ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಲಾಗದ ‘ಕ್ರಿಕೆಟ್‌ ವಿಶ್ವಕೋಶ’...

Last Updated 12 ಮೇ 2016, 19:54 IST
ಅಕ್ಷರ ಗಾತ್ರ

ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಏಳು ಬೀಳುಗಳ ಅವಿಭಾಜ್ಯ ಅಂಗವೇ ಆಗಿದ್ದ ವಿಶ್ವವಿಖ್ಯಾತ ವೀಕ್ಷಕ ವಿವರಣೆಗಾರ ಟೋನಿ ಕೋಜಿಯರ್  ಅವರ ಮಧುರ ಧ್ವನಿ ಮತ್ತೆ ಕೇಳಿಬರಲಾರದು.    

1940ರಲ್ಲಿ ಬ್ರಿಜ್‌ಟೌನ್ ನಲ್ಲಿ ಜನಿಸಿದ ಕೋಜಿಯರ್ ಎಳೆಯ ವಯಸ್ಸಿ ನಲ್ಲೇ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು.  ಕೆನಡಾದ ಒಟಾವಾ ಕಾರ್ಲೆಟನ್ ವಿಶ್ವವಿದ್ಯಾನಿಲಯ ದಲ್ಲಿ  ಪತ್ರಿಕೋದ್ಯಮ  ಅಭ್ಯಾಸ ಮಾಡಿ ದರು.  ವಿನ್ಸ್‌ಟನ್‌ ಅ್ಯಂಟನಿ ಲ್ಲಾಯ್ಡ್ ಕೋಜಿಯರ್ ಇವರ ಪೂರ್ಣ ಹೆಸರು.

ಆದರೆ ಇವರು ‘ಟೋನಿ ಕೋಜಿಯರ್’ ಎಂದೇ ಪ್ರಸಿದ್ಧ ರಾಗಿದ್ದರು. ಮೊದಲಿಗೆ ಹಾಕಿ ಪಂದ್ಯಗಳಲ್ಲಿ ಬಾರ್ಬಡಸ್ ಪರವಾಗಿ ಗೋಲ್ ಕೀಪರ್ ಆಗಿದ್ದು ನಂತರ  ವಾಂಡರರ್ಸ್ ಮತ್ತು ಕಾರ್ಲ್ಟನ್ ಕ್ರಿಕೆಟ್‌ ಕ್ಲಬ್‌ಗಳ ಪರ  ಆರಂಭಿಕ   ಬ್ಯಾಟ್ಸ್‌ಮನ್‌  ಹಾಗೂ ವಿಕೆಟ್ ಕೀಪರ್ ಆಗಿ ಆಡಿದ್ದರು. ಇವರ ತಂದೆ ಜಿಮ್ಮಿ ಕೋಜಿಯರ್ ಸಹ ಕ್ರಿಕೆಟ್ ಲೇಖಕರಾಗಿದ್ದು ‘ಸೈಂಟ್ ಲೂಸಿಯಾ’ ಎಂಬ ಪತ್ರಿಕೆಯ ನಿರ್ವಹಣಾ ಸಂಪಾದಕರಾಗಿದ್ದರು.  ‘ಬಾರ್ಬಡಸ್ ಡೈಲಿ ನ್ಯೂಸ್’  ಪತ್ರಿಕೆಯ ಸಂಸ್ಥಾಪಕರಾಗಿದ್ದರು.

ಈ ಮಾಧ್ಯಮದ ವಾತಾವರಣದಲ್ಲಿ ಬೆಳೆದ ಕೋಜಿಯರ್ 1958 ರಿಂದಲೇ ಕ್ರಿಕೆಟ್ ಬಗ್ಗೆ ಬರೆಯಲಾರಂಭಿಸಿದರು.  ನಂತರ 1965 ರಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ಪ್ರವಾಸ ಮಾಡಿದಾಗ ಅಧಿಕೃತವಾಗಿ ವೀಕ್ಷಕವಿವರಣೆಗೆ ಜೋತು ಬಿದ್ದರು. ಕೋಜಿಯರ್ ಸುಮಾರು 40 ವರ್ಷಗಳಲ್ಲಿ   266  ಟೆಸ್ಟ್ ಪಂದ್ಯಗಳನ್ನು ವೀಕ್ಷಿಸಿದರೆಂದು 2003ರಲ್ಲಿಯೇ ‘ವಿಸ್ಡನ್‌’ ವರದಿ ಮಾಡಿದೆ. ಆ ಬಳಿಕವೂ ಅವರು ಕ್ರಿಕೆಟ್‌ ವೀಕ್ಷಕ ವಿವರಣೆ ನೀಡುವಲ್ಲಿ ಸಕ್ರಿಯರಾಗಿದ್ದರು.

ನಿಷ್ಪಕ್ಷಪಾತ ವೀಕ್ಷಕ ವಿವರಣೆ ನೀಡುತ್ತಿದ್ದರಿಂದ ಅವರ ದನಿಯನ್ನು ಪದೇ ಪದೇ ಕೇಳಬೇಕು ಎನ್ನುವಷ್ಟರ ಮಟ್ಟಿಗೆ  ಆಕರ್ಷಕವಾಗಿತ್ತು. ಆದ್ದರಿಂದ  ಎಲ್ಲ ವರ್ಗದ ವೀಕ್ಷಕರಿಗೆ ಹಾಗೂ ರೇಡಿಯೊ ಶೋತ್ರುಗಳಿಗೆ  ಕೋಜಿಯರ್ ಹತ್ತಿರವಾಗಿದ್ದರು.

ಕೋಜಿಯರ್ ಕೆಲ ಕಾಲ ಬಿ.ಬಿ.ಸಿಯ ‘ಟೆಸ್ಟ್ ಮ್ಯಾಚ್ ಸ್ಪೆಷಲ್’ ವೀಕ್ಷಕ ವಿವರಣೆ ತಂಡದ ಸದಸ್ಯರಾಗಿದ್ದರು.  ಆಸ್ಟ್ರೇಲಿಯಾದ ‘ಚಾನೆಲ್ 9’ ಹಾಗೂ ‘ಸ್ಕೈ ಸ್ಪೋರ್ಟ್ಸ್’ ಸೇರಿದಂತೆ ಇನ್ನಿತರ ವಾಹಿನಿಗಳಲ್ಲಿ  ಕೆಲಸ ಮಾಡಿದ್ದಾರೆ. ಸುಮಾರು 22 ವರ್ಷ ‘ವೆಸ್ಟ್ ಇಂಡೀಸ್ ಕ್ರಿಕೆಟ್ ಆನ್ಯುಯಲ್’ ನ ಸಂಪಾದಕರಾಗಿದ್ದರು.

1958ರಲ್ಲಿ ಪ್ರಕಟವಾದ ‘ವೆಸ್ಟ್ ಇಂಡೀಸ್ -50 ಇಯರ್ಸ್ ಇನ್ ಟೆಸ್ಟ್ ಕ್ರಿಕೆಟ್’ ಎಂಬ ಪುಸ್ತಕವನ್ನು ಬರೆದರು.  1978ರಲ್ಲಿ ಪ್ರಕಟವಾದ ಈ ಪುಸ್ತಕಕ್ಕೆ ವಿಶ್ವದ ಸರ್ವಶ್ರೇಷ್ಠ ಆಲ್ ರೌಂಡರ್ ಗ್ಯಾರಿ ಸೋಬರ್ಸ್  ಮುನ್ನುಡಿ ಬರೆದಿದ್ದು ವಿಶೇಷ. ವೆಸ್ಟ್ ಇಂಡೀಸ್ ಕ್ರಿಕೆಟ್ ಬೆಳವಣಿ ಗೆಗೆ  ಅಪರಿಮಿತ  ಸೇವೆಸಲ್ಲಿಸಿದ್ದಕ್ಕಾಗಿ ಅವರ ಜ್ಞಾಪಕಾರ್ಥವಾಗಿ ಕೆನ್ಸಿಂಗ್‌ಟನ್ ಓವಲ್ ನಲ್ಲಿನ ‘ಪ್ರೆಸ್ ಬಾಕ್ಸ್’ಗೆ ಕೋಜಿಯರ್ ಹೆಸರಿಡಲಾಗಿದೆ. 2011ರಲ್ಲಿ ಕ್ರಿಕೆಟ್‌ನ  ಮೇರು ಸಂಸ್ಥೆ  ಎಂ.ಸಿ.ಸಿ  ಕ್ಲಬ್‌  ಇವರ ಸೇವೆಯನ್ನು ಗುರುತಿಸಿ ಅಜೀವ ಸದಸ್ಯತ್ವ  ನೀಡಿದೆ.

ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಒಂದು ಕಾಲದ ಅಧಿಪತ್ಯ ಮತ್ತು ಅದರ ಇತ್ತೀಚಿನ ಏಳು-ಬೀಳುಗಳನ್ನು ಹತ್ತಿರದಿಂದ ಕಂಡ ಕೋಜಿಯರ್   ಜನಪ್ರಿಯ ವೀಕ್ಷಕ ವಿವರಣೆಕಾರ ರಾಗಿದ್ದರು. ಸಾಕಷ್ಟು ತಾರೆಯರ ಜೊತೆ ಹಲವಾರು ಸಂದರ್ಭಗಳನ್ನು ಕಳೆದ ವರು. ಅನೇಕ ಕ್ರಿಕೆಟ್‌ ಮಂಡಳಿಗಳ ಜೊತೆ ನಿಕಟ ಸಂಪರ್ಕವನ್ನೂ ಹೊಂದಿ ದ್ದರು. ಆದರೆ ಕೋಜಿಯರ್ ಎಲ್ಲೂ ವಿವಾದಗಳ ಸುಳಿಗೆ ಸಿಲುಕಿದವರಲ್ಲ.

ಮಾತು ನಿಲ್ಲಿಸಿದ ಕೋಜಿಯರ್‌
ಬ್ರಿಜ್‌ಟೌನ್‌ (ಪಿಟಿಐ):  ವಿಶಿಷ್ಟ ಮತ್ತು ವಿಭಿನ್ನ ಶೈಲಿಯ ಮಾತುಗಾರಿಕೆಯ ಮೂಲಕ ಕ್ರಿಕೆಟ್‌ ವಲಯದಲ್ಲಿ ಹೆಸರುವಾಸಿಯಾಗಿದ್ದ  ವೀಕ್ಷಕ ವಿವರಣೆಗಾರ  ಟೋನಿ ಕೋಜಿಯರ್‌ (75) ಅವರು ಬುಧವಾರ ನಿಧನರಾಗಿದ್ದಾರೆ.

ಕ್ರೀಡಾ ಬರಹಗಾರ, ಪ್ರಸಾರಕ ಹಾಗೂ ಇತಿಹಾಸ ತಜ್ಞರೂ ಆಗಿದ್ದ ಟೋನಿ ಅವರು ವಯೋ ಸಹಜ ಖಾಯಿಲೆಗೆ ತುತ್ತಾಗಿದ್ದರು. ಕುತ್ತಿಗೆ ಮತ್ತು ಕಾಲಿನ ಭಾಗದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಅವರು ಮೇ 3ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ಟೋನಿ ತಂದೆ ಜಿಮ್ಮಿ ಅವರೂ ಪ್ರಸಿದ್ಧ  ಕ್ರೀಡಾ ಬರಹಗಾರರಾಗಿ ದ್ದರು. ಎಳವೆಯಿಂದಲೇ ತಂದೆಯ ಬರಹ ಗಳನ್ನು ಓದುತ್ತಾ  ಅವುಗಳಿಂದ ಪ್ರೇರಿತರಾಗಿ ಈ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡಿದ್ದರು.

‘ಕ್ರಿಕೆಟ್‌ ಲೋಕದ ಪಾಲಿಗೆ ಬುಧವಾರ ಕರಾಳ ದಿನ. ಟೋನಿ ಅವರ ಅಗಲಿಕೆ ನೋವು ತಂದಿದೆ’ ಎಂದು ದಿಗ್ಗಜ ಆಟಗಾರ ಮೈಕಲ್‌ ಹೋಲ್ಡಿಂಗ್‌ ತಿಳಿಸಿದ್ದಾರೆ.

‘ ನಾನು ಕಂಡ ಶ್ರೇಷ್ಠ ವೀಕ್ಷಕ ವಿವರಣೆಗಾರರಲ್ಲಿ ಟೋನಿ ಅವರೂ ಒಬ್ಬರು. ಅವರು ವೀಕ್ಷಕ ವಿವರಣೆ ನೀಡತ್ತಿದ್ದ ರೀತಿಗೆ ಮಾರು ಹೋಗದ ಕೇಳುಗರಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ನುಡಿದಿದ್ದಾರೆ.

‘ಟೋನಿ ಅವರನ್ನು ಬಹಳ ಇಷ್ಟಪಡುತ್ತಿದೆ. ಅವರ ಮಾತಿನ ಶೈಲಿ ನನ್ನನ್ನು ಬಹುವಾಗಿ ಆಕರ್ಷಿಸಿತ್ತು. ಅವರ ನಿಧನದ ಸುದ್ದಿ ಕೇಳಿ ಕಣ್ಣು ತುಂಬಿ ಬಂತು’ ಎಂದು ಸಂಜಯ್‌ ಮಾಂಜ್ರೇಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT