ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಭಾವಿ ಉಪಖಜಾನೆ: ಸಿಬ್ಬಂದಿ ಕೊರತೆ

Last Updated 25 ಜೂನ್ 2016, 10:30 IST
ಅಕ್ಷರ ಗಾತ್ರ

ಕೆಂಭಾವಿ: ಪಟ್ಟಣದ ಉಪಖಜಾನೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಕೇವಲ ಒಬ್ಬ ಅಧಿಕಾರಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸರ್ಕಾರ 2014–15ನೇ ಸಾಲಿನಲ್ಲಿ ಉಪಖಜಾನೆಗಳನ್ನು ಮೇಲ್ದರ್ಜೆಗೇರಿಸಿ ಪತ್ರಾಂಕಿತ ಉಪಖಜಾನೆ ಎಂದು ಮಾಡಿದೆ. ಆದರೆ ಸಿಬ್ಬಂದಿಯನ್ನು ನಿಯೋಜನೆ ಮಾಡದಿರುವುದರಿಂದ ಈ ಭಾಗದ ನೌಕರರಿಗೆ ತೊಂದರೆಯಾಗಿದೆ.

ಉಪಖಜಾನೆಯಲ್ಲಿ ಒಟ್ಟು ಐದು ಹುದ್ದೆಗಳಿದ್ದು, ಉಪಖಜಾನೆ ಅಧಿಕಾರಿ ಹೊರತು ಪಡಿಸಿ ಉಳಿದ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ತ್ವರಿತಗತಿ ಯಲ್ಲಿ ಕೆಲಸಗಳು ಆಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಉಪಖ ಜಾನೆ ಮೇಲ್ದರ್ಜೆಗೇರಿಸಿದ್ದಲ್ಲದೆ ಇದೀಗ ಖಜಾನೆ2 ಅಸ್ತಿತ್ವಕ್ಕೆ ಬಂದಿರುವುದರಿಂದ ಮೂರುಜನ ಸಿಬ್ಬಂದಿ ಮಾಡಬೇಕಾದ ಕೆಲಸವನ್ನು ಒಬ್ಬ ಅಧಿಕಾರಿ ಮಾಡುವುದು ಅನಿವಾರ್ಯವಾಗಿದೆ.

ಕೆಂಭಾವಿ ವಲಯದ 20 ಗೆಜೆಟೆಡ್ ಅಧಿಕಾರಿಗಳ ವೇತನ ಒಬ್ಬರೇ ಮಾಡುತ್ತಿದ್ದಾರೆ. ಇದ್ದ ಒಬ್ಬ ಅಧಿಕಾರಿ ರಜೆ ಮೇಲೆ ತೆರಳಿದರೆ ಅಂದು ಖಜಾನೆ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರದ ಬಹುತೇಕ ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಸಂಬಳ ಹಾಗೂ ವಿವಿಧ ಸೌಲಭ್ಯಗಳ ಹಣಕಾಸಿನ ಕಾರ್ಯವೈಖರಿಯನ್ನು ತನ್ನೊಡಲಲ್ಲಿರಿಸಿ ಕೊಂಡಿರುವ, ಕರ್ನಾಟಕ ಸರ್ಕಾರ ಖಜಾನೆ ಇಲಾಖೆ,

ಅದರಲ್ಲೂ ರಾಜ್ಯ ಮುಖ್ಯಮಂತ್ರಿಯವರ ನೇರ ಆಡಳಿತಗೊ ಳಪಡುವ ಇಲಾಖೆ ಇದಾಗಿದ್ದು ಶೀಘ್ರ ದಲ್ಲಿ ಸಿಬ್ಬಂದಿ ಕೊತೆಯನ್ನು ನೀಗಿಸಬೇಕು ಮತ್ತು ಸರ್ಕಾರದ ವಿವಿಧ ಯೋಜನೆ ಗಳಾದ ಸಂಧ್ಯಾಸುರಕ್ಷಾ,

ಅಂಗವಿಕಲ, ವಿಧವಾ ವೇತನ ಸೇರಿದಂತೆ ವಿವಿಧ ಮಾಶಾಸನಗಳು ಇಲ್ಲಿಂದಲೇ ಪಾವತಿಯಾಗುಂತೆ ಕ್ರಮ ಜರುಗಿಸಬೇಕು ಎಂದು ಪುರಸಭೆ ಅಧ್ಯಕ್ಷ ದೇವಪ್ಪ ಮ್ಯಾಗೇರಿ ಖಜಾನೆ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT