ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯ ಹೇಳುವ ಸಾಫ್ಟ್‌ವೇರ್‌

Last Updated 11 ಏಪ್ರಿಲ್ 2016, 19:33 IST
ಅಕ್ಷರ ಗಾತ್ರ

ಈಗ ಫೇಸ್‌ಬುಕ್‌ನಲ್ಲಿ ನಿಮ್ಮ ನಿಜವಾದ ಸ್ನೇಹಿತರು ಯಾರು? ಯಾರನ್ನು ನೀವು ಪ್ರೀತಿಸುತ್ತೀರಿ...? ಎಂಬಿತ್ಯಾದಿ ಸಂದೇಶಗಳು ಬರುವುದು ಸಾಮಾನ್ಯ. ಅದರ ಜೊತೆಗೆ ‘ನೀವು ಯಾವಾಗ ಸಾಯುತ್ತೀರಿ? ಹೇಗೆ ಸಾಯುತ್ತೀರಿ?’ ಎಂಬ ಲಿಂಕ್‌ ಕೂಡ ಇರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ಸಾವಿನ ವರ್ಷ ಹಾಗೂ ಸಾಯುವ ಕಾರಣ ಅಲ್ಲಿ ದಾಖಲಾಗುತ್ತದೆ. ಇವೆಲ್ಲಾ ಕೇವಲ ಮನರಂಜನೆಗೆ.

ಆದರೆ ಇಲ್ಲಿ ಹೇಳಹೊರಟಿರುವುದು ಅಂಥ ಮನರಂಜನೆಯ ಲಿಂಕ್‌ ಕುರಿತಾಗಿ ಅಲ್ಲ. ಬದಲಿಗೆ ನಮ್ಮ ದೇಹದಲ್ಲಿ ಇರುವ ಎಲ್ಲಾ ತೊಂದರೆಗಳನ್ನು ಗುರುತಿಸಿ ನಾವು ಸಾಯುವ ದಿನಾಂಕವನ್ನು ತಿಳಿಸಬಲ್ಲ ಸಾಫ್ಟ್‌ವೇರ್‌ ಒಂದನ್ನು ಅಮೆರಿಕದ ಈಸ್ಟ್ ಏಂಜಲಿಯಾ ಹೋಪ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡುಹಿಡಿಯುತ್ತಿದ್ದಾರೆ. ಮನುಷ್ಯರು ಹುಟ್ಟಿನಿಂದ ಸಾಯುವವರೆಗೂ ಎಷ್ಟು ಹಣವನ್ನು ಗಳಿಸುತ್ತಾರೆ ಹಾಗೂ ಎಷ್ಟು ಸಯಮವನ್ನು ವ್ಯರ್ಥಮಾಡುತ್ತಾರೆ ಎಂಬ ಅಂಕಿ ಅಂಶಗಳನ್ನು ಸಹ ಸಾಫ್ಟ್‌ವೇರ್‌ ತೋರಿಸಲಿದೆಯಂತೆ.

ಅಮೆರಿಕ ಇನ್‌ಸ್ಟಿಟ್ಯೂಟ್ ಅಂಡ್ ಫೆಕಲ್ಟಿ ಆಫ್ ಆ್ಯಕ್ಷುರಿಸ್ ಸಂಸ್ಥೆಯಿಂದ 10ಲಕ್ಷ ರೂಪಾಯಿಗಳ ಅನುದಾನದಿಂದ ವಿಜ್ಞಾನಿಗಳ ತಂಡ ಸಂಶೋಧನೆ ನಡೆಸಿದೆ. ನಾಲ್ಕು ವರ್ಷಗಳ ಈ ಅಧ್ಯಯನದಲ್ಲಿ ಜೀವನಶೈಲಿ ಬದಲಾವಣೆಯಿಂದ ಬರುವ ಕಾಯಿಲೆ ಬಗ್ಗೆ ವಿಜ್ಞಾನಿಗಳ ತಂಡವೂ ಮಾಹಿತಿ ಕಲೆ ಹಾಕಲಿದೆ. ದತ್ತಾಂಶ ವಿಶ್ಲೇಷಕರು, ಕಂಪ್ಯೂಟರ್ ವಿಜ್ಞಾನಿಗಳು, ವೈದ್ಯಕೀಯ ಸಿಬ್ಬಂದಿ, ಯುಇಎ ವೈದ್ಯಕೀಯ ಶಾಲೆ ವಿಜ್ಞಾನಿಗಳು ಸಂಶೋಧನೆ ನಡೆಸಲಿದ್ದಾರೆ. ಮನುಷ್ಯನ ಜೀವಿತಾವಧಿ ಹಾಗೂ ಆರೋಗ್ಯದ ಚಿಕಿತ್ಸೆ ಬಗ್ಗೆ ಹೆಚ್ಚು ಗಮನಹರಿಸುವುದು ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ.

‘ಮನುಷ್ಯನ ದೀರ್ಘಾಯುಷ್ಯ  ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ಕಲೆಹಾಕುವ ಅಂಕಿ ಅಂಶಗಳನ್ನು ಸಂಗ್ರಹಿಸುವ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸವುದು ನಮ್ಮ ಗುರಿ’ ಎಂದು ಸ್ಕೂಲ್ ಆಫ್ ಕಂಪ್ಯೂಟರ್‌ ಸೈನ್ಸಸ್‌ನ ಪ್ರಾಧ್ಯಾಪಕಿ ಎಲಿನಾ ಕುಲಿನಸ್ಕಯಾ ಹೇಳುತ್ತಾರೆ.

‘ಜನರನ್ನು ಸಂಶೋಧನೆಗೆ ಒಳಪಡಿಸಿದರೆ ಅವರ ಜೀವನ ಶೈಲಿ, ಅವರು ಪಡೆಯುವ ವೈದ್ಯಕೀಯ  ಚಿಕಿತ್ಸೆಗಳು ಮತ್ತು ಧೂಮಪಾನ ಮಾಡುವುದನ್ನು ನೋಡಿಯೇ ಅವರ ಆಯುಸ್ಸನ್ನು ಸಾಧಾರಣವಾಗಿ ನಿರ್ಧರಿಸಬಹುದು. ಈ ಸಾಫ್ಟ್‌ವೇರ್‌ ಮೂಲಕ ನಾವು ದೀರ್ಘ ಜೀವಿತಾವಧಿ ಮೇಲೆ ಹೇಗೆ ವಿವಿಧ ಕಾಯಿಲೆಗಳು ಮತ್ತು ಅವುಗಳ ಚಿಕಿತ್ಸೆಗಳು ಪ್ರಭಾವ ಬೀರುತ್ತವೆ ಎನ್ನುವುದನ್ನು ವಿಶೇಷವಾಗಿ ಅರ್ಥ ಮಾಡಿಕೊಳ್ಳಬಹುದು’ ಎನ್ನುತ್ತಾರೆ ಸಂಶೋಧಕರಲ್ಲಿ ಒಬ್ಬರಾಗಿರುವ ಪ್ರಾಧ್ಯಾಪಕಿ ಕುಲಿನ್‌ಸ್ಕಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT