ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೆಯ ದೀಪ

Last Updated 17 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಒಮ್ಮೆ ಮಗಧ ರಾಜ್ಯದ ಸೈನ್ಯಾಧಿಪತಿ ವೈಯಕ್ತಿಕ ಕೆಲಸದ ಮೇರೆಗೆ ಚಾಣಕ್ಯನನ್ನು ಭೇಟಿಯಾಗಲು ಪಾಟಲಿಪುತ್ರಕ್ಕೆ ಹೋದ. ಆಗ ಸಂಜೆ ಕಳೆದಿತ್ತು. ಚಾಣಕ್ಯರು ಗಂಗಾ ನದಿಯ ದಡದಲ್ಲಿದ್ದ ತಮ್ಮ ಗುಡಿಸಿಲಿನಲ್ಲಿ ದೀಪದೆದುರು ಕೂತು ಏನೋ ಬರೆಯುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಸೈನ್ಯಾಧಿಪತಿ ಒಳಗೆ ಬಂದ. ಅವನು ಬಂದೊಡನೆಯೇ ಚಾಣಕ್ಯರು ತಮ್ಮ ಸೇವಕನಿಗೆ ಹೇಳಿದರು, “ನೀನು ಈ ದೀಪವನ್ನು ತೆಗೆದುಕೊಂಡು ಹೋಗಿ, ಆರಿಸಿ, ಇನ್ನೊಂದು ದೀಪವನ್ನು ಹೊತ್ತಿಸಿ ತೆಗೆದುಕೊಂಡು ಬಾ.”ಸೇವಕ ಕೂಡಲೇ ಅವರ ಆದೇಶವನ್ನು ಪಾಲಿಸಿದ.

ಚಾಣಕ್ಯ ಮತ್ತು ಸೈನ್ಯಾಧಿಪತಿಯ ಮಾತುಕತೆ ಮುಗಿದ ನಂತರ, ಸೈನ್ಯಾಧಿಪತಿ ಕುತೂಹಲದಿಂದ ಪ್ರಶ್ನಿಸಿದ, ‘ಮಹಾತ್ಮರೇ, ನನಗೊಂದು ವಿಷಯ ಅರ್ಥವಾಗಲಿಲ್ಲ. ನಾನು ಬಂದ ನಂತರ ನೀವು ಒಂದು ದೀಪವನ್ನು ಆರಿಸಲು ಹೇಳಿ, ಇನ್ನೊಂದು ದೀಪವನ್ನು ಹೊತ್ತಿಸಿ ತರುವಂತೆ ಹೇಳಿದಿರಿ. ಎರಡು ದೀಪಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ, ನೀವು ಹೀಗೇಕೆ ಮಾಡಿದಿರಿ?’

ಚಾಣಕ್ಯರು ಮುಗುಳ್ನಗುತ್ತಾ ಸೈನ್ಯಾಧಿಪತಿಗೆ ಹೇಳಿದರು, ‘ನೋಡಿ, ನೀವು ಬಂದಾಗ ನಾನು ರಾಜ್ಯದ ಕೆಲಸವನ್ನು ಮಾಡುತ್ತಿದ್ದೆ. ಆ ದೀಪದಲ್ಲಿ ರಾಜ್ಯದ ಕೋಷದಿಂದ ಖರೀದಿಸಿದ ಎಣ್ಣೆಯಿತ್ತು. ನಾನುನಿನ್ನೊಂದಿಗೆ ಮಾತನಾಡುವಾಗ, ನನ್ನ ದೀಪವನ್ನು ಹೊತ್ತಿಸಿದೆ. ಯಾಕೆಂದರೆ, ನಿಮ್ಮೊಂದಿಗೆ ನಡೆದ ಮಾತುಕತೆ ವೈಯಕ್ತಿಕವಾಗಿತ್ತು. ರಾಜ್ಯದ ಹಣವನ್ನು ವೈಯಕ್ತಿಕ ಕೆಲಸಗಳಿಗೆ ಉಪಯೋಗಿಸಲು ನನಗೆ ಅಧಿಕಾರವಿಲ್ಲ, ಅದಕ್ಕೇ ಹೀಗೆ ಮಾಡಿದೆ’.

ನಂತರ ಚಾಣಕ್ಯ ಮತ್ತೆ ತಮ್ಮ ಮಾತನ್ನು ಮುಂದುವರೆಸಿ ಹೇಳಿದರು, “ಸ್ವದೇಶದ ಬಗ್ಗೆ ಪ್ರೀತಿ ಎಂದರೆ, ನಮ್ಮ ದೇಶದವಸ್ತುವನ್ನು ನಮ್ಮದೆಂದು ತಿಳಿದು ಅದನ್ನು ರಕ್ಷಿಸಬೇಕು. ದೇಶದ ಗೌರವಕ್ಕೆ ಧಕ್ಕೆ ತರುವಂತ ಕೆಲಸವನ್ನು ಮಾಡಬಾರದು. ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಸಂಸ್ಕೃತಿ ಮತ್ತು ಆದರ್ಶಗಳಿರುತ್ತವೆ. ಆ ಆದರ್ಶಗಳಿಗೆ ಅನುಗುಣವಾಗಿ ಕಾರ್ಯವೆಸಗುವುದರಿಂದ ದೇಶದ ಸ್ವಾಭಿಮಾನದ ರಕ್ಷಣೆಯಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT