ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಂತ ಶುಷ್ಕ ಮರುಭೂಮಿ ‘ಅಟಕಾಮಾ’

Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅಟಕಾಮಾ

* ದಕ್ಷಿಣ ಅಮೆರಿಕದಲ್ಲಿ ಇರುವ ಅಟಕಾಮಾ ಮರುಭೂಮಿ ಅತ್ಯಂತ ಶುಷ್ಕವಾದುದು.
* ಪೆಸಿಫಿಕ್ ತೀರ ಮತ್ತು ಪೂರ್ವ ಆಂಡೀಸ್ ಪರ್ವತಗಳ 1,000 ಕಿ.ಮೀಗೂ ಹೆಚ್ಚು ಪ್ರದೇಶಕ್ಕೆ ವ್ಯಾಪಿಸಿದೆ.
* ಸಮುದ್ರ ಮಟ್ಟದಿಂದ 4 ಕಿ.ಮೀ ಎತ್ತರದಲ್ಲಿದೆ.
* ವಾರ್ಷಿಕ ಮಳೆ ಪ್ರಮಾಣ 0.1 ಮಿ.ಮೀ – 0.3 ಮಿ.ಮೀ
* ಚಿಲಿ, ಪೆರು, ಬೊಲಿವಿಯಾ ಮತ್ತು ಅರ್ಜೆಂಟೀನಾ ದೇಶಗಳಲ್ಲಿ ಇದು ಹರಡಿದೆ.

ಭೌಗೋಳಿಕ ಲಕ್ಷಣಗಳು
* ಆಂಡೀಸ್‌ ಪರ್ವತ ಶ್ರೇಣಿಯ ಜ್ವಾಲಾಮುಖಿ ವಲಯದಲ್ಲಿದೆ. ಆಂಡೀಸ್‌ ಪರ್ವತ ಶ್ರೇಣಿ ಮತ್ತು ಚಿಲಿ ಕರಾವಳಿ ಶ್ರೇಣಿಯ ಮಧ್ಯದಲ್ಲಿದೆ. ಹಾಗಾಗಿ ಈ ಪ್ರದೇಶಕ್ಕೆ ಯಾವುದೇ ಮಾರುತಗಳು ಅಥವಾ ತೇವಾಂಶ ಸಹಿತ ಗಾಳಿ ಪ್ರವೇಶಿಸುವುದಿಲ್ಲ.
* ಅತ್ಯಂತ ಹಳೆಯ ಮರುಭೂಮಿಯೂ ಹೌದು. ಟ್ರಯಾಸಿಕ್‌ ಕಾಲದಿಂದ ಅಂದರೆ, 30 ಲಕ್ಷ ವರ್ಷಗಳಷ್ಟು ಹಿಂದೆಯೇ ಇದು ರೂಪುಗೊಂಡಿದೆ.
* ಭೂಮಿಯ ಆಳದಲ್ಲಿ ಹೆಚ್ಚಿನ ಉಷ್ಣತೆ ಇರುವುದರಿಂದ ಅಂತರ್ಜಲ ಸಂಗ್ರಹ ಸಾಮರ್ಥ್ಯ ಕಡಿಮೆ ಇರುತ್ತದೆ.

ಪ್ರಾಣಿಗಳು
ಇಲ್ಲಿರುವ ಕೆಲ ಬೆಟ್ಟಗಳಲ್ಲಿ ಕೆಲವೇ ಕೆಲವು ಪ್ರಾಣಿಗಳು ಇವೆ. ಕೆಂಪು ಚೇಳು, ಚಿಟ್ಟೆ, ಅಟಕಾಮಾ ಕಪ್ಪೆ (ಚೌನಸ್‌ ಅಟಕಾಮೆನ್ಸಿಸ್‌), ಇಗುವಾನಾ, ಲಾವಾ ಲಿಜರ್ಡ್ಸ್‌ (ಹಲ್ಲಿ ಜಾತಿ) ಇವೆ.

ಪಕ್ಷಿಗಳ ಸಂಖ್ಯೆಯೇ ಹೆಚ್ಚು. ಹಂಬೋಲ್ಟ್‌ ಪೆಂಗ್ವಿನ್, ಆಂಡಿಯನ್ ಫ್ಲೆಮಿಂಗೊ, ಹಮಿಂಗ್ ಬರ್ಡ್‌ ಪ್ರಬೇಧದ ಕೆಲ ಪಕ್ಷಿಗಳು, ಚಿಲಿಯನ್ ವುಡ್‌ ಸ್ಟಾರ್‌ ಕಂಡು ಬರುತ್ತವೆ.‌

ಸಸ್ಯಗಳು
ಅತೀ ಕಡಿಮೆ ನೀರು ದೊರೆತರೂ ಈ ಮರುಭೂಮಿಯ ಗಡಿ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಪ್ರಬೇಧದ ಸಸ್ಯಗಳು ಕಂಡು ಬಂದಿವೆ. ಥೈಮ್, ಯರೆಟಾ, ಕ್ಯಾಕ್ಟಸ್ ಮುಂತಾದವು ಸಾಕಷ್ಟು ಪ್ರಮಾಣದಲ್ಲಿವೆ. ಸೆಪ್ಟೆಂಬರ್ – ನವೆಂಬರ್ ಅವಧಿಯಲ್ಲಿ ಇಲ್ಲಿನ ಗಿಡಗಳು ಹೂ ಬಿಡುತ್ತವೆ.

ಗಣಿಗಾರಿಕೆ
ನೈಸರ್ಗಿಕವಾಗಿ ಅತೀ ಹೆಚ್ಚು ಸೋಡಿಯಂ ನೈಟ್ರೇಟ್‌ ದೊರೆಯುವ ಏಕೈಕ ಸ್ಥಳ. ತಾಮ್ರ, ಬೆಳ್ಳಿ, ಬಂಗಾರ, ಕಬ್ಬಿಣ, ಬೋರಾನ, ಲೀಥಿಯಂ ಮುಂತಾದವು ಹೇರಳವಾಗಿ ದೊರಕುತ್ತವೆ.

ಬಾಹ್ಯಾಕಾಶ ವೀಕ್ಷಣಾಲಯ
ಇಲ್ಲಿನ ಆಕಾಶ ಸದಾ ಶುಭ್ರವಾಗಿದ್ದು, ಬಾಹ್ಯಾಕಾಶ ವೀಕ್ಷಣೆಗೆ ಮೋಡಗಳು ಅಡ್ಡಿ ಮಾಡುವುದಿಲ್ಲ. ವರ್ಷವಿಡೀ ಒಂದೇ ರೀತಿಯ ವಾತಾವರಣ, ಮಾಲಿನ್ಯರಹಿತ ಪರಿಸರ ಇರುತ್ತದೆ. ಹಾಗಾಗಿ ಇಲ್ಲಿ ಯುರೋಪಿಯನ್‌ ಸದರ್ನ್‌ ಅಬ್ಸರ್ವೇಟರಿಯು ಎರಡು ವೀಕ್ಷಣಾಲಯಗಳನ್ನು ಸ್ಥಾಪಿಸಿದೆ.

1. ಲಾ ಸಿಲಾ ವೀಕ್ಷಣಾಲಯ
2. ಅತೀ ದೊಡ್ಡ ದೂರದರ್ಶಕ ಒಳಗೊಂಡಿರುವ ‘ದಿ ಪರನಲ್ ವೀಕ್ಷಣಾಲಯ’.
* ಯುರೋಪ್‌, ಜಪಾನ್, ಅಮೆರಿಕ, ಕೆನಡಾ ಮತ್ತು ಚಿಲಿ ದೇಶಗಳು ಸೇರಿ ಅಕ್ಟೋಬರ್ 3, 2011ರಂದು ಇಲ್ಲಿನ ‘ಲಿಯಾನೊ ಡೆ ಚಜ್ನೇಂಟರ್ ವೀಕ್ಷಣಾಲಯ’ದಲ್ಲಿ ರೇಡಿಯೊ ಆಸ್ಟ್ರನಮಿ ದೂರದರ್ಶಕ (ಅಟಕಾಮಾ ಲಾರ್ಜ್‌ ಮಿಲಿಮೀಟರ್ ಅರ್ರೆ - ALMA) ಸ್ಥಾಪಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT