ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗು ತಿಂದರೆ ಆರೋಗ್ಯ

Last Updated 9 ಮೇ 2014, 19:30 IST
ಅಕ್ಷರ ಗಾತ್ರ

ಇಂಗಿಗೆ ಆಯುರ್ವೇದದಲ್ಲಿ ಬಹು ಮುಖ್ಯ ಸ್ಥಾನ. ಅಡುಗೆ ರುಚಿ ಹೆಚ್ಚಿಸುವಲ್ಲಿ ಇದಕ್ಕೆ ಎಷ್ಟು ಮಹತ್ವ ಇದೆಯೋ, ಅಷ್ಟೇ ಮಹತ್ವವುಳ್ಳ ಔಷಧೀಯ ಗುಣಗಳು ಇದರಲ್ಲಿ ಇವೆ.

*ಋತುಸ್ರಾವ ಸಮಸ್ಯೆಗಳಾದ ನೋವು, ಸೆಳೆತ ಅನಿರ್ದಿಷ್ಟಾವಧಿಯ ಸ್ರಾವ ಮೊದಲಾದ ತೊಂದರೆ ಪರಿಹಾರಕ್ಕೆ ಇಂಗು ರಾಮಬಾಣ. ಋತುಸ್ರಾವದ ಹಿಂದಿನ ದಿನ ಚಿಟಿಕೆ ಇಂಗನ್ನು ಬಾಳೆಹಣ್ಣಿನ ಜೊತೆ ತಿಂದರೆ ಹೊಟ್ಟೆ ನೋವು ಬರುವುದಿಲ್ಲ. ಕ್ಯಾಂಡಿಡಾ ಸೋಂಕು ಹಾಗೂ ಬಿಳಿ ಸೆರಗು ತೊಂದರೆಗಳಿಗೂ ಇಂಗಿನ ಸೇವನೆ ಪ್ರಯೋಜನಕಾರಿ.

*ಇಂಗನ್ನು ಸ್ವಲ್ಪ ನೀರಿನೊಂದಿಗೆ ಕರಗಿಸಿ ಹಚ್ಚುವುದರಿಂದ ಮೊಡವೆ ಕ್ರಮೇಣ ನಿವಾರಣೆಯಾಗುತ್ತದೆ.

*ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ  ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದು ರೂಢಿಯಲ್ಲಿದೆ. ಒಂದು ಚಿಟಿಕೆ ಇಂಗನ್ನು ಅರ್ಧ ಲೋಟ ಬಿಸಿ ನೀರಿನೊಂದಿಗೆ ಸೇವಿಸಿದರೆ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್‌ ಸಮಸ್ಯೆ ನಿವಾರಣೆಯಾಗುತ್ತದೆ

*ಶ್ವಾಸನಾಳದ ಸೋಂಕು ಚಿಕಿತ್ಸೆಗಾಗಿ ಇಂಗು ಪ್ರಯೋಜನಕಾರಿ. ಜೇನು ಮತ್ತು ಶುಂಠಿ ಬೆರೆಸಿ ಇಂಗನ್ನು ಸೇವಿಸಿದರೆ ತೀವ್ರವಾದ ಒಣ ಕೆಮ್ಮು, ನಾಯಿ ಕೆಮ್ಮು, ಅಸ್ತಮಾ ಉಪಶಮನವಾಗುತ್ತವೆ.

*ಒಂದು ಚಮಚ ವೀಳ್ಯದೆಲೆ ರಸದ ಜೊತೆಗೆ ಕಾಲು ಚಮಚ ಬಿಳಿ ಈರುಳ್ಳಿ ರಸ, 2 ಚಮಚ ಜೇನುತುಪ್ಪದಲ್ಲಿ ಇಂಗು ತೇದು ಮಕ್ಕಳಿಗೆ ನೆಕ್ಕಿಸಿದರೆ ಕೆಮ್ಮು, ಉಬ್ಬರ ಕಡಿಮೆಯಾಗುತ್ತದೆ.

*ಇಂಗು, ಶುಂಠಿ, ಏಲಕ್ಕಿ, ಸೈಂದವ ಉಪ್ಪನ್ನು ಬೆರೆಸಿ ಬಿಸಿ ನೀರಿನಲ್ಲಿ ಕುಡಿದರೆ ಹಸಿವು ಹೆಚ್ಚುತ್ತದೆ.

*ಉರಿಯೂತ, ಜಂತು ಹುಳುಗಳು, ವಾಯು ಇತ್ಯಾದಿ ಜೀರ್ಣಕ್ರಿಯೆ ಸಮಸ್ಯೆಗಳನ್ನು ಪರಿಹರಿಸಲು ಇಂಗು ಸಹಕಾರಿ. ಅರ್ಧ ಲೋಟ ನೀರಿಗೆ ಚಿಟಿಕಿ ಇಂಗು ಹಾಕಿ ಕರಗಿಸಿ ಕುಡಿದರೆ ಅಜೀರ್ಣ ಸಮಸ್ಯೆ ಪರಿಹಾರವಾಗುತ್ತದೆ.

*ಇದು ಮಧುಮೇಹ ನಿವಾರಕವೂ ಆಗಿದೆ. ಮೇದೋಜೀರಕ ಜೀವಕೋಶ­ಗಳ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಹೆಚ್ಚು ಇನ್ಸುಲಿನ್ ಸ್ರವಿಸುವಂತೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು, ಬೇಯಿಸಲಾದ ಹಾಗಲಕಾಯಿಯ ಜೊತೆಗೆ ಇಂಗನ್ನು ಬೆರೆಸಿ ಸೇವಿಸಬಹುದು.

*ಇಂಗು ಸೇವನೆಯಿಂದ ರಕ್ತ ತೆಳುವಾಗುತ್ತದೆ ಹಾಗೂ ರಕ್ತವನ್ನು ಹೆಪ್ಪುಗಟ್ಟದಂತೆ ತಡೆಯುತ್ತದೆ. ಇಂಗನ್ನು ಹೆಪ್ಪುರೋಧಕ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುತ್ತದೆ. ಇದು ಕೊಲೆಸ್ಟ್ರಾಲ್ ಬರದಂತೆ ತಡೆಯುತ್ತದೆ.

*ಇದು ನರವನ್ನು ಪ್ರಚೋದಿಸುತ್ತದೆ. ಆದ್ದರಿಂದ ಹಿಸ್ಟೇರಿಯಾ, ಸೆಳೆವು, ಸಿಂಕೋಪ್ ಮತ್ತು ಇತರ ನರ ಸಂಬಂಧಿ ಅಸ್ವಸ್ಥತೆಗಳನ್ನು ನಿವಾರಿಸಬಲ್ಲುದು.

*ನೀರಿನಲ್ಲಿ ಕರಗಿದ ಇಂಗು ತಲೆನೋವು ಅಥವಾ ಮೈಗ್ರೇನ್ ನಿವಾರಣೆಗೆ ಸಹಾಯ ಮಾಡುತ್ತದೆ.

*ನಿಂಬೆರಸದಲ್ಲಿ ಇಂಗನ್ನು ಬೆರೆಸಿ ಸೇವಿಸುವುದು ಹಲ್ಲಿನ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು.

*ಇಂಗು ಅಫೀಮು ಪರಿಣಾಮವನ್ನು ತಗ್ಗಿಸುವ, ಅದರ ವಿಷಕ್ಕೆ ಪ್ರತಿವಿಷವಾಗಿ ವರ್ತಿಸುವ ಔಷಧೀಯ ಗುಣವನ್ನು ಹೊಂದಿದೆ.

*ಇಂಗು, ಪ್ರಬಲ ಆಕ್ಸಿಡೆಂಟ್ ವಿರೋಧಿ ಔಷಧವಾಗಿದೆ. ಇದು ದೇಹದ ಜೀವಕೋಶಗಳನ್ನು ‘ರ್‌್ಯಾಡಿಕಲ್ಸ್' ನಿಂದ ರಕ್ಷಿಸುತ್ತದೆ. ಅಧ್ಯಯನಗಳ ಪ್ರಕಾರ, ಇಂಗು ಕ್ಯಾನ್ಸರ್ ವಿರೋಧಿ ವಸ್ತುವಾಗಿದ್ದು, ಪ್ರಾಣಾಂತಕ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

*ಚರ್ಮ ರಕ್ಷಣೆಗಾಗಿ ಬಳಸುವ ಹಲವಾರು ಉತ್ಪನ್ನಗಳಲ್ಲಿ ಔಷಧೀಯ ಗುಣವನ್ನು ಹೊಂದಿರುವ ಇಂಗನ್ನು ಪರಿಣಾಮಕಾರಿ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇದನ್ನು ನೇರವಾಗಿ ಚರ್ಮದ ಪೋಷಣೆಗೆ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT