ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೋಪಥಿ ಬಳಸಲು ಹಪಾಹಪಿ ಏಕೆ?

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಡಾ. ಸಿ.ಡಿ. ರವಿರಾಜ್‌ ಅವರು  ಆಯುಷ್‌ ವೈದ್ಯರು ಅಲೋಪಥಿ ಚಿಕಿತ್ಸೆ ನೀಡುವುದನ್ನು ಸಮರ್ಥಿಸಿಕೊಂಡಿರುವುದಕ್ಕೆ ನನ್ನ ಪ್ರತಿಕ್ರಿಯೆ (ಪ್ರ.ವಾ.,‘ಸಂಗತ’  ಅ.14).
ಅಲೋಪಥಿ ವೈದ್ಯರು ಅಲೋಪಥಿ ಚಿಕಿತ್ಸೆಯನ್ನು ಸ್ವತಂತ್ರವಾಗಿ ನೀಡುವ ಮಟ್ಟಕ್ಕೆ ಬೆಳೆ­ಯುವಷ್ಟರಲ್ಲಿ ಇಡೀ ಅಲೋಪಥಿ ಚಿಕಿತ್ಸೆ ಬಗ್ಗೆ ಸಮಗ್ರ ಜ್ಞಾನ ಪಡೆದಿರು­ತ್ತಾರೆ. ಪ್ರತಿದಿನವೂ ಹೊಸ ಔಷಧಗಳು ಆವಿಷ್ಕಾರವಾಗುತ್ತಿರುವ ಆಧುನಿಕ ಯುಗದಲ್ಲಿ ಹೊಸ ಔಷಧ­ವೊಂದನ್ನು ಬಳಸುವಾಗಲೂ ಅದರ ಬಗ್ಗೆ ಸವಿವರವಾಗಿ ತಿಳಿದುಕೊಂಡೇ ಉಪಯೋಗಿಸ­ಬೇಕು. ಸರಿಯಾದ ಮಾಹಿತಿಯಿಲ್ಲದೆ ಔಷಧವನ್ನು ಮನುಷ್ಯರ ಮೇಲೆ ಬಳಸುವುದೂ ಒಂದು ರೀತಿಯ ಪ್ರಯೋಗವಾಗುತ್ತದೆ. ಈ ರೀತಿಯ ಪ್ರಯೋಗಗಳು ಆಯುಷ್‌ ಪದ್ಧತಿಯನ್ನೂ ಒಳ­ಗೊಂಡಂತೆ ಎಲ್ಲಾ ವೈದ್ಯಪದ್ಧತಿಗಳಲ್ಲಿ ನಿಷಿದ್ಧ. ಇಂತಹ ಪ್ರಯೋಗಗಳಿಗೆ ಕಾನೂನಿನ ಮಾನ್ಯತೆ ಇಲ್ಲ.

ಆಯುಷ್‌ ವೈದ್ಯರಿಗೆ ಅಲೋಪಥಿ ಪದ್ಧತಿಯ ಬಗ್ಗೆ ಅರೆಬರೆ ಜ್ಞಾನವಿರುವುದರಿಂದ ಅಲೋಪಥಿ ಮಾತ್ರೆಗಳನ್ನು ಬರೆದುಕೊಟ್ಟರೆ ಸರಿಯೆಂದು ಯಾರೂ ಒಪ್ಪಿಕೊಳ್ಳಲು ಸಾಧ್ಯ­ವಿಲ್ಲ. ಇದು ಸರಿಯೆಂದಾದರೆ ಹಲವಾರು ವರ್ಷ ಔಷಧಿ ಮಾತ್ರೆಗಳ ನಡುವೆಯೇ ತಮ್ಮ ಜೀವನ ಕಳೆಯುವ ಫಾರ್ಮಾಸಿಸ್ಟ್ ಅಥವಾ ಹಲವು ವರ್ಷ ರೋಗಿಗಳ ಶುಶ್ರೂಷೆ­ಯಲ್ಲಿ ತೊಡಗುವ ನರ್ಸ್‌ಗಳು ಕೂಡ ಕ್ಲಿನಿಕ್‌ ಪ್ರಾರಂಭಿಸಿ ಚಿಕಿತ್ಸೆ ನೀಡಬಹುದಲ್ಲವೇ? ನಾವು ಯಾವ ಚಿಕಿತ್ಸಾ ಪದ್ಧತಿಯನ್ನು ಅಧ್ಯಯನ ಮಾಡಿರುತ್ತೇವೆಯೋ ಅದೇ ಪದ್ಧತಿ­ಯಲ್ಲಿ ಮಾತ್ರ ಚಿಕಿತ್ಸೆ ನೀಡಬೇಕು.

ಅಲೋಪಥಿ ವೈದ್ಯರು ಲಿವ್‌ 52, ಎಮ್‌ಟೋನ್‌ ಮುಂತಾದ ಆಯುರ್ವೇದದ ಮಾತ್ರೆ­ಗಳನ್ನು ರೋಗಿಗಳಿಗೆ ನೀಡುವುದೂ ತಪ್ಪಾಗುತ್ತದೆ. ಆಯು­ರ್ವೇದಕ್ಕೆ ವೈದ್ಯಕೀಯ ಲೋಕ­ದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಆಯುರ್ವೇದ­ದಲ್ಲೂ ಸಹ ನಿರಂತರವಾಗಿ ಸಂಶೋ­ಧನೆಗಳು ನಡೆಯುತ್ತಿವೆ. ಆಯುಷ್‌ ವೈದ್ಯರು ತಮ್ಮ ಪದ್ಧತಿಗೇ ಬದ್ಧತೆ ತೋರಿಸಿ ಹೆಚ್ಚಿನ ಸಂಶೋಧನೆಗಳಲ್ಲಿ ನಿರತರಾದರೆ ಆಯುರ್ವೇದವು ಇನ್ನಷ್ಟು  ಸಮಕಾಲೀನ­ವಾಗುತ್ತದೆ. ಇಂತಹ ಶ್ರೇಷ್ಠ ಪದ್ಧತಿ ಆಯ್ಕೆ ಮಾಡಿಕೊಂಡಿ­ರುವ ಆಯುಷ್‌ ವೈದ್ಯರಿಗೆ ಅಲೋಪಥಿ ಔಷಧಿ­ಗಳನ್ನು ಬಳಸಬೇಕೆಂಬ ಹಪಾಹಪಿ ಏಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT