ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Samsung Galaxy A05: 4GB+128 GB ಸಾಮರ್ಥ್ಯದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ

Published 8 ನವೆಂಬರ್ 2023, 7:01 IST
Last Updated 8 ನವೆಂಬರ್ 2023, 7:01 IST
ಅಕ್ಷರ ಗಾತ್ರ

ಗುರುಗ್ರಾಮ: ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ ಸರಣಿಯ A05s ಸ್ಮಾರ್ಟ್‌ಫೋನ್‌ನ 4GB+128 GB ಸ್ಟೋರೇಜ್ ಸಾಮರ್ಥ್ಯದ ಪೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ₹ 12,499 ದರ ನಿಗದಿಪಡಿಸಿದೆ.

ಸದ್ಯ ಈ ಸ್ಮಾರ್ಟ್‌ಫೋನ್‌ 6GB+128GB ಸಾಮರ್ಥ್ಯದ ಸ್ಟೋರೇಜ್‌ನಲ್ಲಿ, ತಿಳಿ ಹಸಿರು, ತಿಳಿ ನೇರಳೆ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಇದಕ್ಕೆ ಈಗ ಕಡಿಮೆ ಸ್ಟೋರೇಜ್ ಸಾಮರ್ಥ್ಯದ ಫೋನ್ ಸೇರ್ಪಡೆಯಾಗಲಿದೆ.

50 ಎಂಪಿ ಸಾಮರ್ಥ್ಯದ ತ್ರಿಪಲ್‌ ಕ್ಯಾಮೆರಾ ಸೆಟಪ್ ಇರುವ ಈ ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಗುಣಮಟ್ಟದ ಚಿತ್ರ ತೆಗೆಯಬಹುದಾಗಿದೆ. 2 ಎಂಪಿ ಡೆಪ್ತ್ ಹಾಗೂ 2 ಎಂಪಿ ಮ್ಯಾಕ್ರೋ ಕ್ಯಾಮೆರಾಗಳು ಫೋಟೋಗ್ರಫಿಯನ್ನು ಇನ್ನಷ್ಟು ಉತ್ಕೃಷ್ಠವಾಗಿಸಲಿದೆ. ಸೆಲ್ಫಿ ಕ್ಯಾಮೆರಾ ಸಾಮರ್ಥ್ಯ 13 ಎಂಪಿ ಇದೆ.

6.71 ಇಂದು ಫುಲ್‌ ಎಚ್‌ಡಿ + 90Hz ಸ್ಕ್ರೀನ್‌ ಇದ್ದು, ಉತ್ತಮ ವೀಕ್ಷಣೆ ಅನುಭವ ಪಡೆಯಬಹುದಾಗಿದೆ. 5000 mAh ಬ್ಯಾಟರಿ ಸಾಮರ್ಥ್ಯ ಹಾಗೂ 25W ಸೂಪರ್ ಫಾಸ್ಟ್ ಚಾರ್ಜಿಂಗ್‌ ವ್ಯವಸ್ಥೆ ಇದೆ. 6nm Qualcomm Snapdragon 680 ಪ್ರೊಸೆಸರ್‌ ಬಳಕೆ ಅನುಭವವನ್ನು ನವಿರಾಗಿಸಲಿದೆ.

ದರ ಹಗೂ ಲಭ್ಯತೆ

Galaxy A05s: 6+128 GB – ₹ 14,999

Galaxy A05s: 4+128 GB – ₹ 13,499

ಸ್ಯಾಮ್‌ಸಂಗ್‌ನ ಎಲ್ಲಾ ಎಕ್ಸ್‌ಕ್ಲೂಸಿವ್ ಹಾಗೂ ರಿಟೈಲ್ ಸ್ಟೋರ್‌ಗಳಲ್ಲಿ, Samsung.com ಹಾಗೂ ಆನ್‌ಲೈನ್‌ ಶಾಪಿಂಗ್‌ ಆ್ಯಪ್‌ಗಳಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT