ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಳಿಯದಿರಿ ಬಿಸಿಲಿಗೆ

Last Updated 10 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಅಬ್ಬಾ! ಉರಿ ಉರಿ ಬಿಸಿಲು... ಮನೆಯಿಂದಾಚೆ ಹೋಗುವುದೇ ಬೇಡ... ತಂಪಾಗಿ ಮನೆಯೊಳಗೆ ಇದ್ದರೆ ಸಾಕು ಅನಿಸುತ್ತದೆ ನಮಗೆ. ಆದರೆ ಮಕ್ಕಳಿಗೆ ಹಾಗಲ್ಲ. ಗೆಳೆಯರೊಂದಿಗೆ ಸೇರಿ ಆಡುವುದು ಕುಣಿಯುವುದರಲ್ಲೇ ತಣಿಯುತ್ತಾರೆ.

ರಜಾ ಮಜಾವನ್ನು ಹಾಳು ಮಾಡದೆ ಬಿಸಿಲ ಉರಿಯಲ್ಲಿ ಬೇಯದಹಾಗೆ ತಾಯಿ ರಕ್ಷಿಸಿಕೊಳ್ಳಬೇಕಾಗುತ್ತದೆ.  ಅದರಲ್ಲೂ ಊಟ-ತಿಂಡಿ, ಉಡುಗೆ- ತೊಡುಗೆಯ ವಿಚಾರದಲ್ಲಂತೂ ಇನ್ನಷ್ಟು ಮುತುವರ್ಜಿ ವಹಿಸುವ ಅಗತ್ಯವಿರುತ್ತದೆ. ತಾಯಂದಿರು ಮಕ್ಕಳ ವಿಚಾರದಲ್ಲಿ ನೆಮ್ಮದಿಯಿಂದರಬೇಕೆಂದರೆ ಈ ರೀತಿಯ ಕೆಲವು ಕಾಳಜಿ ವಹಿಸಬೇಕಾಗುತ್ತದೆ.

ಮಕ್ಕಳ ತುಂಟಾಟಕ್ಕೂ ಮುಂಚೆ
*ಉರಿ ಬಿಸಿಲಿನ  ಸಮಯದಲ್ಲಿ ಮನೆಯೊಳಗೇ ಆಟವಾಡಲು ಕಲಿಸಿ.  ಕ್ರಾಫ್ಟ್ ಅಥವಾ ಪುಸ್ತಕ ಓದಲು ಪ್ರೋತ್ಸಾಹಿಸಿ. ಮಧ್ಯಾಹ್ನ ನಾಲ್ಕು ಗಂಟೆಯ ನಂತರ ಹೊರಾಂಗಣದ ಆಟಗಳಲ್ಲಿ ತೊಡಗುವಂತೆ ನೋಡಿಕೊಳ್ಳಿ.

*ಬಿಸಿಲಲ್ಲಿ ಆಡಲು ಹೋಗುವಾಗ ಸನ್ ಬರ್ನ್‌ಗೆ ಬಳಸುವಂತಹ ಕ್ರೀಮ್‌ಗಳನ್ನು ಹಚ್ಚಿಯೇ ಕಳುಹಿಸಿ.
*ಹೆಚ್ಚು ಬಿಸಿಲಲ್ಲೇ ಆಡುವುದರಿಂದ ಮಕ್ಕಳ ತ್ವಚೆಯ ಮೇಲೆ  ಕಲೆಯಾಗುವ ಸಾಧ್ಯತೆಗಳಿರುತ್ತವೆ. ಮುಖದ ಮೇಲೆ ಬಿಸಿಲು ಬೀಳದಂತೆ ಟೋಪಿ, ಉದ್ದ ಕೈತೋಳಿನ ಅಂಗಿ ತೊಡಿಸಿ.

*ಆದಷ್ಟು ಹತ್ತಿ ಬಟ್ಟೆಯನ್ನೇ ತೊಡಿಸಿ. ಇದರಿಂದ ಮಕ್ಕಳ ತ್ವಚೆಯ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರದು.
*ಆಡಲು ಹೋಗುವಾಗ ಕೈ ಕಾಲುಗಳಿಗೆ ಸಾಕ್ಸ್ ತೊಡಿಸಬೇಡಿ. ಇದರಿಂದ ಕೈ ಮತ್ತು ಕಾಲುಬೆರಳುಗಳ ಮಧ್ಯೆ ಬೆವರನಿಂದಾಗಿ ಸೋಂಕು ಅಥವಾ ಅಲರ್ಜಿ ಉಂಟಾಗಬಹುದು.

ಬಿಸಿಲಿಗೆ ತಂಪು ಆಹಾರ
ಆಡುವ ಗುಂಗಿನಲ್ಲಿ ಮಕ್ಕಳು ಊಟ ತಿಂಡಿ ಮರೆಯುವುದು ಸಹಜ. ಹಾಗಾಗಿ ತಾಯಂದಿರು ಸ್ವಲ್ಪ ಜಾಣ್ಮೆಯನ್ನು ಉಪಯೋಗಿಸಬೇಕು.
*ಹೆಚ್ಚು ಬೆವರುವುದರಿಂದ ಊಟಕ್ಕಿಂತ ಹೆಚ್ಚು ಏನಾದರೂ ತಂಪಾಗಿ ಕುಡಿಯಲು ಇಷ್ಟ ಪಡುತ್ತಾರೆ. ಮನೆಯಲ್ಲಿಯೇ ತಯಾರಿಸಿದ ಮಜ್ಜಿಗೆ, ಪಾನಕಗಳನ್ನು ಕೊಡಿ.

*ಫ್ರಿಜ್‌ನಲ್ಲಿ ಇಟ್ಟ ನೀರು ಮಕ್ಕಳ ಆರೋಗ್ಯ ಹಾಳುಮಾಡಬಹುದು. ಅದಕ್ಕಾಗಿ ಕಾದಾರಿಸಿದ ನೀರನ್ನು ಮಡಕೆಯಲ್ಲಿ ತುಂಬಿಡಿ. 
*ಈ ಸಮಯದಲ್ಲಿ ವಿವಿಧ ಬಗೆಯ ರಸ ಭರಿತ ಹಣ್ಣುಗಳು ಮಾರುಕಟ್ಟೆಯಲ್ಲಿ ದೊರೆಯುವುದರಿಂದ ಮಕ್ಕಳು ಏನಾದರೂ ತಿನ್ನಲು ಇಷ್ಟ ಪಟ್ಟಾಗ ಮೂರ್ನಾಲ್ಕು ಬಗೆಯ ಹಣ್ಣಿನ ತುಂಡುಗಳನ್ನು ಒಂದು  ಬಟ್ಟಲಿಗೆ ಹಾಕಿ ಅದರ ಮೇಲೆ ಸ್ವಲ್ಪ ಜೇನು ತುಪ್ಪ ಅಥವಾ ಚಾಟ್ ಮಸಾಲೆ ಉದುರಿಸಿ ಕೊಡಿ. ಆಗ ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ.

*ಬಿಸಿಲ ಬೇಗೆಗೆ ಅನ್ನ, ಚಪಾತಿ, ದೋಸೆ, ಇಡ್ಲಿಯಂತಹ ತಿಂಡಿ ಯನ್ನು ಮಕ್ಕಳು ಇಷ್ಟ ಪಡದೆ ಇರಬಹುದು. ಆ ಸಮಯದಲ್ಲಿ ಕಾರ್ನ್ ಫ್ಲೇಕ್ಸ್‌ಗೆ ತಂಪಾದ ಹಾಲನ್ನು ಹಾಕಿ ತಿನ್ನಲು ಕೊಡಿ. ಆಗ ಮಕ್ಕಳಿಗೆ ಆರೋಗ್ಯ ಪೂರ್ಣ ಆಹಾರ ಅವರು ಇಷ್ಟ ಪಡುವ ರೀತಿಯಲ್ಲಿಯೇ ಸಿಕ್ಕಂತಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT