ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ

Last Updated 7 ನವೆಂಬರ್ 2015, 19:32 IST
ಅಕ್ಷರ ಗಾತ್ರ

ಒಂದನೆ ಕ್ಲಾಸಲಿ ಪುಟ್ಟನ ಕೇಳಿದ್ರು:
ಎರಡಿದ್ದೂ ಒಂದೇ ಯಾವ್ದಪ್ಪ ಪುಟ್ಟ?
ಮೂಗು.
ಅದು ಹ್ಯಾಂಗಪ್ಪ?
ಹೊಳ್ಳೆಗಳೆರಡಿದ್ದೂ ಮೂಗು ಒಂದೇ.
ಸರಿ, ಎರಡನೆ ಕ್ಲಾಸಿಗೆ ಹೋಗಪ್ಪ.

ಎರಡನೆ ಕ್ಲಾಸಲಿ ಪುಟ್ಟನ ಕೇಳಿದ್ರು:
ಮೂರಿದ್ದೂ ಒಂದೇ ಯಾವ್ದಪ್ಪ?
ಹೊಟ್ಟೆ.
ಅದು ಹ್ಯಾಂಗಪ್ಪ?
ಮುರೂಟ ಇದ್ದೂ ಹೊಟ್ಟೆ ಒಂದೇ.
ಸರಿ, ಮೂರನೆ ಕ್ಲಾಸಿಗೆ ಹೋಗಪ್ಪ.

ಮೂರನೆ ಕ್ಲಾಸಲಿ ಪುಟ್ಟನ ಕೇಳಿದ್ರು:
ನಾಲ್ಕಿದ್ದೂ ಒಂದೇ ಯಾವ್ದಪ್ಪಾ?
ಮಂಚ.
ಅದು ಹ್ಯಾಗಪ್ಪ?
ಕಾಲುಗಳು ನಾಲ್ಕಿದ್ದೂ ಮಂಚ ಒಂದೇ.
ಸರಿ, ನಾಲ್ಕನೇ ಕ್ಲಾಸಿಗೆ ಹೋಗಪ್ಪ.

ನಾಲ್ಕನೆ ಕ್ಲಾಸಲಿ ಪುಟ್ಟನ ಕೇಳಿದ್ರು:
ಐದಿದ್ದೂ ಒಂದೇ ಯಾವ್ದಪ್ಪ?
ಹಸ್ತ.
ಅದು ಹ್ಯಾಂಗಪ್ಪ?
ಬೆರಳುಗಳೈದಿದ್ದೂ ಹಸ್ತ ಒಂದೇ.
ಸರಿ, ಐದನೆ ಕ್ಲಾಸಿಗೆ ಹೋಗಪ್ಪ.

ಐದನೆ ಕ್ಲಾಸಲಿ ಪುಟ್ಟನ ಕೇಳಿದ್ರು:
ಆರಿದ್ದೂ ಒಂದೇ ಯಾವ್ದಪ್ಪ?
ಸೆಟ್ ದೋಸೆ.
ಅದು ಹ್ಯಾಂಗಪ್ಪ?
ದೋಸೆ ಆರಿದ್ರೂ
ಬಿಸಿ ತೊವ್ವೆ ಹಾಕಿದರೆ ಒಂದೇ.
ಸರಿ, ಮನೆಗೆ ಹೋಗಪ್ಪ.
ಇಲ್ಲಿ ಆರನೆ ಕ್ಲಾಸು ಇಲ್ಲಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT