ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಹಂಚಿಕೆ ಸಮಿತಿಗೆ ಸಿನ್ಹಾ ಮುಖ್ಯಸ್ಥ

Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ನೂತನ ವಾಗಿ ಅಸ್ತಿತ್ವಕ್ಕೆ ಬರಲಿರುವ ತೆಲಂ­ಗಾಣ ರಾಜ್ಯಕ್ಕೆ ಅಖಿಲ ಭಾರತ ಮಟ್ಟದ ಸೇವೆಗಳ ಅಧಿಕಾರಿಗ­ಳನ್ನು ಹಂಚಿಕೆ ಮಾಡುವ ಸಲು ವಾಗಿ ರಚಿಸಲಾಗಿರುವ ಐವರು ಸದಸ್ಯರ ಸಮಿತಿಯ ನೇತೃತ್ವ ವನ್ನು ಕೇಂದ್ರ ಜಾಗೃತ ಆಯುಕ್ತ ರಾಗಿದ್ದ (ಸಿವಿಸಿ) ಪ್ರತ್ಯುಷ್‌ ಸಿನ್ಹಾ ವಹಿಸಲಿದ್ದಾರೆ.

ಈ ಸಮಿತಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಅಗತ್ಯವಾದ ಮೂರು ಅಖಿಲ ಭಾರತ ಮಟ್ಟದ ಸೇವೆಗಳಾದ ಐಎಎಸ್‌(ಭಾರತೀಯ ಆಡಳಿತ ಸೇವೆ), ಐಪಿಎಸ್‌(ಭಾರತೀಯ ಪೊಲೀಸ್‌ ಸೇವೆ) ಹಾಗೂ ಐಎಫ್‌ಎಸ್‌(ಭಾರತೀಯ ಅರಣ್ಯ ಸೇವೆ) ಅಧಿಕಾರಿಗಳ ಹಂಚಿಕೆಗೆ  ಸೂಕ್ತ ಶಿಫಾರಸುಗಳನ್ನು ಮಾಡ ಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಆಂಧ್ರ ಮುಖ್ಯ ಕಾರ್ಯ ದರ್ಶಿ, ಆಂತರಿಕ ಭದ್ರತೆ ವಿಶೇಷ ಕಾರ್ಯದರ್ಶಿ,  ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (ಸೇವೆಗಳು ಮತ್ತು ಬೇಹುಗಾರಿಕೆ)  ಹೆಚ್ಚುವರಿ ಕಾರ್ಯದರ್ಶಿ ಈ ಸಮಿತಿಯಲ್ಲಿ ಸದಸ್ಯ ಕಾರ್ಯ­ದರ್ಶಿ­ಯಾಗಿ ಕಾರ್ಯ­ನಿರ್ವ­ಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT