ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡೆಯಾಚೆಗೂ ರೋಬೊ ನೋಟ

Last Updated 19 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಜಗತ್ತಿನಲ್ಲಿ ಗೋಡೆಯ ಆಚೆ (ಗಾಜಿನ ತೆಳು ಗೋಡೆಯನ್ನು ಬಿಟ್ಟು) ಏನಾಗುತ್ತಿದೆ ಎಂಬುದನ್ನು ತಿಳಿಯಲು ಇರುವ ಒಂದೇ ಒಂದು ಸಾಧನವೆಂದರೆ ಕಿಟಕಿ. ಇದನ್ನು ಹೊರತುಪಡಿಸಿದರೆ ಗೋಡೆಯಾಚೆಗೆ ಇಣಕಲು ಅವಕಾಶ ಮಾಡಿಕೊಡಬಲ್ಲ ಬೇರೆ ಯಾವುದೇ ಸಾಧನ ಇಲ್ಲ ಎನ್ನಬಹುದು(ಸಿಸಿಟಿವಿ ಎಂಬುದೊಂದು ಪರ್ಯಾಯ ವ್ಯವಸ್ಥೆ).

ಇನ್ನು ಮುಂದೆ ದಪ್ಪದಾದ ಗೋಡೆಯ ಆಚೆಗೆ ಏನೇನು ಇದೆ ಎಂಬುದನ್ನು  ಎಕ್ಸ್‌ರೇ (ಕ್ಷ-–ಕಿರಣ) ದೃಷ್ಟಿ ಇರುವ ರೋಬೊ (ಯಂತ್ರಮಾನವನ) ಸಹಾಯದಿಂದ ನೋಡುವ ಅವಕಾಶವನ್ನು ಸಂಶೋಧಕರು ಕಲ್ಪಿಸಲಿದ್ದಾರೆ.

ಆಸ್ಪತ್ರೆಗಳಲ್ಲಿ ಬಳಸುವ ಎಕ್ಸ್‌ರೇ ಸಾಧನವು ಯಾವ ರೀತಿ ಕೆಲಸ ಮಾಡುತ್ತದೆಯೊ ಅದೇ ರೀತಿ ರೋಬೊಗಳಿಗೆ ಅಳವಡಿಸಿದ ತಂತ್ರಜ್ಞಾನ ಸಹ ಗೋಡೆ ಆಚೆಗೆ ಏನಿದೆ ಎಂಬುದನ್ನು ಎಕ್ಸ್‌ರೇ ನೋಟದ ಮೂಲಕ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
ರೋಬೊಗಳಿಗೆ ಅಳವಡಿಸಿರುವ ವೈ–ಫೈ ಸಹಾಯದಿಂದ ಗೋಡೆಯಾಚೆ  ನೋಡಬಲ್ಲ ತಂತ್ರಜ್ಞಾನವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಸಂತ ಬಾರ್ಬರಾ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಯಂತ್ರಮಾನವನಿಗೆ ಅಳವಡಿಸಿದ ‘ಎಕ್ಸ್‌ರೇ  ನೋಟ’ದ ಮೂಲಕ, ರೆಡಿಯ ಸಂಜ್ಞೆಯ ಸಹಾಯದಿಂದ ದಪ್ಪನಾದ ಗೋಡೆಯ ಆಚೆಗಿರುವ ವಸ್ತುಗಳನ್ನು, ಮನುಷ್ಯರನ್ನೂ ನೋಡಲು ಸಾಧ್ಯವಾಗುವಂತಾಗಿದೆ.

ಈ ತಂತ್ರಜ್ಞಾನವು ಗೋಡೆಯಾಚೆಗಿನ ದೃಶ್ಯವನ್ನಷ್ಟೇ ಅಲ್ಲದೆ ಆಚೆ ಇರುವ ವಸ್ತುವಿನ ಗುಣ ವಿಶೇಷ, ಆ ವಸ್ತು ಇರುವ ನಿಖರ ಜಾಗ ಮೊದಲಾದ ಮಾಹಿತಿಯನ್ನೂ ನೀಡಲಿದೆ ಎನ್ನುತ್ತಾರೆ ತಂತ್ರಜ್ಞರು.

ಅಲ್ಲದೇ, ಆಚೆ ಇರುವ ವಸ್ತು ಮನುಷ್ಯನೋ, ಕಬ್ಬಿಣವೋ ಅಥವಾ ಮರವೋ ಎಂಬುದನ್ನು ಗುರುತಿಸುವ ಸಾಮರ್ಥ್ಯವನ್ನೂ ಹೊಂದಿದೆ ಎನ್ನುತ್ತಾರೆ.



ಪ್ರಾಕೃತಿಕ ವಿಕೋಪ, ಮಾನವ ನಿರ್ಮಿತ  ಅವಘಡಗಳಾದಾಗ ಹುಡುಕಾಟ ಮತ್ತು ಪರಿಹಾರ ಕಾರ್ಯಾಚರಣೆ ಸಂದರ್ಭ ಜನರಿಗೆ ಕಾರ್ಯನಿರ್ವಹಿಸಲು ಆಗದೇ ಇರುವ ಜಾಗಗಳಲ್ಲಿ ಈ ರೋಬೊಗಳನ್ನು ಬಳಸಿಕೊಂಡು ಸುಲಭವಾಗಿ ಮತ್ತು ವೇಗವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗಲಿದೆ. ರೋಬೊಗಳಲ್ಲಿ ಅಳವಡಿಸಿದ ಈ ತಂತ್ರಜ್ಞಾನವು ಬಹುಪಯೋಗಿ ಆಗುವ ಸಾಧ್ಯತೆಯಿದೆ.

ಈ ತಂತ್ರಜ್ಞಾನವನ್ನು ವೈ–ಫೈ ಇರುವ ಯಾವುದೇ ಸಾಧನದಲ್ಲೂ ಬಳಸಬಹುದು ಎಂಬುದು ತಂತ್ರಜ್ಞರ ತಂಡದ ವಿವರಣೆ.
ಮುಖ್ಯವಾಗಿ ಈ ತಂತ್ರಜ್ಞಾನದ ಸಹಾಯದಿಂದ ಒಂದು ನಿರ್ದಿಷ್ಟ ಪರಿಸರ ಮತ್ತು ಅಲ್ಲಿರುವ ವಸ್ತು ಮತ್ತು ಜನರ ಮೇಲೆ ನಿಗಾ ವಹಿಸಬಹುದಾಗಿದೆ. ಏಕಾಏಕಿ ಆಗಮಿಸುವವರು, ವೃದ್ಧರು ಮತ್ತು ಮಕ್ಕಳ ಮೇಲೆ  ಲಕ್ಷ್ಯ ವಹಿಸಲು ಇದು ತಂಬಾ ಪ್ರಯೋಜನಕಾರಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT