ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪ್ಪಲಾಗದು

Last Updated 24 ಜುಲೈ 2016, 19:30 IST
ಅಕ್ಷರ ಗಾತ್ರ

ಕಾಶ್ಮೀರದಲ್ಲಿ ಮಾಧ್ಯಮಗಳ ಮೇಲೆ  ನಿರ್ಬಂಧ ಹೇರಿದ್ದರ ಬಗ್ಗೆ ಆ ರಾಜ್ಯದ  ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿಷಾದ ವ್ಯಕ್ತಪಡಿಸಿರುವುದು  ಬರೀ ಬೂಟಾಟಿಕೆ ಅನ್ನಿಸುತ್ತದೆ. ಮುಖ್ಯಮಂತ್ರಿಗೆ  ಮಾಹಿತಿ  ಇಲ್ಲದೆಯೇ ನಿರ್ಬಂಧ  ಸಾಧ್ಯವಿಲ್ಲ.

ಈ ವಿದ್ಯಮಾನ, ಸರ್ವಾಧಿಕಾರ ಆಡಳಿತವಿರುವ ದೇಶಗಳ ನಿರಂಕುಶ ನಡೆಯನ್ನು ನೆನಪಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯವನ್ನು ದಮನ ಮಾಡಿದ್ದು ಅಸಾಂವಿಧಾನಿಕ ನಡೆ. ಕಾಶ್ಮೀರದ ಈ ಬೆಳವಣಿಗೆ ಪ್ರಜಾಪ್ರಭುತ್ವದ ಆಶಯಕ್ಕೇ ಕೊಡಲಿ ಪೆಟ್ಟು ಕೊಟ್ಟಂತಿದೆ.

ಕಾಶ್ಮೀರದಲ್ಲಿ  ಅಂತರ್ಜಾಲದ ಮೇಲಿನ ನಿಷೇಧ ಇನ್ನೂ ಮುಂದುವರಿದಿರುವುದು  ಕಳವಳದ ಸಂಗತಿ. ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ ವಿರುದ್ಧ ಪತ್ರಕರ್ತರು, ಬುದ್ಧಿಜೀವಿಗಳು,  ಚಿಂತಕರು ಧ್ವನಿ ಎತ್ತುವ ಮೂಲಕ ಪ್ರಜಾಪ್ರಭುತ್ವದ  ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT