ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 World Cup| ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಹೊಸಮುಖ

ತಂಡಕ್ಕೆ ಮರಳಿದ ನಾಕಿಯಾ
Published 30 ಏಪ್ರಿಲ್ 2024, 12:50 IST
Last Updated 30 ಏಪ್ರಿಲ್ 2024, 12:50 IST
ಅಕ್ಷರ ಗಾತ್ರ

ಜೊಹಾನೆಸ್‌ಬರ್ಗ್: ಗಾಯದಿಂದ ಚೇತರಿಸಿಕೊಂಡಿರುವ ವೇಗದ ಬೌಲರ್ ಆ್ಯನ್ರಿಚ್ ನಾಕಿಯಾ ಅವರನ್ನು, ಜೂನ್ ತಿಂಗಳಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಆಡುವ ದಕ್ಷಿಣ ಆಫ್ರಿಕಾ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮಂಗಳವಾರ ಪ್ರಕಟಿಸಿದ ತಂಡದಲ್ಲಿ ಎರಡು ಹೊಸಮುಖಗಳಿವೆ.

ಏಡನ್ ಮರ್ಕರಂ ಮೊದಲ ಬಾರಿ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ವಿಕೆಟ್‌ ಕೀಪರ್ –ಬ್ಯಾಟರ್‌ ರ‍್ಯಾನ್‌ ರಿಕೆಲ್ಟನ್ ಮತ್ತು ವೇಗದ ಬೌಲರ್ ಒಟ್ನೀಲ್ ಬಾರ್ಟ್‌ಮನ್ ಮೊದಲ ಬಾರಿ ಅವಕಾಶ ಪಡೆದಿದ್ದಾರೆ.

ದೇಶೀಯ ಎಸ್‌ಎ20 ಲೀಗ್‌ಲ್ಲಿ ನೀಡಿದ ಅಮೋಘ ಪ್ರದರ್ಶನದಿಂದ ಇವರಿಬ್ಬರಿಗೆ ಅವಕಾಶ ದಕ್ಕಿದೆ. ರಿಕೆಲ್ಟನ್‌ 58.88 ಸರಾಸರಿಯಲ್ಲಿ 530 ರನ್ ಕಲೆಹಾಕಿದ್ದರು. ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಈಸ್ಟರ್ನ್ ಕೇಪರ್ ತಂಡದ ಪರ ಬಾರ್ಟ್‌ಮನ್ ಅವರು ಎಂಟು ಪಂದ್ಯಗಳಿಂದ 18 ವಿಕೆಟ್ ಪಡೆದಿದ್ದರು.

ವೇಗದ ಬೌಲರ್‌ಗಳಾದ ನಾಂಡ್ರೆ ಬರ್ಗರ್ ಮತ್ತು ಲುಂಗಿ ಗಿಡಿ ಅವರು ‘ಟ್ರಾವೆಲಿಂಗ್‌ ರಿಸರ್ವ್‌’ಗಳಾಗಿ ತಂಡದ ಜೊತೆ ಇರಲಿದ್ದಾರೆ. ನಾಕಿಯಾ ಅವರು 9 ತಿಂಗಳ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ:

ಏಡನ್‌ ಮರ್ಕರಂ (ನಾಯಕ), ಒಟ್ನೀಲ್ ಬಾರ್ಟ್‌ಮನ್, ಜೆರಾಲ್ಡ್‌ ಕೋಝಿ, ಕ್ವಿಂಟನ್ ಡಿಕಾಕ್‌, ಬ್ಯೋರ್ನ್ ಫೊರ್ಟಾನ್, ರೀಝಾ ಹೆಂಡ್ರಿಕ್ಸ್‌, ಮಾರ್ಕೊ ಯಾನ್ಸನ್, ಹೆನ್ರಿಚ್‌ ಕ್ಲಾಸೆನ್‌, ಕೇಶವ್ ಮಹಾರಾಜ್, ಡೇವಿಡ್‌ ಮಿಲ್ಲರ್, ಆ್ಯನ್ರಿಚ್‌ ನಾಕಿಯಾ, ಕಗಿಸೊ ರಬಾಡ, ರ‍್ಯಾನ್ ರಿಕೆಲ್ಟನ್, ತಬ್ರೇಜ್ ಸಂಶಿ ಮತ್ತು ಟ್ರಿಸ್ಟನ್ ಸ್ಟಬ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT