ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಪದ್ಯಗಳು

Last Updated 19 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಸಕ್ಕರೆ ಮಾವ

ಸಕ್ಕರೆ ಮಾವ ಸಿಹಿ ಸಿಹಿ ಮಾವ
ಸಂತೆಗೆ ಹೋಗಿದ್ದ
ಸಂತೆ ಸುತ್ತಿ ವಾಪಸು ಬರುವಾಗ
ಸುಸ್ತೂ ಆಗಿದ್ದ

ಅಷ್ಟೊತ್ತಿಗೆ ಅದೊ ಗುಡುಗು ಮಿಂಚು
ಸುರಿಯಿತು ಭಾರೀ ಮಳೆಯು
ಅತ್ತ ಕಡೆ ನೀರು ಇತ್ತ ಕಡೆ ನೀರು
ತುಂಬ್ಕೊಂಡು ಹರಿಯಿತು ಹೊಳೆಯು

ಊರಿಗೆ ಬಂದುವು ಅಂಗಿ ಲುಂಗಿ
ಸಕ್ಕರೆ ಮಾವನ ಸುಳಿವಿಲ್ಲ
ಸಕ್ಕರೆ ಮಾವ ಎಲ್ಲೀ ಅಂದರೆ
ಗಾಳಿಯು ತಂತೊಂದು ಸೊಲ್ಲ 

ಮಳೆಯಲಿ ನಾನು ಸೊರಗ್ಕೊಂಡೋದೆ
ಹೊಳೆಯಲಿ ನಾನು ಕರಗ್ಕೊಂಡೋದೆ
ಸಕ್ಕರೆ ಮಾವ ಇನ್ನಿಲ್ಲ–ಸಕ್ಕರೆ ಬೇಕಾದವರಿನ್ಮುಂದೆ 
ಕೊಂಡ್ಕೋಬಹುದು ಬೆಲ್ಲ!

***
ಬೇತಾಳ


ಕುಣಿಕುಣಿ ಕುಣಿದು ಬೇತಾಳ
ದಣಿದು ಹೋಯಿತು ಬಹಾಳ

ಮೈಚಾಚುವುದಕೆ ಜಗವೇ ಇಲ್ಲ
ಜನ ಮರುಳಾಗಿ ಊರಲ್ಲೆಲ್ಲ

ಪುಟ್ಟಾ ಪುಟ್ಟಾ ಏನ್ಮಾಡಾಣ?
ಪುಟ್ಟನೆಂದ: ಯೋಚ್ನೆ ಮಾಡಾಣ

ಆಹಾ ಹೊಳೆಯಿತು ಒಂದು ಉಪಾಯ
ಆದರೆ ಅಗಲಿ ಇದರಿಂದ ಸಹಾಯ

ಎಲೆ ಇಚ್ಛಾಧಾರಿ ಬೇತಾಳ
ಆಗು ನೀನೊಬ್ಬ ಗೋಪಾಳ

ಚಿಕ್ಕವನಾದರೆ ಜಗ ನೂರುಂಟು
ಧಡೂತಿಯಾದರೆ ಬದುಕು ಕಗ್ಗಂಟು

ಅದೂ ಸರಿ ಎನ್ನುತ ದೈತ್ಯ ಬೇತಾಳ
ಕಿರಿಕಿರಿದಾಗುತ ತಲಪಿತು ಕಾಲ

ಬೆಳಗಾಗೆದ್ದು ನೋಡಿದರೆ
ಬೇತಾಳ ಮಲಗಿತ್ತು ಮನೆ ಮಾಡಿನಲಿ
ಪುಟ್ಟನಿದ್ದನು ತಾಳೆ ಮರದಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT