ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸಾಪ್‌

ಮಕ್ಕಳ ಪದ್ಯ
Last Updated 11 ಜೂನ್ 2016, 19:30 IST
ಅಕ್ಷರ ಗಾತ್ರ

ಹ್ಯಾಟ್ಸ್ ಆಫ್ ನಿಂಗೆ ವಾಟ್ಸಾಪ್
ಎಂಥ ಮಜಾ ಕೊಡ್ತೀಯ
ನಿನ್ನ ಮುಂದೆ ಹಿಂದಿನ ಎಲ್ಲ
ಈಮೇಲೂ – ಮೆಸ್ಸೇಜೂ ಗಪ್‌ ಚುಪ್‌!

ಹಸುರಿನ ವರ್ತುಲವೊಂದರ
ನಡುವೆ ಕಾಣುವ ಫೋನು
ಒಂದೆಡೆ ಮಾತ್ರ ಹನಿಯಾಕಾರ
ಇಷ್ಟೂ ನಿನ್ನದು ಐಕಾನು!

ಅಂತರ್ಜಾಲದ ತೆರೆ ಸರಿಸಿದರೆ
ಬೆರಳ ತುದಿಯಲೇ ಪ್ರತ್ಯಕ್ಷ
ಚಿತ್ರದ ನಡುವಣ ತ್ರಿಕೋನ ಮುಟ್ಟಲು
ತೆರೆಯುವುದಲ್ಲ ಅಂತರಿಕ್ಷ!

ಮಾತೇ ಚಿತ್ರವೊ ಚಿತ್ರವೆ ಮಾತೋ
ತಿಳಿಯುವುದಿಲ್ಲ ಅಂತರ
ಎರಡೂ ಸೇರಿ ಅದ್ಭುತವಾಯಿತು
ನೋಡಲುಬಹುದು ನಿರಂತರ!

ಬೇಕಾದ್ದನ್ನು ಬೇಕಾದವರಿಗೆ
ಮಾಡುತಲಿದ್ದರೆ ರವಾನೆ
ನಮಗೂ ಅವರಿಗು ಒಟ್ಟಿಗೆ
ತೆರೆವುದು ಅರಿವಿನ ಖಜಾನೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT