ಮೈಸೂರು: ಇಲ್ಲಿಯ ಚಾಮುಂಡಿ ಬೆಟ್ಟದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದರಿಂದ ಹಲವು ಎಕರೆಗಳಷ್ಟು ಅರಣ್ಯ ಪ್ರದೇಶ ನಾಶವಾಗಿದೆ.

ಮೈಸೂರು ತಾಲ್ಲೂಕಿನ ಉತ್ತನಹಳ್ಳಿ ಮಾರ್ಗದಲ್ಲಿ ಬರುವ ಬೆಟ್ಟದ ಪ್ರದೇಶ ಹಾಗೂ ಲಲಿತಾದ್ರಿಪುರದ ಭಾಗದಲ್ಲಿ ಮಧ್ಯಾಹ್ನ ೧೨.೩೦ರ ಸುಮಾರಿನಲ್ಲಿ ಅರಣ್ಯದ ಹುಲ್ಲುಗಾವಲು ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ಎಲ್ಲೆಡೆ ವ್ಯಾಪಿಸಿತು. ಬೆಟ್ಟದ ಅರಣ್ಯದ ಪ್ರತ್ಯೇಕ ಮೂರು ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟವಾಗಿ ಹೊಗೆಯಾಡುತ್ತಿತ್ತು. ಇದನ್ನು ಗಮನಿಸಿದ ಚಾಮುಂಡಿಬೆಟ್ಟ ಗ್ರಾಮಸ್ಥರು ಮತ್ತು ಪೊಲೀಸರು ಬೆಂಕಿ ನಂದಿಸಲು ಹೋದಾಗ, ಅದರ ಕೆನ್ನಾಲಿಗೆ ಎತ್ತರಕ್ಕೆ ಚಿಮ್ಮಿ ಎಲ್ಲೆಡೆ ಆವರಿಸಿದ್ದರಿಂದ ಸ್ಥಳದಿಂದ ಕಾಲ್ಕಿತ್ತರು.

ನಗರದ ವಿವಿಧೆಡೆ ಬೆಂಕಿ ಅನಾಹುತ ಸಂಭವಿಸಿದ್ದರಿಂದ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುವುದು ತಡವಾಯಿತು. ಕೆಲವರು ಹಸಿರು ಸೊಪ್ಪು ಹಿಡಿದು ಬೆಂಕಿ ನಂದಿಸಲು ಮಾಡಿದ ಪ್ರಯತ್ನ ವ್ಯರ್ಥವಾಯಿತು. ಬೆಟ್ಟದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಪ್ರವಾಸಿಗರು ಮತ್ತು ಚಾಮುಂಡಿ ಬೆಟ್ಟದ ಗ್ರಾಮ ಸ್ಥರಲ್ಲಿ ಆತಂಕ ಮನೆ ಮಾಡಿತು.

ಚಾಮುಂಡಿ ಬೆಟ್ಟಕ್ಕೆ ತೆರಳುವ ಪ್ರವಾಸಿಗರು ವಾಹನ ನಿಲ್ಲಿಸಿ ಬೆಂಕಿ ಅನಾಹುತ ನೋಡಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಪ್ರವಾಸಿಗರನ್ನು ಸ್ಥಳದಿಂದ ದೂರ ಕಳುಹಿಸಿದರು. ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳುವ ಸಾರಿಗೆ ಬಸ್ ಮತ್ತು ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಯಿತು. ಚಾಮುಂಡಿ ಬೆಟ್ಟಕ್ಕೆ ಪೂಜೆಗೆಂದು ತೆರಳಿ ದ್ದವರನ್ನು ಬೆಟ್ಟದ ಮೇಲೆ ಕೆಲ ಗಂಟೆಗಳ ಕಾಲ ಅಲ್ಲಿಯೇ ಇರಿಸಲಾಗಿತ್ತು.

ನಾಗರಹಳ್ಳಿ ನೀಲಗಿರಿ ನೆಡುತೋಪು ನಾಶ
ಚಿಕ್ಕಮಗಳೂರು: ತಾಲ್ಲೂಕಿನ ಕಳಸಾಪುರ ಸಮೀಪದ ನಾಗರಹಳ್ಳಿಯ ಸಾಮಾಜಿಕ ಅರಣ್ಯಕ್ಕೆ ಮಂಗಳವಾರ ಕಾಳ್ಗಿಚ್ಚು ತಗುಲಿ ನೂರಾರು ಎಕರೆ ನೀಲಗಿರಿ ನೆಡುತೋಪು ನಾಶವಾಗಿದೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಾಣಿಸಿಕೊಂಡ ಕಾಳ್ಗಿಚ್ಚಿನಿಂದಾಗಿ ಅಪಾರ ಪ್ರಮಾಣದ ಸಸ್ಯಸಂಪತ್ತು ನಾಶವಾಗಿದೆ. ವಲಯ ಅರಣ್ಯಾಧಿಕಾರಿ ಅಜೀಜ್ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಮಾಡಿದರು.

ಬಿಸಿಲಿನ ತಾಪಕ್ಕೆ ಬೆಂಕಿ ಇನ್ನಷ್ಟು ರಭಸವಾಗಿ ಹೊತ್ತಿ ಉರಿಯಲಾರಂಭಿಸಿತು. ಸಂಜೆ ವೇಳೆಗೆ ಸ್ವಲ್ಪಮಟ್ಟಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದೇ ಅರಣ್ಯಕ್ಕೆ ನಾಗರಹಳ್ಳಿ ಸಮೀಪ 20 ದಿನಗಳ ಹಿಂದೆ ಬೆಂಕಿ ಬಿದ್ದಿದ್ದು, ಹತ್ತಾರು ಎಕರೆ ನೀಲಗಿರಿ ನೆಡುತೋಪು ಮತ್ತು ಕುರುಚಲು ಕಾಡು ನಾಶವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.