ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚಿಟಿಗರ ಅವಹೇಳನ: ಹರಿದಾಡಿದ ಆಡಿಯೊ

Published 26 ಏಪ್ರಿಲ್ 2024, 0:11 IST
Last Updated 26 ಏಪ್ರಿಲ್ 2024, 0:11 IST
ಅಕ್ಷರ ಗಾತ್ರ

ತುಮಕೂರು: ಲೋಕಸಭೆ ಮತದಾನಕ್ಕೆ ಕ್ಷಣ ಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಸಂಸದ ಜಿ.ಎಸ್.ಬಸವರಾಜು ಅವರು ಕುಂಚಿಟಿಗ ಒಕ್ಕಲಿಗರನ್ನು ಅವಹೇಳನ ಮಾಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

ಎಚ್ಎಎಲ್ ವಿಚಾರ ಮುಂದಿಟ್ಟುಕೊಂಡು ಕುಂಚಿಟಿಗರನ್ನು ಅಪಮಾನ ಮಾಡಲಾಗಿದೆ ಎಂದು ಬಿಂಬಿಸಲಾಗಿದೆ. ಮತದಾನದ ಹಿಂದಿನ ದಿನ ಈ ಆಡಿಯೊ ಜಾಲ ತಾಣದಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಕಾರಣವಾಗಿದೆ.

ಬಸವರಾಜು ಅವರು ಕೊರಟಗೆರೆ ತಾಲ್ಲೂಕಿನ ನಾಗೇಶ್ ಎಂಬುವರ ಜತೆಗೆ ಮೊಬೈಲ್‌ನಲ್ಲಿ ಮಾತನಾಡುವ ಸಮಯದಲ್ಲಿ ‘ಕುಂಚಿಟಿಗರ ಬುದ್ಧಿ ಬಿಡ್ರೊ, ಕೊರಟಗೆರೆ ಬುದ್ಧಿ ಬಿಡ್ರೊ’ ಎಂದು ನಿಂದಿಸಿದ್ದಾರೆ ಎನ್ನಲಾಗಿದೆ.

‘ಏನೋ ನಾಗೇಶ, ಎಚ್ಎಎಲ್ ಮದ್ದಹನುಮೇಗೌಡ ತಂದಿದ್ದು ಎಂದು ಪತ್ರಿಕೆಗೆ ಹೇಳಿಕೆ ನೀಡಿದ್ದೀಯಾ? ನಾನು ಎಚ್ಎಎಲ್ ತಂದಿದ್ದು. ಆದರೆ ಉದ್ಘಾಟನೆ ಸಂದರ್ಭದಲ್ಲಿ ಸೋತಿದ್ದೆ. ಅವನು ಗೆದ್ದಿದ್ದ. ಏನೇನೋ ಹೇಳಿಕೆ ನೀಡಬೇಡ ನನ್ನ ಮಗನೇ ಹುಷಾರಾಗಿರು. ನನ್ನ ಮಕ್ಳ, ನಿಮ್ಮ ಕುಂಚಿಟಿಗರ ಬುದ್ಧಿ ಬಿಟ್ಟು ಬಿಡ್ರೊ. ಸರಿಯಾಗಿರ್ರೊ... ಮುದ್ದಹನುಮೇಗೌಡಗೂ ಎಚ್ಎಎಲ್‌ಗೂ ಏನೋ ಸಂಬಂಧ?’ ಎಂದು ಪ್ರಶ್ನಿಸಿದ್ದಾರೆ.

‘ಅವನು ಯಾವತ್ತಾದರೂ ಒಂದು ಅರ್ಜಿ ಬರೆದಿದ್ದನಾ? ಎಚ್‌ಎಎಲ್ ಉದ್ಘಾಟನೆ ಸಮಯದಲ್ಲಿ ನನ್ನನ್ನು ಉದ್ದೇಶ ಪೂರ್ವಕವಾಗಿ ಬಿಸಿಲಿನಲ್ಲಿ ಕೂರಿಸಿದ್ದರು. ನಾಯಿಯ ರೀತಿ ಕಾದು ಕುಳಿತಿದ್ದೆ. ಆಗ ಮಾಧುಸ್ವಾಮಿ ನನ್ನ ಮೇಲೆ ಕ್ರಿಮಿನಲ್ ಕೇಸ್ ಹಾಕಿಸಿದ. ಯಡಿಯೂರಪ್ಪ ಏನ್ ಮಾಡ್ದ, ಏನೂ ಮಾಡಲಿಲ್ಲ... ಮುದ್ದಹನುಮೇಗೌಡ ಎಚ್‌ಎಎಲ್ ತಂದಿದ್ದೆಂದು ಮತ್ತೆ ಯಾವತ್ತೂ, ಎಲ್ಲೂ ಹೇಳಬೇಡ. ನನ್ನ ಮಗನೇ ಹುಷಾರಾಗಿರು’ ಎಂದು ಹೇಳಿದ್ದಾರೆ.

ಜನರನ್ನು ದಾರಿ ತಪ್ಪಿಸುವ ಸಂಚು

‘ಎಚ್ಎಎಲ್ ತಂದಿದ್ದು ನಾನು ಎಂದು ಹೇಳಿರಬಹುದು. ಆದರೆ ಈ ಆಡಿಯೋಗೂ ನನಗೂ ಸಂಬಂಧವಿಲ್ಲ. ಚುನಾವಣೆ ಸಮಯದಲ್ಲಿ ಉದ್ದೇಶ ಪೂರ್ವಕವಾಗಿ ಜನರನ್ನು ದಾರಿ ತಪ್ಪಿಸಲು ಈ ರೀತಿ ಮಾಡಿದ್ದಾರೆ. ತಿಳಿಗೇಡಿಗಳಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ’ ಎಂದು ಜಿ.ಎಸ್.ಬಸವರಾಜು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT