ಮಂಗಳೂರು: ಲಲಿತ ಕಲೆಗಳಲ್ಲಿ ವೈವಿ ಧ್ಯಮಯ ಆಸಕ್ತಿ ಇರುವ ಕಲಾವಿದರ ಅಭಿರುಚಿಯನ್ನು ತಣಿಸಬಲ್ಲ ಸಾಮರ್ಥ್ಯ ಯಕ್ಷಗಾನಕ್ಕೆ ಇದೆ ಎಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ ಅವರು ಹೇಳಿದರು.

ಬೋಳೂರು ದೋಗ್ರ ಪೂಜಾರಿ ಸ್ಮಾರಕ ಯಕ್ಷಗಾನ ಕೇಂದ್ರದ ವತಿ ಯಿಂದ ಯಕ್ಷಗಾನ ಕ್ಷೇತ್ರದ ಹಿರಿಯ ಹಾಸ್ಯ ಕಲಾವಿದ ಪೆರುವೊಡಿ ನಾರಾ ಯಣ ಭಟ್ ಅವರಿಗೆ ಬೋಳೂರು ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ರಾತ್ರಿ ಪೂರ್ತಿ ನಡೆಯುವ ಯಕ್ಷ ಗಾನ ಕಾರ್ಯಕ್ರಮದಲ್ಲಿ ಕಲಾರಸಿಕರಿಗೆ ಎಲ್ಲ ರೀತಿಯ ರಸವನ್ನೂ ಅಸ್ವಾದಿಸುವ ಅವಕಾಶ ಇರುತ್ತದೆ. ಕೋಳ್ಯೂರು ರಾಮ ಚಂದ್ರ ರಾಯರ ದಮಯಂತಿ ಪಾತ್ರ ವನ್ನು ನೋಡುವ ಕಣ್ಣಲ್ಲಿ ನೀರು ಹಾಕುವ ಸಾವಿರಾರು ಪ್ರೇಕ್ಷಕರಿದ್ದಾರೆ. ಅದೇ ರೀತಿ ಹಾಸ್ಯ, ವೀರ, ಶೃಂಗಾರ ರಸ, ನಾಟ್ಯ, ಗಾನವನ್ನು ಆಸ್ವಾದಿಸುವ ಅವಕಾಶವಿದೆ. ಹೀಗೆ ರಾತ್ರಿ ಪೂರಾ ನಡೆಸುವ ಮತ್ತೊಂದು ಕಲೆ ಜಗತ್ತಿನಲ್ಲಿಯೇ ಇಲ್ಲ ಎಂದು ಅವರು ಹೇಳಿದರು.

ಹಾಸ್ಯವನ್ನು ಅಶ್ಲೀಲಗೊಳಿಸಿ ಹೇಳುವ ಸಂದರ್ಭಗಳೇ ಹೆಚ್ಚು. ಆದರೆ ಪೆರುವೊಡಿ ನಾರಾಯಣ ಭಟ್ ಅವರು ಹಾಸ್ಯವನ್ನು ಸುಸಂಸ್ಕೃತ ರೀತಿಯಲ್ಲಿ ರಂಗಸ್ಥಳದಲ್ಲಿ ಪ್ರಸ್ತುತಪಡಿಸುತ್ತಿದ್ದರು ಎಂದು ಅವರು ಹೇಳಿದರು.

ಅಭಿನಂದನ ಭಾಷಣ ಮಾಡಿದ ಸರ್ಪಂಗಳ ಈಶ್ವರ ಭಟ್ ಮಾತನಾಡಿ, ಪೆರುವೊಡಿ ನಾರಾಯಣ ಭಟ್ಟರ ವಿಕ್ರ ಮಾದಿತ್ಯನ ಪಾತ್ರವನ್ನು ಸ್ಮರಿಸಿಕೊಂ ಡರು. ಸುರತ್ಕಲ್ ಮೇಳದಲ್ಲಿದ್ದಾಗ ಅವ ರು ವಿಕ್ರಮಾದಿತ್ಯನ ಪಾತ್ರಕ್ಕೆ ಹೊಸತನ ವನ್ನೇ ತುಂಬಿದ್ದರು. ಹಾಸ್ಯ ರಸಕ್ಕೆ ಹೊಸ ಆಯಾಮವನ್ನು ನೀಡಿದ್ದರಿಂದಲೇ ಅವ ರಿಗೆ ಗೌರವ ಸನ್ಮಾನಗಳು ಸಂದಿವೆ ಎಂದರು.

ಹತ್ತು ಸಾವಿರ ರೂಪಾಯಿ ಗೌರವ ನಿಧಿ, ಶಾಲು, ಫಲಕಗಳನ್ನು ನೀಡಿ ನಾರಾಯಣ ಭಟ್ಟರನ್ನು ಗೌರ ವಿಸಲಾಯಿತು. ಅವಧಾನಿ ಡಾ. ಬಾಲ ಕೃಷ್ಣ ಭಾರದ್ವಾಜ ಕಬ್ಬಿನಾಲೆ, ತುಳುಕೂ ಟದ ಚಂದ್ರ ಹಾಸ ದೇವಾಡಿಗ, ಆಕಾಶ ವಾಣಿಯ ಡಾ. ಸದಾನಂದ ಪೆರ್ಲ, ರಾಮಚಂದ್ರ ಬೈಕಂ ಪಾಡಿ, ದಾಮೋ ದರ ನಿಸರ್ಗ, ಸುಧಾಕರ ರಾವ್ ಪೇಜಾ ವರ, ಮಾಜಿ ಶಾಸಕ ಕುಂಬಳೆ ಸುಂದರ ರಾವ್, ವಿ.ಜಿ. ಪಾಲ್ ಇದ್ದರು. ದಯಾನಂದ ಕಟೀಲ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.