ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ | ಲಾತೂರ್‌ (ಮಹಾರಾಷ್ಟ್ರ): ಸುಧಾಕರ್‌ ಶ್ರಂಗಾರೆ vs ಶಿವಾಜಿ ಕಲ್ಗೆ

Published 6 ಮೇ 2024, 0:08 IST
Last Updated 6 ಮೇ 2024, 0:08 IST
ಅಕ್ಷರ ಗಾತ್ರ

ಸುಧಾಕರ್‌ ಶ್ರಂಗಾರೆ (ಬಿಜೆಪಿ)

ಮಹಾರಾಷ್ಟ್ರದ ಲಾತೂರ್‌ ಲೋಕಸಭಾ ಕ್ಷೇತ್ರದಿಂದ ಕಳೆದ ಬಾರಿ ಜಯಗಳಿಸಿದ್ದ ಸುಧಾಕರ್‌ ಶ್ರಂಗಾರೆ ಅವರನ್ನೇ ಬಿಜೆಪಿಯು ಈ ಬಾರಿಯೂ ಕಣಕ್ಕಿಳಿಸಿದೆ. 2019ರ ಚುನಾವಣೆಯಲ್ಲಿ ಸುಧಾಕರ್‌ ಅವರು 2,89,111 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಮಚೀಂದ್ರ ಕಾಮಂತ್ ಅವರನ್ನು ಪರಾಭವಗೊಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮುಂದಿರಿಸಿಕೊಂಡು ಸುಧಾಕರ್ ಅವರು ಮತಯಾಚಿಸುತ್ತಿದ್ದಾರೆ. ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಮನೋಜ್‌ ಜರಾಂಗೆ ಅವರು ನಡೆಸುತ್ತಿರುವ ಹೋರಾಟವು ಈ ಕ್ಷೇತ್ರದ ಚುನಾವಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮರಾಠ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಮತದಾರರು ಯಾರ ಕೈ ಹಿಡಿಯುವರು ಎಂಬುದನ್ನು ಕಾದು ನೋಡಬೇಕಾಗಿದೆ.

ಶಿವಾಜಿ ಕಲ್ಗೆ (ಕಾಂಗ್ರೆಸ್‌)

ಸುಧಾಕರ್‌ ಅವರಿಗೆ ಪೈಪೋಟಿ ನೀಡಲು ಕಾಂಗ್ರೆಸ್‌ ಪಕ್ಷವು ಶಿವಾಜಿ ಕಲ್ಗೆ ಅವರನ್ನು ಅಖಾಡಕ್ಕಿಳಿಸಿದೆ. ರಾಜಕೀಯದಲ್ಲಿ ಅನನುಭವಿಯಾದರೂ ನೇತ್ರತಜ್ಞರಾಗಿ ಹೆಸರು ಮಾಡಿರುವ ಶಿವಾಜಿ ಅವರು ಕ್ಷೇತ್ರದ ಜನರಿಗೆ ಚಿರಪರಿಚಿತರು. ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಅವರ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ. ನೀರಿನ ಸಮಸ್ಯೆ, ನಿರುದ್ಯೋಗ ಮೊದಲಾದ ಜ್ವಲಂತ ಸಮಸ್ಯೆಗಳನ್ನೇ ಪ್ರಮುಖ ಚುನಾವಣಾ ವಿಷಯವಾಗಿಸಿ ಶಿವಾಜಿ ಅವರು ಜನರ ಬಳಿಗೆ ತೆರಳುತ್ತಿದ್ದಾರೆ. ಶಿವಾಜಿ ಅವರ ಪತ್ನಿ ಕೂಡ ಲಾತೂರಿನಲ್ಲಿ ವೈದ್ಯೆಯಾಗಿದ್ದಾರೆ. ಶಿವಾಜಿ ಅವರು ಲಿಂಗಾಯತರಾಗಿದ್ದು, ಈ ಸಮುದಾಯದವರು ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರ ಮತಗಳ ಮೇಲೆ ಕಣ್ಣಿಟ್ಟು ಕಾಂಗ್ರೆಸ್‌ ಅಭ್ಯರ್ಥಿಯನ್ನು ಘೋಷಿಸಿದೆ ಎಂಬುದು ಚುನಾವಣಾ ವಿಶ್ಲೇಷಕರ ಅಭಿಪ್ರಾಯ.

ಶಿವಾಜಿ
ಶಿವಾಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT