ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖ ಸಂಸಾರದ ಗುಟ್ಟು

Last Updated 4 ಡಿಸೆಂಬರ್ 2015, 19:35 IST
ಅಕ್ಷರ ಗಾತ್ರ

‘ಸಂಸಾರ’ವೆಂದರೆ ವ್ಯಾಪಾರ, ವ್ಯವಹಾರ ಅಲ್ಲ. ಇಲ್ಲಿ ಲೇವಾದೇವಿಯೆಂಬುದು ಇಲ್ಲವೇ ಇಲ್ಲ. ‘ನಿನಗಿದು ನನಗದು’ ಇಂಥ ಕೊಟ್ಟು ತೆಗೆದುಕೊಳ್ಳುವ ಬಾಬತ್ತುಗಳೂ ಇರುವುದಿಲ್ಲ. ಹಣ, ಸಮಯ, ಶಕ್ತಿ, ಯುಕ್ತಿ... ಎಲ್ಲವನ್ನೂ ಬಳಸಿಕೊಂಡು, ಸ್ಥಿತಿಗತಿಗಳನ್ನು ಅರ್ಥಮಾಡಿಕೊಂಡು ಜಾಣ್ಮೆಯಿಂದ ‘ಸಂಸಾರ’ವೆಂಬ ರಥವನ್ನು ನಡೆಸಿಕೊಂಡು ಹೋಗುವದು ದಂಪತಿಗಳಲ್ಲಿ ಯಾರಿಗೆ ಸಾಧ್ಯವೋ ಅವರೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.

ನನ್ನವರು ಬ್ಯಾಂಕ್ ಅಧಿಕಾರಿ. ಜವಾಬ್ದಾರಿಯುತ ಕೆಲಸ. ಬೆಳಿಗ್ಗೆ ಮನೆಯಿಂದ ಹೊರಟರೆ ತಿರುಗಿ ಮನೆಗೆ ಬರುವಷ್ಟರಲ್ಲಿ 7 ಗಂಟೆ. ಆಫೀಸ್ ಕೆಲಸದ ಜೊತೆಗೆ ಇತರ ಜವಬ್ದಾರಿಗಳನ್ನು ಅವರಿಂದ ನಿಭಾಸಲು ಸಾಧ್ಯವೇ? ಕಾರಣ ನಾನು ಮದುವೆಯಾಗಿ ಬಂದ ನಂತರ ಮನೆ ನಡೆಸುವ ಅಧಿಕಾರವನ್ನು ನನಗೆ ವಹಿಸಿ, ಹೊಣೆಗಾರಿಕೆಯನ್ನು ಬ್ಯಾಲೆನ್ಸ್ ಮಾಡುವುದನ್ನು ಹೇಳಿಕೊಟ್ಟರು.

ಅಂದಿನಿಂದ ಸಮಯದ ಸರಿಯಾದ ಪಾಲನೆ, ಪ್ರತಿ ಕೆಲಸದಲ್ಲಿ ಅಚ್ಚುಕಟ್ಟುತನ, ಹಣದ ಮಿತ ಉಪಯೋಗ, ಮಕ್ಕಳ ವ್ಯಕ್ತಿತ್ವದ ಕಡೆ ಗಮನ, ಸಂಬಂಧಗಳ ಪಾಲನೆಯಲ್ಲಿ ಎಚ್ಚರ, ತಿಂಗಳ ದಿನಸಿ, ತರಕಾರಿ, ಹಬ್ಬ-ಹರಿದಿನಗಳು ಬಂದರೆ ಮಕ್ಕಳು, ಗಂಡನಿಗೆ ಡ್ರೆಸ್, ಸೂಟ್ ಖರೀದಿ, ಪ್ರಯಾಣ, ಇತರ ವಿನೋದ, ವಿದ್ಯೆಯ ಖರ್ಚುಗಳು, ಮದುವೆ, ಮುಂಜಿ... ಮುಂತಾದ ಸಮಾರಂಭಗಳಿಗೆ ಹೋಗುವ ಮೊದಲು ಉಡುಗೊರೆ ಖರೀದಿಸುವುದು, ವಿದ್ಯುತ್ ಹಾಗೂ ಟೆಲಿಫೋನ್ ಬಿಲ್ಲುಗಳನ್ನು ಅವಧಿಗೆ ಮುನ್ನವೇ ನೆನಪಿನಿಂದ ಕಟ್ಟುವುದು... ಎಲ್ಲವೂ ನನ್ನದೇ ಕೆಲಸ. 

ಜೀವನ ಸರಾಗವಾಗಿ, ಸುಂದರವಾಗಿ ಸಾಗಬೇಕಾದರೆ ಪತಿ-ಪತ್ನಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು, ಪರಿಸ್ಥಿತಿಗಳಿಗೆ ಆಧಾರವಾಗಿ ಹೊಂದಾಣಿಕೆ ಮಾಡಿಕೊಳ್ಳುವುದು, ಭಾವೋದ್ವೇಗಳನ್ನು ನಿಯಂತ್ರಣದಲ್ಲಿ ರಿಸಿಕೊಳ್ಳುವುದು ಬಹಳ ಮುಖ್ಯ.  ಸಮಯ ಸಂದರ್ಭಗಳನ್ನು ತಿಳಿದುಕೊಂಡು ವ್ಯವಹರಿಸಿದರೆ ಯಾರಿಗೂ ಯಾವುದೂ ಭಾರವೆನಿಸುವದಿಲ್ಲ. ಆಗ ಸಂಸಾರದಲ್ಲಿ ಸುಖ ಮತ್ತು ಸಂತೋಷ ನೆಲೆಸಿ, ಕುಟುಂಬ  ಸದಸ್ಯರಲ್ಲಿ ಒಗ್ಗಟ್ಟನ್ನು ಮೂಡಿಸಿ ‘ನಾವೆಲ್ಲಾ ಒಂದೇ’ ಎಂಬ ಭಾವನೆಯನ್ನು ಸೃಷ್ಟಿಸಿ ಮನೆಯನ್ನು ‘ಶಾಂತಿ ನಿವಾಸ’ ಮಾಡುತ್ತದೆ. ಇದೇ ‘ಸುಖ ಸಂಸಾರ’ದ ಗುಟ್ಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT