ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿತಿದ್ದೇ ಗಾಂಧಿಯಿಂದ

Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಗಾಂಧೀಜಿಯ ಮಾತನ್ನು ಪತ್ರಿಕೆಯೊಂದರಲ್ಲಿ ಓದಿದ್ದೆ. ಅವರ ಬಗ್ಗೆ ಅಪಾರ ಅಭಿಮಾನ ಬೆಳೆಸಿಕೊಂಡಿದ್ದ ಈ ಮಾತು ಮನಸ್ಸಿಗೆ ಬಹುವಾಗಿ ನಾಟಿತ್ತು. ಅದುವರೆಗೂ ಓದಿನಲ್ಲಿ ಅಷ್ಟೊಂದು ಆಸಕ್ತಿ ಹೊಂದಿರದಿದ್ದ ನಂತರ ಓದಿನ ಕಡೆ ಆಸಕ್ತಿ ಬೆಳೆಸಿಕೊಂಡೆ. ಪದವಿ ಮುಗಿಸಿ ಉದ್ಯೋಗಕ್ಕೂ ಸೇರಿಕೊಂಡೆ.

ಹಳ್ಳಿ ಹೆಣ್ಣುಮಕ್ಕಳು ಬಯಸಿದಷ್ಟು ಓದಿ ವಿದ್ಯೆ ಗಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲವೆಂಬುದು ಹಳ್ಳಿಯಲ್ಲೇ ಹುಟ್ಟಿ ಬೆಳೆದ ನನಗೆ ಚೆನ್ನಾಗಿ ಬಲ್ಲ ವಿಷಯ. ಆದರೆ ನಾನು ಇಷ್ಟಾದರೂ ಓದಿಕೊಂಡಿದ್ದರಿಂದ ಇಂದು ನನ್ನ ಮಗಳಿಗೂ ಮನೆಪಾಠ ಹೇಳಿಕೊಡಲು ಅನುಕೂಲ ವಾಯಿತು. ಆಕೆ ಚೆನ್ನಾಗಿ ಓದಿ ಎಸ್ಸೆಸ್ಸೆಲ್ಸಿ ಹಾಗೂ ಪಿ.ಯು.ಸಿ.ಯಲ್ಲಿ ಉತ್ತಮ ಅಂಕ ಗಳಿಸಿ ಈಗ ಎಂಜಿನಿಯರಿಂಗ್‌ ಓದುತ್ತಿದ್ದಾಳೆ. ನಮ್ಮ ಅಕ್ಕ ಪಕ್ಕದ ಮನೆಗಳಲ್ಲಿರುವ ಕೆಲವು ಬಡ ಹೆಣ್ಣುಮಕ್ಕಳು ಆಗಾಗ ಬಂದು ನನ್ನಲ್ಲಿ ಮನೆಪಾಠ ಹೇಳಿಸಿಕೊಳ್ಳುತ್ತಾರೆ. ಹೆಣ್ಣುಮಕ್ಕಳೂ ಚೆನ್ನಾಗಿ ಓದಬೇಕೆಂಬುದು ನನ್ನ ಆಸೆ. ಅನಿಸಿಕೆ. ಇದಕ್ಕೆ ಗಾಂಧಿಯೇ ಪ್ರೇರಣೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT