ಇದು ಜಾತ್ರಾ ಸಮಯ, ಜಾತ್ರೆ ಮುಗಿಯುತ್ತಿದ್ದಂತೆ ಹಬ್ಬಗಳ ಸಾಲು, ಇವುಗಳ ನಡುವೆಯೇ ಸಾಂಸ್ಕೃತಿಕ ಕಾರ್ಯಕ್ರಮ, ಮದುವೆ ಮುಂಜಿಗಳೂ ಜೋರು. ಒಟ್ಟಿನಲ್ಲಿ ಹೂವುಗಳಿಗಂತೂ ವರ್ಷವಿಡೀ ಡಿಮಾಂಡೋ ಡಿಮಾಂಡು.

ಈ ಹೂವುಗಳಲ್ಲಿ ದೇವಾನುದೇವತೆಗಳು ಮಾತ್ರವಲ್ಲದೇ ಹೆಂಗಳೆಯರ ಮನವನ್ನೂ ಗೆದ್ದ, ಎಲ್ಲ ಕಾರ್ಯಕ್ರಮಗಳಲ್ಲೂ ಅಗತ್ಯವಾಗಿ ಬಳಸಲಾಗುವ ಕನಕಾಂಬರದ್ದು ಎತ್ತಿದ ಕೈ. ಕೆಲವು ಭಾಗಗಳಲ್ಲಿ ಇದು ಅಬ್ಬಲಿಗೆ, ಅಬೋಲಿಗೆ.

ಮಲ್ಲಿಗೆ ಹೂವು ತನ್ನ ಕಂಪಿನಿಂದ ಎಲ್ಲರ ಗಮನ ಸೆಳೆದರೂ ಅದು ತಲೆಯ ಮೇಲೇರಿದರೆ ಬಹು ಬೇಗನೇ ಬಾಡಿ ಹೋಗುತ್ತದೆ. ಆದರೆ ಸುವಾಸನಾರಹಿತವಾಗಿದ್ದರೂ ಕನಕಾಂಬರ 3-ರಿಂದ 4 ದಿನಗಳು ಬಾಡುವುದಿಲ್ಲ, ಜೊತೆಗೆ ಅದು ಮುಡಿಗೇರಿದ್ದರೂ ಹಗುರವಾಗಿ ಇರುವ ಕಾರಣ, ಇದು ಮಹಿಳೆಯರಿಗೆ ಬಲು ಅಚ್ಚುಮೆಚ್ಚು.

ಗ್ರಾಮೀಣ ಪ್ರದೇಶದಲ್ಲಿನ ಎಷ್ಟೋ ಮಹಿಳೆಯರು ಇದರ ಮಾಲೆ ಕಟ್ಟೆ ರಸ್ತೆ ಬದಿಗಳಲ್ಲೋ, ಮಾರುಕಟ್ಟೆಯಲ್ಲಿಯೋ ಮಾರಾಟ ಮಾಡಿ ತಮ್ಮ ದೈನಂದಿಗೆ ಬೇಕಾಗವಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ.

ಹಳದಿ, ಕೆಂಪು, ಕಿತ್ತಳೆ ಮತ್ತು ಕೇಸರಿ ಹೀಗೆ ನಾಲ್ಕು ಬಣ್ಣಗಳಿಂದ ಗಮನ ಸೆಳೆಯುತ್ತದೆ ಕನಕಾಂಬರ. ‘ಸೌಂದರ್ಯ’ ನಮ್ಮ ರಾಜ್ಯದ

ಜನಪ್ರಿಯ ತಳಿ.

ಕೃಷಿ ವಿಧಾನ ಹೀಗೆ
ಕನಕಾಂಬರಕ್ಕೆ ತಂಪು ವಾತಾವರಣ ಎಂದರೆ ಇಷ್ಟ. ನೆಲಮಟ್ಟದಿಂದ ಸುಮಾರು ಐದಾರು ಅಡಿ ಎತ್ತರಕ್ಕೆ ಈ ಗಿಡ ಬೆಳೆಯುತ್ತದೆ. ಎಲ್ಲಾ ಹವಾಗುಣಕ್ಕೂ ಹೊಂದಿಕೊಳ್ಳುವ ಇದನ್ನು ಬೆಳೆಯಲು ಯಾವ ಕಾಲವಾದರೂ ಸೈ. ಆದರೆ ಕರಾವಳಿ, ಮಲೆನಾಡು ಮತ್ತು ಅರೆ ಮಲೆನಾಡು ಎಂದರೆ ಕನಕಾಂಬರಕ್ಕೆ ಅಚ್ಚುಮೆಚ್ಚು. ಅದೇ ರೀತಿ ಜೂನ್ ತಿಂಗಳಲ್ಲಿ ಬೆಳೆದರೆ ಹೆಚ್ಚು ಹೂವು ನೀಡಬಲ್ಲದು.

ಬೀಜ ನೆಟ್ಟಾದರೂ ಇದನ್ನು ಬೆಳೆಯಬಹುದು ಅಥವಾ ಎಲ್ಲಿಯಾದರೂ ಚಿಕ್ಕ ಕಾಂಡ ಸಿಕ್ಕರೂ ಸೈ. ಅದನ್ನು ನೆಟ್ಟರೂ ಇದು ಹುಲುಸಾಗಿ ಬೆಳೆಯುತ್ತದೆ. ಕಾಂಡವನ್ನು ನೆಟ್ಟು ಬೆಳೆಸುವುದಾದರೆ ಮೊದಲು ಮಡಿಗಳಲ್ಲಿ ಅದನ್ನು ನೆಡಬೇಕು. ಅಲ್ಲಿಯೇ ಕೆಲವು ದಿನಗಳಲ್ಲೇ ಅದು ಬೇರು ಬಿಡುತ್ತದೆ. ನಂತರ ಅದನ್ನು ಬೇರೆ ಕಡೆಗಳಲ್ಲಿ ನೆಡಬಹುದು. ೬೦/30 ಸೆಂ.ಮೀ ಅಂತರದಲ್ಲಿ ಸಸಿ ನೆಟ್ಟರೆ ಉತ್ತಮ. ಗಿಡಗಳ ಬಲಿತ ರೆಂಬೆಗಳನ್ನು ಕತ್ತರಿಸಿ ನೆಟ್ಟರೂ ಸರಿ. ಗಿಡ ಸಮೃದ್ಧವಾಗಿ ಬೆಳೆಯುತ್ತದೆ.

ನಾಟಿ ಮಾಡಿದ ಮೂರು ತಿಂಗಳಿಗೆ ಹೂವು ಬಿಡಲು ಆರಂಭವಾಗುವುದು. ಬೇಸಿಗೆಯಲ್ಲಿ ಅತಿ ಹೆಚ್ಚು ಹೂವು ಬಿಡುವ ಕೆಲವೇ ಪುಷ್ಪಗಳ ಪೈಕಿ ಕನಕಾಂಬರವೂ ಒಂದು. ಮೇ ತಿಂಗಳ ಅಂತ್ಯದವರೆಗೂ ಸಮೃದ್ಧವಾಗಿ ಹೂವು ಅರಳುತ್ತವೆ. ವಾರಕ್ಕೆ ಮೂರು ಬಾರಿ ಹೂವುಗಳನ್ನು ಕೊಯ್ಲು ಮಾಡಬಹುದು. ನಂತರ ಮಳೆಗಾಲದ ದಿನಗಳಲ್ಲಿ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ.

ಗಿಡಗಳ ಬುಡಕ್ಕೆ ಹೊಸ ಮಣ್ಣು ಏರಿಸಿ, ಕೊಟ್ಟಿಗೆ ಗೊಬ್ಬರ ಮತ್ತು ಅಡಿಕೆ ಸಿಪ್ಪೆಗಳನ್ನು ಹಾಕಿ ಎರಡು ದಿನಗಳಿಗೊಮ್ಮೆ ನೀರು ಕೊಟ್ಟರೆ ಉತ್ತಮ ಇಳುವರಿ ಪಡೆಯಬಹುದು.

ಈ ಗಿಡಗಳಿಗೆ ಶಿಲೀಂದ್ರ, ಎಲೆ ತಿನ್ನುವ ಹುಳುಗಳ ಕಾಟ ಹೆಚ್ಚು. ಅಲ್ಲದೇ ಗೆದ್ದಲು, ಎಲೆಚುಕ್ಕೆ ರೋಗಗಳು ಕಾಡುತ್ತವೆ. ಬೇವಿನ ಹಿಂಡಿಯ ಕಷಾಯ ಮತ್ತು ತೆಳ್ಳಗಿನ ಉಪ್ಪು ನೀರಿನ ದ್ರಾವಣವನ್ನು ವಾರಕ್ಕೊಮ್ಮೆ ಗಿಡಗಳಿಗೆ ಸಿಂಪಡಿಸಿದರೆ ರೋಗಗಳನ್ನು ಹತೋಟಿಯಲ್ಲಿ ಇಡಬಹುದು. ಜೊತೆಗೆ ಸೂಕ್ತ ಕೀಟನಾಶಕಗಳನ್ನೂ ಬಳಸಬಹುದು.

ಹೂವು ಮಾರಿ ಸಾಕಷ್ಟು ಹಣ ಗಳಿಸುವುದು ಒಂದೆಡೆಯಾದರೆ, ಅರಳಿರುವ ಪುಷ್ಪಗಳನ್ನು ಗಿಡಗಳಿಂದ ಬಿಡಿಸಿ (ಕಿತ್ತು) ಹಣವನ್ನೂ ಮಾಡಬಹುದು. ದೊಡ್ಡ ಪ್ರಮಾಣದಲ್ಲಿ ಕನಕಾಂಬರ ಕೃಷಿ ಮಾಡುವವರಿಗೆ ಇದರ ಹೂವುಗಳನ್ನು ಬಿಡಿಸುವುದು ತಲೆನೋವಿನ ಕೆಲಸ. ಹೂವು ಬಿಡಿಸುವುದು ಕಷ್ಟಕರವೇನಲ್ಲ, ಆದರೆ ಬಹಳ ವೇಳೆ ಹಿಡಿಯುತ್ತದೆ. ಆದ್ದರಿಂದ ಹೂವು ಬಿಡಿಸುವವರಿಗೆ ಭಾರಿ ಡಿಮಾಂಡ್. ಒಂದು ಕೆ.ಜಿ ಹೂವು ಬಿಡಿಸಿದರೆ ಏನಿಲ್ಲವೆಂದರೂ 20-ರಿಂದ 30 ರೂಪಾಯಿ ಸಿಕ್ಕೇ ಸಿಗುತ್ತದೆ. ಹೂವಿನ ಗಿಡಗಳ ನಡುವೆ ನುಗ್ಗೆ, ಔಡಲ ಮಲ್ಲಿಗೆ, ಕರಿಬೇವು, ಶೇಂಗಾ, ಮೆಕ್ಕೆಜೋಳ ಬೆಳೆಯುತ್ತಾರೆ.

ಅಲ್ಪ ನೀರಾವರಿ ಸೌಲಭ್ಯ ಹೊಂದಿರುವವರು ಹೆಚ್ಚಿಗೆ ಬೆಳೆ ಬೆಳೆಯಲು ಆಗುತ್ತಿಲ್ಲ ಎಂದು ಚಿಂತೆಗೆ ಒಳಗಾಗುವ ಪ್ರಮೇಯವೇ ಇಲ್ಲ. ಏಕೆಂದರೆ ಕನಕಾಂಬರ ಬಹಳ ಕಡಿಮೆ ನೀರನ್ನು ಬೇಡುವ ಗಿಡ. ಹಾಗೆಯೇ ಕಡಿಮೆ ಆರೈಕೆಯೂ ಇದಕ್ಕೆ ಸಾಕು. ಒಟ್ಟಿನಲ್ಲಿ ಕಡಿಮೆ ಶ್ರಮದಲ್ಲಿ ಸಾಕಷ್ಟು ಹಣ ಗಳಿಸುವ ದಾರಿ ತೋರಿಸಿಕೊಡುತ್ತದೆ ಕನಕಾಂಬರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.