ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಮಟ್ಟದ ಮೆರುಗು ತಂದ ಕಾಫಿಪುಡಿ ಸಾಕಮ್ಮ

Published 21 ಅಕ್ಟೋಬರ್ 2023, 0:02 IST
Last Updated 21 ಅಕ್ಟೋಬರ್ 2023, 0:02 IST
ಅಕ್ಷರ ಗಾತ್ರ

ವಾಣಿಜ್ಯ ಬೆಳೆ ಕಾಫಿ ರಾಜ್ಯ ಸೇರಿ ದೇಶ, ವಿದೇಶದಲ್ಲಿ ವ್ಯಾಪಕವಾಗಿ ಪರಿಚಯಿಸಿದ ಕೀರ್ತಿ ಮಹಿಳೆಗೆ ಸಲ್ಲುತ್ತದೆ. ಕಾಫಿಯೊಂದಿಗೆ ತಮ್ಮ ಹೆಸರನ್ನು ಅನ್ವರ್ಥವಾಗಿಸಿ ಕೊಂಡವರು ಅವರೆ ಕೊಡಗಿನ ಸೋಮವಾರಪೇಟೆಯ ಸಾಕಮ್ಮ.

‘ಕಾಫಿಪುಡಿ ಸಾಕಮ್ಮ’ ಅಲ್ಲದೆ ಇವರ ಶಾಪ್ ‘ಸಾಕಮ್ಮಾಸ್ ಕಾಫಿ’ ಎಂದೆ ಹೆಸರು ಮಾಡಿದೆ. 1880ರಲ್ಲಿ ತುಮಕೂರು ಜಿಲ್ಲೆ ಬಿದಿರೆ ಗ್ರಾಮದಲ್ಲಿ ಜನಿಸಿದರು. ಸಾಕಷ್ಟು ಆರ್ಥಿಕ ಮುಗ್ಗಟ್ಟಿನಿಂದ ಬಸವಳಿದಿದ್ದ ಸಾಕಮ್ಮ ತನಗಿಂತ ವಯಸ್ಸಿನಲ್ಲಿ ತುಂಬಾ ಹಿರಿಯರಾದ ಸೋಮವಾರಪೇಟೆಯ ಸಾಹುಕಾರ ದೊಡ್ಡಮನೆ ಬಸಪ್ಪ ಅವರನ್ನು ಮದುವೆಯಾದರು. ಮದುವೆಯಾದ ಎರಡೇ ವರ್ಷಗಳಲ್ಲಿ ವೈಧವ್ಯ ಅನುಭವಿಸಬೇಕಾಯಿತು. 

ಬಸಪ್ಪನವರ ಮೊದಲ ಪತ್ನಿ ಅನಕ್ಷರಸ್ಥರಾಗಿದ್ದರು. ಕುಟುಂಬ, ಕೃಷಿ, ಆರ್ಥಿಕ ವಹಿವಾಟಿನ ಜವಾಬ್ದಾರಿ ಸಾಕಮ್ಮನವರ ಮೇಲೆ ಬೀಳುತ್ತದೆ. ತೀಕ್ಷ್ಣಬುದ್ಧಿಯುಳ್ಳ ಸಾಕಮ್ಮ ಜಾಣ್ಮೆಯಿಂದ ನೂರಾರು ಎಕರೆ ಕಾಫಿ ತೋಟದ ಉಸ್ತುವಾರಿ ವಹಿಸಿಕೊಂಡು ಕಾಫಿ ಇಳುವರಿ ಹೆಚ್ಚಾಗಲು ಕಾರಣರಾದರು. ನಂತರ ಉತ್ಪನ್ನದ ವಿಲೇವಾರಿಗೆ ಯೋಜನೆಗಳನ್ನು ಹಾಕಿಕೊಂಡರು. 

1920ರಲ್ಲಿ ಬಸವನಗುಡಿಯ ಬುಲ್ ಟಂಪಲ್  ರೋಡಿನಲ್ಲಿ ಕಾಫಿ ಕ್ಯೂರಿಂಗ್ ಘಟಕವನ್ನು ಸ್ಥಾಪಿಸಿದರು. ಹಾಗೆ ಕಾಫಿಯನ್ನು ಬೆಂಗಳೂರಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಕಾಫಿ ಸಂಸ್ಕರಣೆಗೆ ಅಗತ್ಯವಾದ ಯಂತ್ರ ಗಳನ್ನು ಇಂಗ್ಲೆಂಡಿನಿಂದ ಆಮದು ಮಾಡಿಕೊಂಡು ಕಾಫಿ ಉದ್ಯಮವನ್ನು ಜನಪ್ರಿಯಗೊಳಿಸಿದರು.

ಆಗಿನ ಕಾಲಕ್ಕೆ ಬ್ರಿಟಿಷರೊಡಗೂಡಿ ಕಾಫಿಯನ್ನು ಹಡಗಿನಲ್ಲಿ ರಪ್ತು ಮಾಡಿದರು. ಸಾಕಮ್ಮ ಯಶಸ್ವಿ ಉದ್ಯಮಿ ಮಾತ್ರವಲ್ಲ ಸಮಾಜಸೇವೆಯಲ್ಲೂ ನಿರತರಾಗಿ ವಿಶ್ವೇಶ್ವರಪುರಂನಲ್ಲಿ ವಿದ್ಯಾರ್ಥಿನಿಲಯ ಸ್ಥಾಪಿಸಿದರು. ಅನೇಕ ಸಂಸ್ಥೆಗಳಿಗೆ ದತ್ತಿ ನೀಡಿದರು. ಅಂದಿಗೆ ಸಾಕಮ್ಮ ಇದ್ದ ಪ್ರದೇಶ ‘ಸಾಕಮ್ಮ ಗಾರ್ಡನ್’ ಎಂದೇ ಪ್ರಸಿದ್ಧಿಯಾಗಿದೆ.

ಉದ್ಯಮಶೀಲತೆ ಗಮನಿಸಿ ಅಂದಿನ ಮೈಸೂರು ಸರ್ಕಾರ ಕೈಗಾರಿಕ ಅಭಿವೃದ್ಧಿ ಸಮಿತಿ ಮಾಡಿ ಅದಕ್ಕೆ ಸಾಕಮ್ಮ ಅವರನ್ನು ಮುಖ್ಯಸ್ಥೆಯನ್ನಾಗಿ ನೇಮಕ ಮಾಡಿತು. ಶ್ರೀ ಕೃಷ್ಣ ಒಡೆಯರ್ ‘ಲೋಕಸೇವಾ ಪಾರಾಯಣೆ’ ಎಂಬ ಬಿರುದು ನೀಡಿದ್ದರು. ಸೀಮಿತ ಅವಕಾಶದಲ್ಲಿ ಗಣನೀಯ ಸೇವೆ ಮಾಡಿದ ಸಾಕಮ್ಮನವರಿಗೆ ಬ್ರಿಟಿಷ್ ಸರಕಾರ ‘ಕೈಸರ-ಇ–ಹಿಂದ್(JEWEL OF INDIA) ಪ್ರಶಸ್ತಿಯನ್ನು ನೀಡಿತ್ತು.

ಉದ್ಯಮಿಯಾಗಿ ಕರ್ನಾಟಕದ ಕಾಫಿಗೆ ಅಂತರರಾಷ್ಟ್ರೀಯ ಮೌಲ್ಯ ತಂದುಕೊಟ್ಟರು. ಅಲ್ಲದೆ 1928ರಲ್ಲಿ ಮೈಸೂರು ಪ್ರತಿನಿಧಿ ಸಭೆಗೆ ಆಯ್ಕೆಯಾದ ಮಹಿಳೆ ಎಂಬ ಕೀರ್ತಿಗೂ ಭಾಜನರಾದರು. 

v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT