ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿಗೆ ಮುನ್ನವೇ ಮುಂಗಾರು

Last Updated 21 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಬಂಗಾಳ ಕೊಲ್ಲಿ­ಯಲ್ಲಿ ವಾಯುಭಾರ ಕುಸಿತ ಉಂಟಾ­ಗಿದ್ದು, ಪೂರ್ವ ಕರಾವಳಿ­-ಯಲ್ಲಿ ಅವಧಿಗಿಂತ ಮೊದಲೇ ಮುಂಗಾರು ಮಳೆ ಆರಂಭ­ವಾಗಲಿದೆ.

ಸದ್ಯ ಅಂಡಮಾನ್‌ ಮತ್ತು ನಿಕೋ­ಬಾರ್‌ ದ್ವೀಪದಿಂದ ವಾಯವ್ಯ ದಿಕ್ಕಿ­ನಲ್ಲಿ ಇರುವ ವಾಯುಭಾರ ಕುಸಿತ, ಮುಂದಿನ 24 ಗಂಟೆಗಳಲ್ಲಿ ತೀವ್ರವಾ­ಗುವ ಸಾಧ್ಯತೆ ಇದೆ. ನಂತರ ಶುಕ್ರ­ವಾರ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ ಕಡೆ ಸಾಗಲಿದೆ.

‘ವಾಯುಭಾರ ಕುಸಿತ­ದಿಂ­ದಾಗಿ ಅವ­ಧಿಗೂ ಮುನ್ನ ಪೂರ್ವ ಕರಾವಳಿಗೆ ಮುಂಗಾರು ಅಪ್ಪಳಿ­ಸುವ ಸಾಧ್ಯತೆ ಇದೆ’ ಎಂದು ಹವಾ­ಮಾನ ಇಲಾ­ಖೆಯ ಮುಖ್ಯಸ್ಥ ಬಿ.ಪಿ.ಯಾದವ್‌ ಅವರು ತಿಳಿಸಿದ್ದಾರೆ.

ಈ ಮೊದಲು, ಜೂನ್‌ 5ರ ಆಸು­ಪಾಸು ಕೇರಳ ಕರಾವಳಿಗೆ ನೈರುತ್ಯ ಮಾರುತ ಅಪ್ಪಳಿಸಲಿದೆ ಎಂದು ಹವಾ­ಮಾನ ಇಲಾಖೆ ತಿಳಿಸಿತ್ತು. ಪೂರ್ವ ಭಾರತದಲ್ಲಿ ತಾಪಮಾನ ಹೆಚ್ಚಿದ್ದು, ಮೊದಲ ಮಳೆ ಈ ಪ್ರದೇಶ­ದಲ್ಲಿ ಹಿತವಾದ ವಾತಾವರಣ ತರಲಿದೆ. ಆದರೆ, ಇದು ಈ ವರ್ಷ ಸಾಕಷ್ಟು ಮಳೆ ಸುರಿಯುವ ಸೂಚನೆ ಅಲ್ಲ ಎಂಬುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT