ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಕ್ಕೊಟ್ಟುನಲ್ಲಿ 13 ಅಂಗಡಿಗಳಿಗೆ ಬೆಂಕಿ

ಬಂಟಿಂಗ್ಸ್ ವಿವಾದ: ಕಲ್ಲು ತೂರಾಟ
Last Updated 26 ಫೆಬ್ರುವರಿ 2015, 19:39 IST
ಅಕ್ಷರ ಗಾತ್ರ

ಉಳ್ಳಾಲ: ಬಂಟಿಂಗ್ಸ್ ಹಾಕುವುದಕ್ಕೆ ಸಂಬಂಧಿಸಿ­ದಂತೆ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆ ರಸ್ತೆ ಬದಿಯ 13 ಅಂಗಡಿಗಳಿಗೆ ಬೆಂಕಿ ಹಚ್ಚುವ ಮೂಲಕ ಕೊನೆಗೊಂಡ ಘಟನೆ ಉಳ್ಳಾಲದ ತೊಕ್ಕೊಟ್ಟಿನಲ್ಲಿ ಗುರುವಾರ ನಡೆದಿದೆ.

ತೊಕ್ಕೊಟ್ಟು ಜಂಕ್ಷನ್‌ನಲ್ಲಿ ರೈಲ್ವೆ ಹಳಿ ಸಮೀಪ ಇದ್ದಂತಹ 13 ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿ­ಸಿದೆ. ಇದಕ್ಕೆ ಮೊದಲು ಕೆ.ಸಿ.ರೋಡ್‌ ಸಮೀಪ ಎರಡು ತಂಡಗಳ ನಡುವಣ ಘರ್ಷಣೆಯಲ್ಲಿ ಮೂವರು ಪೊಲೀಸರು ಗಾಯ­ಗೊಂಡಿದ್ದಾರೆ.

ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಕೆ.ಸಿ.ರೋಡ್‌ ಜಂಕ್ಷನ್‌ನಲ್ಲಿ ಬುಧವಾರ ರಾತ್ರಿ ತಂಡವೊಂದು ಬಂಟಿಂಗ್ಸ್ ಹಾಗೂ ಧ್ವಜಗಳನ್ನು ಕಟ್ಟು­ತ್ತಿತ್ತು. ಇದನ್ನು ವಿರೋಧಿಸಿದ ಗುಂಪೊಂದು ಸ್ಥಳದಲ್ಲಿದ್ದ ದಾರಿದೀಪ­ಗಳನ್ನು ಆರಿಸಿ ಸೋಡಾ ಬಾಟಲಿ ಸಹಿತ ಕಲ್ಲು ತೂರಾಟ ನಡೆಸಿತ್ತು. ಇದರಿಂದ ಸ್ಥಳ­ದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.  ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ ಕಾರೊಂದು ಜಖಂಗೊಂಡಿತು.

ಕಾಸರಗೋಡು–ಮಂಗಳೂರು ಹೆದ್ದಾರಿಯಲ್ಲಿ ಸಂಚರಿ­ಸುವ ವಾಹನಗಳಿಗೂ ತೊಂದರೆ ಉಂಟಾಯಿತು. ಸ್ಥಳಕ್ಕೆ ಧಾವಿಸಿದ ಉಳ್ಳಾಲ ಠಾಣೆಯ ಪೊಲೀಸ್‌ ಸಿಬ್ಬಂದಿ ಚಂದ್ರ ನಾಯ್ಕ್, ಕಮಾಲಾಕ್ಷ, ಎಎಸ್‌ಐ ಮೋಹನ್ ದಾಸ್ ಅವರು ಕಲ್ಲು ತೂರಾಟದಿಂದ ಗಾಯಗೊಂಡರು. ಸ್ಥಳದಲ್ಲಿದ್ದ ದಿನೇಶ್‌, ಮಾಧವ ಹಾಗೂ ಕೆಲವು ಕೆಎಸ್‌ಆರ್‌ಪಿ ಸಿಬ್ಬಂದಿಗೂ ಗಾಯಗಳಾಗಿವೆ.

ಇದಾದ ಕೆಲವೇ ಗಂಟೆಗಳಲ್ಲಿ ಗುರುವಾರ ನಸುಕಿನಲ್ಲಿ ತೊಕ್ಕೊಟ್ಟಿನಲ್ಲಿ ಬೀದಿ ಬದಿ ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. 
ನಿಷೇಧಾಜ್ಞೆ ಜಾರಿ: ಉಳ್ಳಾಲದಲ್ಲಿ ಗುರುವಾರ ಬೆಳಿಗ್ಗೆ 8ರಿಂದ ಸೆಕ್ಷನ್ 144ರಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ಸಚಿವ ಖಾದರ್ ಭೇಟಿ: ಘಟನಾ ಸ್ಥಳಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ಗುರುವಾರ ಭೇಟಿ ನೀಡಿದರು. ತೊಕ್ಕೊಟ್ಟು ಭಾಗದಲ್ಲಿ ಎರಡು ಸಿ.ಸಿ ಟಿ.ವಿ.ಗಳಿದ್ದು, ಆರೋಪಿಗ­ಳನ್ನು ಶೀಘ್ರವೇ ಪತ್ತೆಹಚ್ಚುವಂತೆ ಪೊಲೀಸರಿಗೆ ನಿರ್ದೇಶಿಸಲಾಗಿದೆ ಎಂದರು. ಇಲ್ಲಿನ ವ್ಯಾಪಾರಿಗಳಿಗೆ ಸದ್ಯ ತಾತ್ಕಾ­ಲಿಕ, ಮುಂದಿನ ದಿನಗಳಲ್ಲಿ ಶಾಶ್ವತ ಅಂಗಡಿಗಳನ್ನು ನಿರ್ಮಿಸಿಕೊಡ­ಲಾಗು­ವುದು ಎಂದೂ ಸಚಿವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT