ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಗೊಂದೆ ಗೊನೆ ಬದುಕಿಗೊಬ್ಬನೇ ಸಂಗಾತಿ

Last Updated 6 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಪ್ರೀತಿಯ ಹಂಬಲಿಕೆ ಮಧ್ಯ ವಯಸ್ಸಿನಲ್ಲಿ ಏಕಾಂಗಿಯಾದಾಗ ಅತಿಯಾಗಿ ಕಾಡುವುದು ನಿಜವಾದರೂ  ನನ್ನ ಅನುಭವದಲ್ಲಿ ಹೇಳುವುದಾದರೆ, ಒಮ್ಮೆ ಒಬ್ಬರಲ್ಲಿ ಮೂಡಿದ ಪ್ರೀತಿ ಇದಕ್ಕೆ  ಸಾಮಾಜಿಕ ಅನುಮೋದನೆಯೂ ದೊರೆತು ಮದುವೆಯ ಬಂಧನಕ್ಕೆ ಒಳಗಾದಾಗ ಆ ಬಂಧನದ ಚೌಕಟ್ಟಿನಲ್ಲಿ ನಮ್ಮ ಮನದ ಪರಿಧಿಯಲ್ಲಿರುವ ಏಕೈಕ ವ್ಯಕ್ತಿ ಜೀವನ ಸಂಗಾತಿ.

ಹರೆಯದ ಆಕರ್ಷಣೆ ಪ್ರೀತಿಗಳು ಮಿಳಿತದಲ್ಲಿ ರೂಪುಗೊಂಡ ಬದುಕು ನಾವು ಬಯಸಿದ ಪ್ರೀತಿ ದೊರೆಯದಿದ್ದರೂ, ದೊರೆತ  ಪ್ರೀತಿಗೆ ಮನಸ್ಸನ್ನು ಒಗ್ಗಿಸಿಕೊಂಡು ನಮ್ಮ ಕಲ್ಪನೆಯ ಪ್ರೀತಿಯನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಹೊಂದಿಸಿಕೊಳ್ಳುವ ರಾಜಿ ಸೂತ್ರದಲ್ಲಿ  ಸುಗಮ ಬದುಕು ಸಾಗುತ್ತದೆ.

ಈ ಭಾವನೆಗೆ ಮನಸ್ಸು ಎಷ್ಟು ಅವಲಂಬಿತವಾಗುತ್ತದೆ. ಅಂದರೆ ಮದುವೆಯ ಬಂಧನದಲ್ಲಿ ಬೆಸೆದ ಬಾಳಿನ ಜೀನದುದ್ದಕ್ಕೂ ಆ ವ್ಯಕ್ತಿಯೊಂದಿಗೆ ಜೊತೆಯಾಗಿ ಇಲ್ಲ ನೆನಪಾಗಿ ಉಳಿಯುವ ಭದ್ರ ಬೆಸುಗೆಯಾಗುತ್ತದೆಯೋ ವಿನಹ ಮತ್ತೆ ಮತ್ತೆ ಹೊಸ ಸರಪಳಿಗೆ ಮನ ಬೆಸೆಯಲಾರದು. 

ಬಹುತೇಕ ಜನರಲ್ಲಿ ಹೀಗೂ ಇರಬಹುದು ಇಲ್ಲದಿರಬಹುದು. ಚಿಕ್ಕವಯಸ್ಸಿನಲ್ಲಿ ಇರುವ ಮನದ ಭಾವನೆಗಳು, ಪ್ರೌಢ ಮನಸ್ಸಿನ ಭಾವನೆಗಳು ವಿಭಿನ್ನ ಮದುವೆಯಾದಾಗಿನ ಮನಸ್ಥಿತಿ ಜೀವನದುದ್ದಕ್ಕೂ ಒಟ್ಟಾಗಿ ಬಾಳುವ ಕನಸು ಪರಸ್ಪರರಲ್ಲಿ ಏನೇ ಭಿನ್ನಭಿಪ್ರಾಯಗಳಿದ್ದರೂ ನಮ್ಮ ನಿರೀಕ್ಷೆಗಳನ್ನು ವಾಸ್ತವ ಸ್ಥಿತಿಗೆ ಬದಲಾಯಸಿಕೊಳ್ಳುತ್ತಾ ಬಾಳುವಂತೆ ಮಾಡುತ್ತದೆ.

ಕಾರಣ ಮನಸ್ಸಿಗೆ ಸಾಮಾಜಿಕ ಬದ್ಧತೆ ಸುಸಂಸ್ಕೃತ  ಜೀವನದ ಹಾದಿಯಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಮೂಡಿದರು ಒಬ್ಬರನೊಬ್ಬರು ಅವಲಂಬಿತರಾಗುವಂತೆ ಮಾಡುತ್ತದೆ. ಉದಾಹರಣೆಗೆ ಹೊಸಬಾಳಿಗೆ ಅಡಿಯಿಟ್ಟಾಗ ಪರಸ್ಪರ ನಡೆನುಡಿಗಳಲ್ಲಿ ಕುಂದೇ  ಕಾಣದಷ್ಟು ಆಕರ್ಷಣೆಯೊಂದಿಗೆ ಮಿಳಿತವಾದ ಪ್ರೀತಿ ಉತ್ಸಾಹ ನಿಧಾನವಾಗಿ ತನ್ನ ವಾಸ್ತವ ನೆಲೆಗಟ್ಟಿನಲ್ಲಿ ಮರಳಿದ ಮನಸ್ಸು ಕುಂದುಗಳನ್ನು ಕಾಣಲು ಶುರುವಾಗುತ್ತದೆ.

ಹೀಗಿರಬೇಕಿತ್ತು, ಹೀಗೆ ಹೇಳಬೇಕಿತ್ತು ಅನ್ನುವ ಆಕ್ಷೇಪಣೆಗಳನ್ನು ಮಾಡಿದರೂ ಮೊದಲೇ ಹೇಳಿದ ಹಾಗೆ ನಮ್ಮ ಸಂಸ್ಕಾರ ಸಂಸ್ಕೃತಿಗಳು ಹೊಂದಾಣಿಕೆಯ ಬದುಕಿನ ರಾಜಿಸೂತ್ರವನ್ನು ಅಳವಡಿಸಿಕೊಂಡು ನೆಮ್ಮದಿಯ ಸಾಂಸಾರಿಕ ಬದುಕನ್ನು ಕಂಡುಕೊಳ್ಳುತ್ತದೆ. ಆದರೆ ಜೀವನದಲ್ಲಿ ಅವಘಡಗಳು ಸಂಭವಿಸಿ ಏಕಾಂಗಿಯಾದಾಗ ಅನುಭವದಲ್ಲಿ ಕಂಡು ಕೊಂಡ ಮನಸ್ಸಿನ ದಾರ್ಢ್ಯ ನೆನಪಿನೊಂದಿಗೂ ಬದುಕಬಹುದು ಅನ್ನುವಷ್ಟು ಪ್ರೌಢತೆ ಬೆಳೆಸಿಕೊಂಡಿರುತ್ತದೆ. ಯಾರೂ ಪರಿಪೂರ್ಣರಲ್ಲ.

ನಾವು ಬಯಸಿದ ಗುಣಗಳು ಎರಡನೆಯ ಬಾರಿಯೂ ದೊರೆಯುತ್ತದೆ ಎಂಬ ಖಾತ್ರಿಯೂ ಇರಲ್ಲ ಪ್ರಬುದ್ಧ ಮನಸ್ಸಿನ ಪದೇ ಪದೇ ರಾಜಿ ಸೂತ್ರವನ್ನು ಒಪ್ಪಿಕೊಳ್ಳುವುದೂ ಇಲ್ಲ. ಈ ಸ್ಥಿತಿಯಲ್ಲಿ ಅವಲಂಬಿತ ಬದುಕಿಗಿಂತ ನಿರೀಕ್ಷೆಗಳಿಗಿಂತ ಆತ್ಮಸ್ಥೈರ್ಯ ಸ್ವಾವಲಂಬಿತ ಬದುಕು ಕಂಡುಕೊಳ್ಳುವುದು ಒಳಿತು. ನಾನು ನೋಡಿದ ಹಾಗೆ ತಮ್ಮ ಸ್ವಾರ್ಥಕ್ಕೆ ಪ್ರೀತಿಯ ಕಾಳಜಿಯ ಮೆರುಗು.

ಹಳತಾದಾಗ ಮೆರುಗು ಕಳೆದುಕೊಂಡು ಕಳಾಹೀನ ದುರ್ಭರವಾಗುತ್ತದೆ. ಸಾಂಪ್ರಾದಾಯಿಕ ಮನಸ್ಸು ‘ವ್ರತ ಕೆಟ್ಟರೂ ಸುಖವಿಲ್ಲ’ ಎಂಬ ಭಾವನೆಯಿಂದ ಆತ್ಮಶೋಷಣೆಯಿಂದ ಬದುಕು ದುಸ್ತರವಾಗುತ್ತದೆ.ಈ ಬದುಕಿಗಿಂತ ನಮಗೆ ಆಸಕ್ತಿಯಿರುವ ವಿಷಯಗಳಲ್ಲಿ ತೊಡಗಿಸಿ ನನಗೆ ನಾನೇ ಎಲ್ಲವನ್ನೂ ಎದುರಿಸಬಲ್ಲೆ, ನಾಲ್ಕು ಜನಕ್ಕೆ ಮಾದರಿಯಾಗಿ ಬಾಳುವಂತೆ ಜೀವನ ರೂಪಿಸಿಕೊಳ್ಳಬಹುದು. ಜೊತೆಗೆ ಆತ್ಮಸಂತೋಷವನ್ನು ಅನುಭವಿಸಬಹುದು.

37ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ನಾನು ಬದುಕು ಕಂಡುಕೊಂಡಿರುವುದೇ ಹೀಗೆ. ನನಗೆ ಆಸಕ್ತಿಯಿರುವ ಆಧ್ಯಾತ್ಮದಲ್ಲಿ ತೊಡಗಿಸಿಕೊಂಡು ಆತ್ಮಸಂತೋಷವನ್ನು ಸಾಮಾಜಿಕ ಗೌರವವನ್ನೂ ಪಡೆದುಕೊಂಡಿರುತ್ತೇನೆ. ನನ್ನ ಅನಿಸಿಕೆ ಬಾಳೆಗೊಂದೇ ಗೊನೆ ಬದುಕಿನ ಸಂಗಾತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT