ಮೂಡುಬಿದಿರೆ: ನಿಡ್ಡೋಡಿಯಲ್ಲಿ ಪ್ರಸ್ತಾವಿತ 4,000 ಮೆಗಾವಾಟ್ ಉಷ್ಣವಿದ್ಯುತ್ ಸ್ಥಾವರ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವರಿಂದ ಮೂಲಸೌಕರ್ಯ ಒದಗಿಸಲು ಬೇಡಿಕೆ ಇಟ್ಟಿರುವ ವಿಷಯ ಬುಧವಾರ ನಡೆದ ಕಲ್ಲಮುಂಡ್ಕೂರು ಗ್ರಾಮಸಭೆಯಲ್ಲಿ ಗ್ರಾಮಸ್ಥರನ್ನು ಆತಂಕಕ್ಕೆ ಕಾರಣವಾಯಿತು.

ಪಂಚಾಯಿತಿ ಅಧ್ಯಕ್ಷ ಜೋಕಿಂ ಕೊರೆಯ ಅಧ್ಯಕ್ಷತೆಯಲ್ಲಿ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ಬುಧವಾರ ಗ್ರಾಮಸಭೆ ನಡೆಯಿತು. ವಿಷಯ ಪ್ರಸ್ತಾವಿಸಿದ ಲಾರೆನ್ಸ್ ತೌವ್ರೊ ನಿಡ್ಡೋಡಿಯಲ್ಲಿ ಉಷ್ಣವಿದ್ಯುತ್ ಸ್ಥಾವರಕ್ಕೆ ಅವಕಾಶ ಕೊಡುವುದಿಲ್ಲ ಎಂದು ರಾಜಕಾರಣಿಗಳು ಹೇಳುತ್ತಿದ್ದಾರೆ.

ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೆಹಲಿಯಲ್ಲಿ ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಮಂಗಳವಾರ ಭೇಟಿಯಾಗಿ ನಿಡ್ಡೋಡಿಯಲ್ಲಿ ಪ್ರಸ್ತಾವಿತ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಗೆ ಮೂಲಸೌಕರ್ಯ ಒದಗಿಸುವಂತೆ ಬೇಡಿಕೆ ಇಟ್ಟಿದ್ದು ಅದಕ್ಕೆ ಸಚಿವರು ಒಪ್ಪಿಗೆ ಸೂಚಿಸಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಸರ್ಕಾರದ ಕ್ರಮ ನಮಗೆ ಆತಂಕ ಉಂಟುಮಾಡಿದೆ. ಈ ಬಗ್ಗೆ ಸರ್ಕಾರದ ನಿಲುವು ಏನು ಎಂಬುದು ಜನತೆಗೆ ತಿಳಿಯಬೇಕು ಎಂದು ಅವರು ಗ್ರಾಮಸ್ಥರ ಪರ ಆಗ್ರಹಿಸಿದರು.

ಗ್ರಾಮಸ್ಥರ ವಿರೋಧವನ್ನು ಪಂಚಾಯಿತಿ ಈ ಹಿಂದೆಯೆ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಮೂಲಕ ತಿಳಿಸಿದ್ದು ಅದರ ಬಗ್ಗೆ ಪರಿಶೀಲಿಸಿ ವರದಿ ಕಳಿಸುವಂತೆ ಸರ್ಕಾರ ಕೆಪಿಟಿಸಿಎಲ್ಗೆ ಪತ್ರ ಬರೆದಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬೂಬಕರ್ ತಿಳಿಸಿದರು. ನಿಡ್ಡೋಡಿ ಸ್ಥಾವರಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಅಧ್ಯಕ್ಷರು ಕೂಡ ಸ್ಪಷ್ಟಪಡಿಸಿದರು.

ಕಲ್ಲಮುಂಡ್ಕೂರು ಸರ್ವೋದಯ ಶಾಲೆಗೆ ಹತ್ತಿರ ಸ್ಮಶಾನ ಭೂಮಿಗೆ 5.40 ಎಕ್ರೆ ಜಾಗ ಕಾಯ್ದಿರಿಸಿರುವುದಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಶಾಲೆ ಹತ್ತಿರ ಸ್ಮಶಾನ ಭೂಮಿ ಬೇಡ. ಈ ಬಗ್ಗೆ ಶಿಕ್ಷಕರ, ಶಾಲಾಭಿವೃದ್ಧಿ ಸಮಿತಿಯವರ ಅಭಿಪ್ರಾಯವನ್ನು ಪಡೆದು ಬಳಿಕ ಮುಂದುವರಿಯಿರಿ ಎಂದು ಶಿಕ್ಷಕ ಗುರು ಎಂ.ಪಿ ಸಲಹೆಯಿತ್ತರು. ಸ್ಥಳೀಯರ ಹಾಗೂ ಶಾಲಾಭಿವೃದ್ಧಿ ಸಮಿತಿಯವರ ಅಭಿಪ್ರಾಯ ಪಡಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಮೆಸ್ಕಾಂ ಲೈನ್ಮ್ಯಾನ್ ವಿರುದ್ಧ ಆಕ್ರೋಶ:  ನಿಡ್ಡೋಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೆಸ್ಕಾಂ ಲೈನ್ಮ್ಯಾನ್ ಸಾರ್ವಜನಿಕರೊಂದಿಗೆ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ಲಾರೆನ್ಸ್ ತೌವ್ರೊ ಆರೋಪಕ್ಕೆ ಉತ್ತರಿಸಿದ ಮೆಸ್ಕಾಂನ ಕಿರಿಯ ಇಂಜಿನಿಯರ್ ನವೀನ್, ಲೈನ್ಮ್ಯಾನ್ ಉದ್ಧಟತದ ವಿರುದ್ಧ ಹಲವು ಬಾರಿ ಎಚ್ಚರಿಕೆ ನೀಡಿದೆ. ಇದುವರೆಗೆ ಯಾರೂ ಲಿಖಿತ ದೂರು ನೀಡದಿದ್ದುದರಿಂದ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಈ ದೂರಿನ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.