ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತ್ಯಕ್ರಿಯೆ: ಶಾಸ್ತ್ರ ಮತ್ತು ಸಂಸ್ಕಾರ...

–ಮ.ಶ್ರೀ. ಮುರಳಿ ಕೃಷ್ಣ ಬೆಂಗಳೂರು
Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಒಬ್ಬ ಬುದ್ಧಿಜೀವಿಯಾಗಿ ಯು.ಆರ್.­ಅನಂತ­ಮೂರ್ತಿ ಅವರು ಅನೇಕ ಸಾಮಾ­ಜಿಕ ಮತ್ತು ವೈಚಾರಿಕ ವಿಷಯಗಳನ್ನು ನೇರವಾಗಿ ಅಭಿವ್ಯಕ್ತಗೊಳಿಸಿದರು. ಕೆಲವು ಚಳವಳಿಗಳಲ್ಲಿ ಭಾಗ­ವಹಿಸಿದರು. ಈ ಹಾದಿಯಲ್ಲಿ ಅನೇಕ ವಿವಾ­ದ­ಗಳಿಗೂ ಸಿಲುಕಿದರು. ಆದರೆ ಅವರ ಅಂತ್ಯಕ್ರಿಯೆಯ ವೈಭವ ಕಂಡು ಅಚ್ಚರಿಯಾ­ಯಿತು; ಕಸಿವಿಸಿಯೂ ಆಯಿತು.

ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಬದು­ಕಿನುದ್ದಕ್ಕೂ ಗಾಂಧಿವಾದವನ್ನು ಎತ್ತಿ ಹಿಡಿ­ದರು.  ಅವರ  ಅಂತ್ಯಕ್ರಿಯೆಯಲ್ಲೂ ಯಥೇಚ್ಛ­ವಾಗಿ ಶ್ರೀಗಂಧದ  ತುಂಡುಗಳನ್ನು ಬಳಸ­ಲಾಯಿತು!

ನಿಜ, ಮೃತ ವ್ಯಕ್ತಿ ಹಾಗೂ ಅವರ  ಕುಟುಂಬ­ದವರಿಗೆ ಅಂತ್ಯಕ್ರಿಯೆಯ ವಿಷಯದಲ್ಲಿ ಅವರದ್ದೇ ಆದ ಹಕ್ಕು, ನಿಲುವುಗಳು ಇರುತ್ತವೆ.  ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು  ಅವರ ಶರೀರವನ್ನು ಕೋಲ್ಕತ್ತದ ಆಸ್ಪತ್ರೆ­ಯೊಂದಕ್ಕೆ  ದಾನ ಮಾಡಲಾಯಿತು.  ನಮ್ಮ ರಾಜ್ಯದ ಸಿಪಿಎಂ ನಾಯಕ ಸೂರ್ಯ­ನಾರಾಯಣ ರಾವ್ ಅವರ ಅಂತ್ಯಕ್ರಿಯೆಯನ್ನು ಯಾವುದೇ ಧಾರ್ಮಿಕ ವಿಧಿಗಳಿಲ್ಲದೆ  ವಿದ್ಯುತ್ ಚಿತಾಗಾರದಲ್ಲಿ ಸರಳವಾಗಿ ನೆರವೇರಿಸ­ಲಾ­ಯಿತು. ಸಾಹಿತ್ಯ–ಸಾಂಸ್ಕೃತಿಕ ಲೋಕದ ಚಿ.­ಶ್ರೀನಿವಾಸ ರಾಜು, ಮೇಕಪ್ ನಾಣಿ ಅಂತಹವರ ಅಪೇಕ್ಷೆಯ ಮೇರೆಗೆ  ಕುಟುಂಬದವರು ಅವರ ದೇಹವನ್ನು ವೈದ್ಯಕೀಯ  ಕಾಲೇಜಿಗೆ ನೀಡಿದ್ದ­ರೆಂಬುದು ನೆನಪು.  ಖ್ಯಾತನಾಮರಲ್ಲದೆ, ಅನೇಕ  ಸಾಮಾನ್ಯ ಜನರೂ ಈ ವಿಷಯದಲ್ಲಿ ಅನುಕರ­ಣೀಯ ಮಾನವತೆಯನ್ನು  ಮೆರೆದಿದ್ದಾರೆ. ಆದರೆ ಅನಂತಮೂರ್ತಿ ಅವರ ವಿಷಯದಲ್ಲಿ ಹೀಗೇಕಾಯಿತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT