ಅಲ್ಲದೇ ಈ ಹಿಂದೆ ಸಹಪಾತ್ರಗಳ ಆಯ್ಕೆಗೆ ನಿರ್ಮಾಣ ಸಂಸ್ಥೆ ಕೆವಿಎನ್ ಫ್ರೊಡಕ್ಸನ್ ಕಾಸ್ಟಿಂಗ್ ಕಾಲ್ ಕೊಟ್ಟಿತ್ತು. ಆಸಕ್ತ ಪುರುಷ, ಮಹಿಳೆ, ಮಕ್ಕಳು ತಮ್ಮ ಪ್ರತಿಭೆ ತೋರಿಸುವ ವಿಡಿಯೊ ತುಣಕನ್ನು ಕೆವಿಎನ್ಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿತ್ತು.
ಕನ್ನಡಕ್ಕೆ RRR ಅಂತಹ ಮಹತ್ವದ ಚಿತ್ರವನ್ನು ತಂದ ‘ಕೆವಿಎನ್ ಪ್ರೊಡಕ್ಷನ್ ’ ಟಾಕ್ಸಿಕ್ ಚಿತ್ರವನ್ನು ನಿರ್ಮಿಸುತ್ತಿದೆ. ಮೂಲಗಳ ಪ್ರಕಾರ ಯಶ್ ಅವರ ‘ Monster Mind Creations’ ಕೂಡ ಈ ಚಿತ್ರಕ್ಕೆ ಹಣ ಹೂಡುತ್ತಿದೆ ಎನ್ನಲಾಗಿದ್ದು, ಇದೊಂದು ಕಂಟೆಂಟ್ ಆಧಾರಿತ ಚಿತ್ರ. ಅಷ್ಟೇ ಅಲ್ಲದೇ ಬಿಗ್ ಬಜೆಟ್ ಚಿತ್ರವೂ ಹೌದು ಎನ್ನಲಾಗುತ್ತಿದೆ.
ಟಾಕ್ಸಿಕ್ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಇನ್ನೂ ಒಂದೂವರೆ ವರ್ಷ ಕಾಯಲೇಬೇಕು. ಚಿತ್ರತಂಡ ಹೇಳಿಕೊಂಡಿರುವ ಪ್ರಕಾರ 2025 ರ ಏಪ್ರಿಲ್ 10 ರಂದು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.