಾಕ್ ಕಂಪ್ಯೂಟರ್ ಅಂತೂ ಈ ಶ್ರೇಣಿಯಲ್ಲೇ ಉತ್ತಮ ಎಂದು ಹಲವು ಬಳಕೆದಾರರ ಅನಿಸಿಕೆ. ಇನ್ನು ಹೆಚ್‌ಪಿ, ಡೆಲ್, ಲೆನೊವೊ ಮುಂತಾದ ಕಂಪೆನಿಗಳೂ ಈ ರೀತಿಯ ಕಂಪ್ಯೂಟರ್ ತಯಾರಿಸುತ್ತವೆ.

ಇದೀಗ ಹೆಚ್‌ಪಿ ಕಂಪೆನಿಯು ಹೊಸದಾಗಿ ಸ್ಪ್ರೌಟ್ ಎಂಬ ಆಲ್-ಇನ್ ಒನ್ ಡೆಸ್ಕ್‌ಟಾಪ್ ಮಾದರಿಯನ್ನು ಹೊರತಂದಿದೆ. ಇದರಲ್ಲಿ ಪ್ರೊಜೆಕ್ಟರ್ ಮತ್ತು ಸೆನ್ಸರ್ ಸಹಿತ ಕ್ಯಾಮೆರಾ ಇದ್ದು, ಇದು ತನ್ನ ಟಚ್ ಪ್ಯಾಡ್‌ನ ಮೇಲೆ ಇಟ್ಟ ವಸ್ತುಗಳನ್ನು ಯಥಾ ಪ್ರಕಾರ ಸ್ಕ್ಯಾನ್ ಮಾಡಿ, ಕಂಪ್ಯೂಟರ್ ಪರದೆಯ ಮೇಲೆ ಮೂಡಿಸುತ್ತದೆ. ಯಾವುದೇ ವಸ್ತು ಇರಲಿ, ಅದನ್ನು 360 ಡಿಗ್ರಿ ಕೋನದಲ್ಲಿ, ಸಂಪೂರ್ಣವಾಗಿ ಆವರಿಸಿ ಪರದೆಯಲ್ಲಿ 3D ಮಾದರಿಯಲ್ಲಿ ತೋರಿಸುತ್ತದೆ.

ನೋಡಲು ಸಾಮಾನ್ಯ ಡೆಸ್ಕ್‌ಟಾಪ್ ಆಗಿದ್ದರೂ, ಇದರ ಮಾನಿಟರ್‌ನ ಹಿಂಭಾಗಕ್ಕೆ ಅಳವಡಿಸಿರುವ ಈ ಇಮೇಜ್ ಸ್ಕ್ಯಾನರ್, ತನ್ನ ಟಚ್‌ಪ್ಯಾಡ್‌ನಲ್ಲಿ ಇರಿಸುವ ವಸ್ತುವಿನ ಮಾದರಿಯನ್ನು ಸ್ಕ್ಯಾನ್ ಮಾಡುತ್ತದೆ. ಈ ಸ್ಕ್ಯಾನ್ ಮಾಡಿದ ಚಿತ್ರವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳಲು ಅನುವಾಗುವಂತೆ 3D ಸ್ನಾಪ್‌ಶಾಟ್ ಎಂಬ ವಿಶೇಷ ತಂತ್ರಾಂಶವನ್ನು ಹೆಚ್‌ಪಿ ಅಭಿವೃದ್ಧಿಪಡಿಸಿದೆ.

ಈ ತಂತ್ರಜ್ಞಾನವು 3Dಯನ್ನು ಬಳಸುವ ಯಾವುದೇ ಸಂದರ್ಭದಲ್ಲೂ ಅನುಕೂಲ. ವರ್ಚುವಲ್ ರಿಯಾಲಿಟಿ ಗೇಮಿಂಗ್, ಸಿನಿಮಾ ತಂತ್ರಜ್ಞಾನ, ವಿಶ್ಯುವಲ್ ಎಫೆಕ್ಟ್, ಮಾಡೆಲಿಂಗ್, ಅನಿಮೇಷನ್ ಮತ್ತು ಇಂಟೀರಿಯರ್ ಪ್ಲಾನಿಂಗ್ ಮುಂತಾದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಸೂಕ್ತವಾಗಿದೆ. ಕಲಾವಿದರಿಗೆ ಈ ಮಾದರಿಯ 3D ಸ್ಕ್ಯಾನರ್ ಬಹೂಪಯೋಗಿಯಾಗಿದ್ದು, ಇಂಟೆಲ್‌ನ ಸೆನ್ಸರ್ ಆಧಾರಿತ ಕ್ಯಾಮೆರಾ, ನಿವಿಡಿಯಾದ ಗ್ರಾಫಿಕ್ಸ್ ಬೆಂಬಲಿತ ವ್ಯವಸ್ಥೆಯನ್ನು ಈ ಕಂಪ್ಯೂಟರ್‌ ಹೊಂದಿದ್ದು, ವೇಗವಾಗಿ ಮತ್ತು ಸುಲಲಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT