ರಾಮನಗರ: ನಗರದ ಮಾಗಡಿ ರಸ್ತೆಯ ಕೆಂಪೇಗೌಡ ವೃತ್ತದ ಬಳಿಯಲ್ಲಿರುವ ರೆಡ್ಡಿ ಸಾ ಮಿಲ್‌ನಲ್ಲಿ ಆಕಸ್ಮಿಕವಾಗಿ ಉಂಟಾದ ಬೆಂಕಿಗೆ ಲಕ್ಷಾಂತರ ಮೌಲ್ಯದ ಮರ ಮುಟ್ಟುಗಳು ಸುಟ್ಟು ಕರಕಲಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಮಿಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡ, ಕೆಲವೇ ನಿಮಿಷದಲ್ಲಿ ಅಲ್ಲಿದ್ದ ಮರದ ರಾಶಿಗೆ ಬೆಂಕಿ ಹರಡಿದೆ. ತಕ್ಷಣ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಲಾಯಿತಾದರೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಅವಘಡ ತೀವ್ರ ಸ್ವರೂಪ ತಾಳಿತ್ತು.

ಅಗ್ನಿ ಶಾಮಕ ದಳದ ವಾಹನ ತನ್ನಲ್ಲಿದ್ದ ನೀರನ್ನು ಸಂಪೂರ್ಣ ಖಾಲಿ ಮಾಡಿ ಬೆಂಕಿಯನ್ನು ನಂದಿಸಿತು. ಆದರೆ ಪುನಃ ಮರ ಮಟ್ಟುಗಳಿಗೆ ಬೆಂಕಿ ಹತ್ತಿಕೊಂಡಿತು. ವಾಹನದಲ್ಲಿ ನೀರು ಇರಲಿಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿತು. ಆಗ ಮತ್ತೊಂದು ಅಗ್ನಿ ಶಾಮಕ ವಾಹನ ಬಂದು ಬೆಂಕಿಯನ್ನು ನಂದಿಸಿತು. ನಗರದ ಮದ್ಯಭಾಗದಲ್ಲಿ ಬೆಂಕಿಯ ಹೊಗೆ ದಟ್ಟವಾಗಿ ಹಬ್ಬಿದ್ದರಿಂದ ಅಲ್ಪ ಕಾಲ ಸುತ್ತಮುತ್ತಲ ನಾಗರಿಕರು ಆತಂಕಕ್ಕೆ ಒಳಗಾಗಿದ್ದರು. ಅಲ್ಲದೆ ಸಾ ಮಿಲ್ ಪಕ್ಕದಲ್ಲಿಯೇ ಶಾಲೆ ಇದ್ದ ಕಾರಣ ಶಾಲೆಯ ಸಿಬ್ಬಂದಿ ಸಹ ಆತಂಕಕ್ಕೆ ಒಳಗಾಗಿದ್ದರು. ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಗ್ನಿ ಅನಾಹುತಕ್ಕೆ ಕಾರಣ ಏನೆಂಬುದಕ್ಕೆ ತನಿಖೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.