ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ಸ್‌: ಶಶಿಕಾಂತ್‌ ಅಂಗಡಿ ‘ವೇಗದ ರಾಜ’

ಶಾಟ್‌ಪಟ್‌ನಲ್ಲಿ ಆಳ್ವಾಸ್‌ ಕಾಲೇಜಿನ ವನಮ್‌ ಶರ್ಮಾಗೆ ಚಿನ್ನ
Last Updated 5 ಜನವರಿ 2022, 19:30 IST
ಅಕ್ಷರ ಗಾತ್ರ

ಮೂಡುಬಿದಿರೆ: ಬೆಂಗಳೂರು ವಿಶ್ವವಿದ್ಯಾಲಯದ ಶಶಿಕಾಂತ್‌ ಅಂಗಡಿ ಇಲ್ಲಿ ನಡೆಯುತ್ತಿರುವ 81 ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ಸ್‌ನಲ್ಲಿ ‘ವೇಗದ ರಾಜ’ನಾಗಿ ಹೊರಹೊಮ್ಮಿದರು.

ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಕಾಲೇಜು ಸಹಯೋಗದಲ್ಲಿ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ ಕೂಟದ ಎರಡನೇ ದಿನವಾದ ಬುಧವಾರಶಶಿಕಾಂತ್ 100 ಮೀಟರ್‌ ಓಟದ ಸ್ಪರ್ಧೆಯಲ್ಲಿ 10.47 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಇದೇ ವಿಭಾಗದಲ್ಲಿ ಅಮ್ಲಾನ್‌ ಬೋರ್ಗೊಹೈನ್ (ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಸ್ಟ್ರೀಯಲ್‌ ಟೆಕ್ನಾಲಜಿ ಡೀಮ್ಡ್‌ ವಿವಿ) ಮತ್ತು ತಮಿಳರಸು ಎಸ್,(ಭಾರತಿಯಾರ್ ವಿವಿ ಕೊಯಮತ್ತೂರು) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು.

ಎರಡನೇ ದಿನದ ಕೂಟದಲ್ಲಿ 2 ನೂತನ ದಾಖಲೆಗಳು ಮೂಡಿಬಂದವು. ಪಟಿಯಾಲದ ಪಂಜಾಬ್‌‌ ವಿಶ್ವವಿದ್ಯಾಲಯದ ಅಕ್ಷದೀಪ್‌ ಸಿಂಗ್20 ಕಿ.ಮೀ ನಡಿಗೆಯಲ್ಲಿ (ಕಾಲ: 1 ತಾಸು 26 ನಿಮಿಷ 9.08 ಸೆಕೆಂಡು), ಗುರುನಾನಕ್ ದೇವ್ ವಿಶ್ವವಿದ್ಯಾಲಯದ ಹರೇಂದ್ರ ಕುಮಾರ್ 1500 ಮೀಟರ್ಸ್ ಓಟದಲ್ಲಿ(ಕಾಲ: 3ನಿಮಿಷ 43.97 ಸೆಕೆಂಡು) ನೂತನ ಕೂಟ ದಾಖಲೆ ಬರೆದರು.

ಫಲಿತಾಂಶಗಳು:

100 ಮೀಟರ್ಸ್ ಓಟ: ಶಶಿಕಾಂತ್ ಅಂಗಡಿ (ಬೆಂಗಳೂರು ವಿವಿ)–1,ಮ್ಲಾನ್‌ ಬೋರ್ಗೊಹೈನ್ (ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಸ್ಟ್ರೀಯಲ್‌ ಟೆಕ್ನಾಲಜಿ ಡೀಮ್ಡ್‌ ವಿವಿ)–2, ತಮಿಳರಸು ಎಸ್,(ಭಾರತಿಯಾರ್ ವಿವಿ ಕೊಯಮತ್ತೂರು) –3. ಕಾಲ:0.47 ಸೆ.

400 ಮೀಟರ್‌ ಓಟ: ನಿತಿನ್ ಕುಮಾರ್ (ಚೌಧರಿ ಚರಣ್ ಸಿಂಗ್ ವಿವಿ)–1, ನಿಹಾಲ್ ಜೋಯಲ್ (ಮಂಗಳೂರು ವಿವಿ)–2, ಸುರೇಂದ್ರ ಎಸ್ -(ಭಾರತಿಯಾರ್ ವಿವಿ)– 3.ಕಾಲ: 47.28 ಸೆಕೆಂಡು.

1500 ಮೀ: ಹರೇಂದ್ರ ಕುಮಾರ್ (ಗುರುನಾನಕ್ ದೇವ್ ವಿವಿ) –1, ಪ್ರಿನ್ಸ್ (ಕುರುಕ್ಷೇತ್ರ ವಿವಿ) –2, ಪರ್ವೇಜ್ ಖಾನ್( ಮಂಗಳೂರು ವಿವಿ) –3.ಕಾಲ: ನೂತನ ದಾಖಲೆ: 3 ನಿಮಿಷ 43.97 ಸೆಕಂಡು (ಹಳೆಯದು: ಕೇರಳ ವಿವಿ ಅಭಿನಂದ್ ಸುಂದರೇಶನ್ 3 ನಿಮಿಷ 49.55 ಸೆಕೆಂಡು)

ಶಾಟ್‌ಪಟ್‌: ವನಮ್‌ ಶರ್ಮಾ(ಮಂಗಳೂರು ವಿವಿ)–1, ಸಾಹಿಬ್ ಸಿಂಗ್(ಪ್ರೊ. ರಾಜೇಂದ್ರ ಸಿಂಗ್‌ ವಿವಿ) –2, ಮನಕೀರತ್ ಸಿಂಗ್‌( ಲವ್ಲಿ ಪ್ರೊಫೆಷನಲ್‌ ವಿವಿ)– 3, ದೂರ:18.03 ಮೀ.

20 ಕಿ. ಮೀ ನಡಿಗೆ: ಅಕ್ಷದೀಪ್ ಸಿಂಗ್ (ಪಟಿಯಾಲ ಪಂಜಾಬ್‌ ವಿವಿ) -1,ಪರಮ್‌ಜೀತ್ ಸಿಂಗ್ (ಮಂಗಳೂರು ವಿವಿ)–2, ಹರ್‌ದೀಪ್ (ಮಂಗಳೂರು ವಿವಿ) –3.ಕಾಲ: ನೂತನ ದಾಖಲೆ: 1 ತಾಸು 26 ನಿಮಿಷ 9.08 ಸೆಕೆಂಡು (ಹಳೆಯದು: ಮಂಗಳೂರು ವಿವಿ ಆಳ್ವಾಸ್‌ ಕಾಲೇಜಿನ ಜುನೇದ್ ಕೆ.ಟಿ (ಕಾಲ: 1 ತಾಸು 26 ನಿಮಿಷ 39. 78 ಸೆಕೆಂಡು)

ಹೈಜಂಪ್: ಕೌಸ್ತುಭ ಜೆ. (ಲವ್ಲಿ ಪ್ರೊಫೆಶನಲ್ ವಿವಿ) –1, ಎಸ್. ಪೆದಕಾಮ ರಾಜು (ಆಚಾರ್ಯ ನಾಗಾರ್ಜುನ ವಿವಿ)–2, ಸ್ವಾಧಿನ್ ಕುಮಾರ್ (ಸಂಬಲ್‌ಪುರ್ ವಿವಿ)–3,

ಟ್ರಿಪಲ್ ಜಂಪ್: ಕೃಷ್ಣ ಸಿಂಗ್(ಮುಂಬೈ ವಿವಿ) –1, ಸೆಲ್ವ ಪ್ರಭು ಟಿ ( ಭಾರತಿದಾಸನ್ ವಿವಿ) –2, ಆಕಾಶ್ ಎಂ ವರ್ಗೀಸ್ (ಮಹಾತ್ಮ ಗಾಂಧಿ ವಿವಿ)–3,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT