ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್‌ಗೆ ಕಿವೀಸ್‌ ತಂಡ ಪ್ರಕಟ: ನಾಲ್ಕನೇ ಬಾರಿ ನಾಯಕರಾದ ವಿಲಿಯಮ್ಸನ್‌

Published 29 ಏಪ್ರಿಲ್ 2024, 5:28 IST
Last Updated 29 ಏಪ್ರಿಲ್ 2024, 5:28 IST
ಅಕ್ಷರ ಗಾತ್ರ

ವೆಲಿಂಗ್ಟನ್‌: ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ಜೂನ್‌ 2ರಿಂದ 30ರವರೆಗೆ  ನಡೆಯಲಿರುವ ಟಿ20 ವಿಶ್ವಕಪ್‌ಗೆ 15 ಆಟಗಾರರ ನ್ಯೂಜಿಲೆಂಡ್‌ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಅನುಭವಿ ಕೇನ್‌ ವಿಲಿಯಮ್ಸನ್‌ ತಂಡವನ್ನು ಮುನ್ನಡೆಸಲಿದ್ದಾರೆ.

ವಿಲಿಯಮ್ಸ್‌ ಪಾಲಿಗೆ ಇದು ಆರನೇ ಟಿ20 ವಿಶ್ವಕಪ್‌ ಮತ್ತು ನಾಯಕನಾಗಿ ನಾಲ್ಕನೇಯದ್ದು ಆಗಲಿದೆ.

ಆಲ್‌ರೌಂಡರ್‌ ರಚಿನ್ ರವೀಂದ್ರ ಮತ್ತು ವೇಗಿ ಮ್ಯಾಟ್‌ ಹೆನ್ರಿ ಅವರು ಮೊದಲ ಬಾರಿ ವಿಶ್ವಕಪ್‌ ತಂಡದಲ್ಲಿ ಆಡಲಿದ್ದಾರೆ. ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ದಾಖಲೆ 157 ವಿಕೆಟ್‌ಗಳನ್ನು ಪಡೆದಿರುವ 35 ವರ್ಷದ ಟಿಮ್‌ ಸೌಥಿ ಅವರು 34 ವರ್ಷದ ಟ್ರೆಂಟ್‌ ಬೌಲ್ಟ್‌ ಜೊತೆ  ವೇಗದ ದಾಳಿಯ ಹೊಣೆ ವಹಿಸಲಿದ್ದಾರೆ. ಬೌಲ್ಟ್‌ಗೆ ಇದು ಐದನೇ ಟಿ20 ವಿಶ್ವಕಪ್.

ವೇಗದ ಬೌಲರ್‌ಗಳಾದ ಆ್ಯಡಂ ಮಿಲ್ನ್‌ ಮತ್ತು ಕೈಲ್‌ ಜೇಮಿಸನ್ ಅವರು ಗಾಯಾಳಾಗಿದ್ದು ಅವಕಾಶ ಪಡೆದಿಲ್ಲ.

ಪ್ರಸಕ್ತ ಐಪಿಎಲ್‌ನಲ್ಲಿ ಹೆಬ್ಬೆರಳ ಗಾಯದಿಂದಾಗಿ ಹೊರಬಿದ್ದಿದ್ದ ಆರಂಭ ಆಟಗಾರ ಡೆವಾನ್‌ ಕಾನ್ವೆ ಅವರು ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ತಂಡ ಇಂತಿದೆ: ಕೇನ್‌ ವಿಲಿಯಮ್ಸನ್‌ (ನಾಯಕ), ಫಿನ್‌ ಅಲೆನ್‌, ಟ್ರೆಂಟ್‌ ಬೌಲ್ಟ್‌, ಮೈಕೆಲ್ ಬ್ರೇಸ್‌ವೆಲ್‌, ಮಾರ್ಕ್ ಚಾಪ್ಮನ್‌, ಡೇವನ್ ಕಾನ್ವೆ, ಲಾಕಿ ಫರ್ಗ್ಯೂಸನ್‌, ಮ್ಯಾಟ್‌ ಹೆನ್ರಿ, ಡೇರಿಲ್‌ ಮಿಚೆಲ್‌, ಜಿಮ್ಮಿ ನೀಶಮ್, ಗ್ಲೆನ್‌ ಫಿಲಿಪ್ಸ್‌, ರಚಿನ್ ರವೀಂದ್ರ, ಮಿಚೆಲ್‌ ಸ್ಯಾಂಟ್ನರ್, ಈಶ್‌ ಸೋಧಿ ಮತ್ತು ಟಿಮ್‌ ಸೌಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT