ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಗೇನಹಳ್ಳಿ | ಮಳೆ: ರೈತರಿಂದ ಬಿತ್ತನೆ ಬೀಜ ಖರೀದಿ  

Published 16 ಮೇ 2024, 13:37 IST
Last Updated 16 ಮೇ 2024, 13:37 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಹೋಬಳಿಯಾದ್ಯಂತ ಬುಧವಾರ ರಾತ್ರಿ ಸಾಧಾರಣವಾಗಿ ಮಳೆ ಸುರಿದಿದೆ. ಒಂದು ಗಂಟೆಗಳ ಕಾಲ ಸುರಿದ ಮಳೆಗೆ ಭೂಮಿ ಹದಗೊಂಡ ಹಿನ್ನೆಲೆಯಲ್ಲಿ ರೈತರು ವ್ಯವಸಾಯ ಆರಂಭಿಸುವುದರ ಜೊತೆಗೆ ಬಿತ್ತನೆ ಬೀಜ ಖರೀದಿಗಾಗಿ ರೈತಸಂಪರ್ಕ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ.

ಹೋಬಳಿಗೆ ಸೇರಿದ ಕೆಲವು ಗ್ರಾಮಗಳಲ್ಲಿ ಸಾಧಾರಣವಾಗಿ ಮಳೆ ಬಂದಿದೆ.  ರಾತ್ರಿ ಸುರಿದ ಮಳೆಗೆ ರೈತರು ಜಮೀನುಗಳತ್ತ ತೆರಳಿ ವ್ಯವಸಾಯ ಆರಂಬಿಸುತ್ತಿದ್ದಾರೆ.

ಸಂತೇಮರಹಳ್ಳಿಯ ರೈತಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿಗಾಗಿ ರೈತರು ಸಾಲು ನಿಂತಿರುವುದು ಕಂಡು ಬಂತು. ಮುಂಗಾರು ಹಂಗಾಮು ಬಿತ್ತನೆ ಬೀಜಗಳಾದ ಉದ್ದು, ಸೂರ್ಯಕಾಂತಿ, ಅಲಸಂದೆ ಹಾಗೂ ಹಸರು ಬಿತ್ತನೆ ಬೀಜಗಳನ್ನು ಖರೀದಿಸುತ್ತಿದ್ದಾರೆ.

ರಿಯಾಯಿತಿ ದರದಲ್ಲಿ 5 ಕೆಜಿ ತೂಕವಿರುವ ಉದ್ದು  ₹660, ಸೂರ್ಯಕಾಂತಿ ₹1720, ಅಲಸಂದೆ ₹530, ಹೆಸರು ₹805 ರಂತೆ ದೊರಕುತ್ತಿದೆ. ರೈತರು ಆರ್ ಟಿಸಿ ಹಾಗೂ ಆಧಾರ್ ಕಾರ್ಡ್ ನೀಡಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಜಾತಿ ಪ್ರಮಾಣ ಪತ್ರ, ಆರ್ ಟಿಸಿ ಹಾಗೂ ಆಧಾರ್ ಕಾರ್ಡ್ ನೀಡಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆಯಬಹುದು ಎಂದು ಕೃಷಿ ಅಧಿಕಾರಿಗಳು ಹೇಳಿದರು.

ಸಂತೇಮರಹಳ್ಳಿಯ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ನೀರು ನಿಂತಿರುವುದು
ಸಂತೇಮರಹಳ್ಳಿಯ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ನೀರು ನಿಂತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT