ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ ಸಾಧನೆ: ಅಣ್ಣಾ ಹಜಾರೆ ಸಂತಸ

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ,ಮುಂಬೈ(ಐಎಎನ್‌ಎಸ್‌): ದೆಹಲಿ ವಿಧಾನ­ಸಭೆ ಚುನಾವಣೆ­ಯಲ್ಲಿ ಆಮ್‌ ಆದ್ಮಿ ಪಕ್ಷ ಮಾಡಿರುವ ಸಾಧನೆ ಮತ್ತು ಕೇಜ್ರಿವಾಲ್‌ ಜಯಗಳಿ­ಸಿರು­ವುದಕ್ಕೆ ಸಾಮಾಜಿಕ ಕಾರ್ಯ­ಕರ್ತ ಅಣ್ಣಾ ಹಜಾರೆ ‘ಸಂತಸ’ ವ್ಯಕ್ತಪ­ಡಿಸಿದ್ದು, ‘ಒಂದು ದಿನ’ ಅವರು ದೆಹಲಿ ಮುಖ್ಯ­ಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

‘ಅರವಿಂದ ಕೇಜ್ರಿವಾಲ್‌ ಅವರು ಪಕ್ಷ­ವನ್ನು ಗೆಲುವಿನ ದಡಕ್ಕೆ ಕೊಂಡೊಯ್ದಿ­ರು­ವುದರಿಂದ ನಾನು ಸಂತಸಗೊಂ­ಡಿದ್ದೇನೆ’ ಎಂದು ಅಣ್ಣಾ ರಾಳೇಗಣಸಿದ್ದಿಯಲ್ಲಿ ಸುದ್ದಿ­ಗಾರರಿಗೆ ತಿಳಿಸಿದ್ದಾರೆ.

‘ದೆಹಲಿಯಲ್ಲಿ ಮರು ಚುನಾವಣೆ­ಯಾ­ದರೂ ತೊಂದರೆಯಿಲ್ಲ. ಕೇಜ್ರಿ­ವಾಲ್‌ ಅವರು ಯಾವುದೇ ಪಕ್ಷದ ಬೆಂಬಲ ಪಡೆ­ಯಬಾರದು. ಜನರು ಕಾಂಗ್ರೆಸ್‌ಗೆ ಪಾಠ ಕಲಿಸಿದ್ದಾರೆ ಎಂಬು­ದಕ್ಕೆ ದೆಹಲಿ ಚುನಾವಣೆ ಫಲಿತಾಂಶವೇ ತೋರಿಸು­ತ್ತದೆ. ಅಲ್ಲದೇ, ದೆಹಲಿಯಲ್ಲಿ ನಡೆಸಿದ ಆಂದೋಲನ ಆಮ್‌ ಆದ್ಮಿ ಪಕ್ಷದ ಗೆಲುವಿಗೆ  ಸಹಾಯಕಾರಿ­ಯಾ­ಯಿತು’ ಎಂದು ಅಣ್ಣಾ ಹೇಳಿದ್ದಾರೆ.

‘ಕೇಜ್ರಿವಾಲ್‌ ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಉತ್ತಮ ಕೆಲಸ ಮಾಡಬಹುದು ಮತ್ತು  ಸರ್ಕಾರಕ್ಕೆ ಸರಿಯಾದ ದಿಕ್ಕು ತೋರಿಸಬಹುದು. ಮುಖ್ಯ­ಮಂತ್ರಿ ಶೀಲಾ ದೀಕ್ಷಿತ್‌ ಅವರನ್ನು ಸೋಲಿಸಿರುವುದು ಸಾಮಾನ್ಯ ವಿಚಾರ­ವಲ್ಲ’ ಎಂದು ಅಣ್ಣಾ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT